ಎಸ್‌ಬಿಐನಲ್ಲಿ ವಿಲೀನಗೊಳ್ಳುತ್ತಿರುವ 5 ಬ್ಯಾಂಕ್‌ಗಳು ಯಾವವು?

Written By:
Subscribe to Oneindia Kannada

ನವದೆಹಲಿ, ಜೂನ್, 16: ಬ್ಯಾಂಕ್ ನೌಕರರ ವಿರೋಧದ ನಡುವೆಯೂ ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ (ಎಸ್‌ಬಿಐ) ಐದು ಸಹವರ್ತಿ ಬ್ಯಾಂಕ್‌ಗಳ ವಿಲೀನ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ತಾತ್ವಿಕ ಒಪ್ಪಿಗೆ ನೀಡಿದೆ.

ಸಾಲ ಮರುಪಾವತಿಯಲ್ಲಿನ ಸಮಸ್ಯೆ ಪರಿಣಾಮ ಸಹವರ್ತಿ ಬ್ಯಾಂಕ್ ಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಇದರ ನಿವಾರಣೆಗೆ ವಿಲೀನ ಪರಿಹಾರ ಎಂಬ ಆಧಾರದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.[ಎಸ್‌ಬಿಐನಲ್ಲಿ ಅರ್ಜಿ ಸಲ್ಲಿಸಲು ಜೂನ್ 20 ಕೊನೆಯ ದಿನಾಂಕ]

sbi

ವಿಲೀನಗೊಳ್ಳುತ್ತಿರುವ ಬ್ಯಾಂಕ್ ಗಳು ಯಾವವು?
* ಸ್ಟೇಟ್ ಬ್ಯಾಂಕ್ ಬಿಕನೇರ್ ಮತ್ತು ಜೈಪುರ
* ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್
* ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ
* ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
* ಮತ್ತು ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್[ಎಟಿಎಂ ಪಿನ್ ಮರೆತುಹೋಗಿದೆಯಾ? ಮೊಬೈಲ್ ಒಟಿಪಿ ನೋಡಿ]

ಇದರ ಜತಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ಭಾರತೀಯ ಮಹಿಳಾ ಬ್ಯಾಂಕ್ ನ್ನು ಸಹ ವಿಲೀನ ಮಾಡುವ ಪ್ರಸ್ತಾವನೆಗೆ ಒಪ್ಪಿಗೆ ಮೊದಲೇ ಸಿಕ್ಕಿತ್ತು. ಐದು ಸಹವರ್ತಿ ಬ್ಯಾಂಕ್‌ಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕನ್ನು (ಬಿಎಂಬಿ) ತನ್ನಲ್ಲಿ ವಿಲೀನಗೊಳಿಸಿಕೊಳ್ಳುವುದಕ್ಕೆ ಎಸ್‌ಬಿಐ ಆಡಳಿತ ಮಂಡಳಿಯು ಅನುಮತಿ ನೀಡಿತ್ತು. ಸಹವರ್ತಿ ಬ್ಯಾಂಕ್‌ಗಳ ಆಡಳಿತ ಮಂಡಳಿಗಳು ಕೂಡ ವಿಲೀನ ಪರ ನಿರ್ಧಾರ ಕೈಗೊಂಡಿದ್ದವು. ಆದರೆ ಸಹವರ್ತಿ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿದ್ದರು.[ಒಟಿಪಿ ಎಂದರೇನು? ಪಡೆದುಕೊಳ್ಳುವುದು ಹೇಗೆ?]

ಯಾಕಾಗಿ ವಿಲೀನ?
ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಹೆಚ್ಚಿನ ಬಂಡವಾಳ ಒದಗಿಸುವುದು. ಸಣ್ಣ ಬ್ಯಾಂಕ್‌ಗಳನ್ನು ದೊಡ್ಡ ಬ್ಯಾಂಕ್‌ನಲ್ಲಿ ವಿಲೀನಗೊಳಿಸಿ ಏಕರೂಪದ ವ್ಯವಸ್ಥೆ ಜಾರಿ ಮಾಡುವುದು ಈ ನೂತನ ಕ್ರಮದ ಹಿಂದಿರುವ ಉದ್ದೇಶ. ಕೈಗಾರಿಕಾ ಕ್ಷೇತ್ರಕ್ಕೆ ಇದು ಹೆಚ್ಚಿನ ಕೊಡುಗೆ ನೀಡಲಿದೆ ಎಂದು ಭಾವಿಸಲಾಗಿದೆ.

ದೇಶದ ಅತಿ ದೊಡ್ಡ ಬ್ಯಾಂಕ್‌ನಲ್ಲಿ 5 ಸಹವರ್ತಿ ಬ್ಯಾಂಕ್‌ಗಳ ವಿಲೀನ ಮಾಡಿದರೆ ಎಲ್ಲರಿಗೂ ಲಾಭವಾಗುತ್ತದೆ ಎಂದು ಎಸ್‌ಬಿಐ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಅವರು ಪ್ರತಿಕ್ರಿಯಿಸಿದ್ದಾರೆ.[ಎಟಿಎಂ ಮೂಲಕ ಹಣ ಡಿಪಾಸಿಟ್ ಮಾಡೋದು ಹೇಗೆ?]

ವಿಶ್ವದ ಟಾಪ್ 50 ಬ್ಯಾಂಕ್‌ಗಳ ಸಾಲಿನಲ್ಲಿ ಭಾರತದ ಯಾವುದೇ ಬ್ಯಾಂಕ್‌ ಸ್ಥಾನ ಪಡೆದಿಲ್ಲ. ಈ ವಿಲೀನದ ಮೂಲಕ ಭಾರತದ ಬ್ಯಾಂಕ್‌ಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಲಿದ್ದು, ನಿರ್ವಹಣಾ ವೆಚ್ಚದ ಮೇಲೂ ಕಡಿತ ಮಾಡಬಹುದು ಎಂದು ಭಟ್ಟಾಚಾರ್ಯ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Union Cabinet approved the merger of five associate banks -- State Bank of Bikaner and Jaipur, State Bank of Travancore, State Bank of Patiala, State Bank of Mysore and State Bank of Hyderabad as well as Bharatiya Mahila Bank with State Bank of India.
Please Wait while comments are loading...