ಬ್ಯಾಂಕ್‌ಗಳಿಗೆ ಕೇಂದ್ರದಿಂದ 22 ಸಾವಿರ ಕೋಟಿ ರು.

Written By:
Subscribe to Oneindia Kannada

ನವದೆಹಲಿ, ಜುಲೈ, 19: ಕೇಂದ್ರ ಸರ್ಕಾರ ಸಾರ್ವಜನಿಕ ಸ್ವಾಮ್ಯದ 13 ಬ್ಯಾಂಕ್ ಗಳಿಗೆ ಮಂಗಳವಾರ 22 ಸಾವಿರದ 915 ಕೋಟಿ ರು. ಹಂಚಿಕೆ ಮಾಡುತ್ತೇನೆ ಎಂದು ತಿಳಿಸಿದೆ.

ಬ್ಯಾಂಕ್ ಗಳ ಬಂಡವಾಳ ಸಂರಚನೆಯಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ತಿಳಿಸಿದೆ. ವಾರ್ಷಿಕ ಹಣದ ವಹಿವಾಟಿನ ಆಧಾರದ ಮೇಲೆ ಬ್ಯಾಂಕ್ ಗಳು ಹಣವನ್ನು ಪಡೆದುಕೊಳ್ಳಲಿವೆ. ವಿವಿಧ ಬ್ಯಾಂಕುಗಳು ನಾಲ್ಕು ವರ್ಷಗಳ ಅವಧಿಗೆ 70 ಸಾವಿರ ಕೋಟಿ ರೂಪಾಯಿ ಪಡೆದುಕೊಳ್ಳಲಿವೆ.[ರಿಸರ್ವ್ ಬ್ಯಾಂಕಿಗೆ ನೂತನ ಗವರ್ನರ್: ರೇಸ್ ನಲ್ಲಿರುವ 6 ಪ್ರಮುಖರು]

bank

ಬ್ಯಾಂಕ್ ಗಳ ಮರುಬಂಡವಾಳೀಕರಣಕ್ಕೆ ಈ ಬಾರಿಯ ಹಣಕಾಸು ವರ್ಷದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ 25 ಸಾವಿರ ಕೋಟಿ ರೂಪಾಯಿ ಮೀಸಲಿಡುತ್ತೇನೆ ಎಂದು ಹೇಳಿದ್ದರು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ 7 ಸಾವಿರದ 575 ಕೋಟಿ ರು., ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 2 ಸಾವಿರದ 816 ಕೋಟಿ ರು. ಬ್ಯಾಂಕ್ ಆಫ್ ಇಂಡಿಯಾಗೆ 1 ಸಾವಿರದ 784 ಕೋಟಿ ರು. ಸಿಗಲಿದೆ.[ಅಂಚೆ ಕಚೇರಿಗಳಿಂದ ಪೇಮೆಂಟ್ ಬ್ಯಾಂಕ್ ಸ್ಥಾಪನೆ]

ಉಳಿದಂತೆ ಅಲಹಾಬಾದ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಯಾ, ಕೆನರಾ ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ದೇನಾ ಬ್ಯಾಂಕ್, ಸಿಂಡೀಕೆಟ್ ಬ್ಯಾಂಕ್, ಯುಕೋ ಬ್ಯಾಂಕ್, ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಸಹ ಹಣ ಪಡೆದುಕೊಳ್ಳಲಿವೆ.

ಸದ್ಯ ಘೊಷಣೆ ಮಾಡಿರುವ ಹಣವನ್ನು ಬ್ಯಾಂಕ್ ಗಳಿಗೆ ಹಂತ ಹಂತವಾಗಿ ನೀಡಲಾಗುವುದು. ಆರ್ಥಿ ಅಭಿವೃದ್ಧಿಯ ಆಧಾರದ ಮೇಲೆ ಉಳಿದ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೇಂದ್ರ ಸರ್ಕಾರ ಈ ಹೇಳಿಕೆ ನೀಡುತ್ತಿದ್ದಂತೆ ಸಾರ್ವಜನಿಕ ವಲಯಯ ಬ್ಯಾಂಕ್ ಗಳ ಷೇರುಗಳಲ್ಲಿ ಏರಿಕೆ ಕಂಡುಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Union Government on Tuesday allocated Rs 22,915 crore as capital infusion in 13 public sector banks. The largest chunk of Rs 7,575 crore was released for SBI, followed by Rs 3,101 crore for Indian Overseas Bank and Rs 2,816 crore for Punjab National Bank, a press release said.
Please Wait while comments are loading...