ಬಜೆಟ್ ನಲ್ಲಿ ಘೋಷಣೆ: ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಇಳಿಕೆ?
ನವದೆಹಲಿ, ಜನವರಿ 23: ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಲಿರುವ ಕೇಂದ್ರ ಬಜೆಟ್ ನಲ್ಲಿ ಇಂಧನ ಬೆಲೆ ಇಳಿಕೆಗೆ ಹೆಚ್ಚಿನ ಒತ್ತು ನೀಡುವಂತೆ ತೈಲ ಸಚಿವಾಲಯದಿಂದ ಮನವಿ ಸಲ್ಲಿಸಲಾಗಿದೆ.
2018 ಹಾಗೂ 2019ರಲ್ಲಿ ಸಾಲು ಸಾಲು ಚುನಾವಣೆ ಎದುರಿಸುತ್ತಿರುವ ಮೋದಿ ಅವರ ಮೇಲೆ ಪೆಟ್ರೋಲ್ ಹಾಗೂ ಡೀಸೆಲ್ ದರ ಇಳಿಸುವಂತೆ ತುಂಬಾ ಒತ್ತಡವಿದೆ. ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲೇ ಭಾರತದಲ್ಲಿ ಇಂಧನ ಬೆಲೆ ಅತ್ಯಧಿಕವಾಗಿದೆ.
ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ ಸರಾಸರಿ 72.73 ರುಪಾಯಿ(1.13 ಡಾಲರ್), ಡೀಸೆಲ್ ಬೆಲೆ 63.01 ರುಪಾಯಿಯಷ್ಟಿದೆ.

ಬೆಲೆ ಇಳಿಕೆ ಸಾಧ್ಯವೇ?: ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಫೆಬ್ರವರಿ 01ರಂದು ಮಂಡಿಸುವ ಬಜೆಟ್ ನಲ್ಲಿ ತಗ್ಗಿಸಲು ಸಾಧ್ಯವಿದೆ. ಸರಿ ಸುಮಾರು 5.2 ಟ್ರಿಲಿಯನ್ ರುಪಾಯಿ (81 ಬಿಲಿಯನ್ ಡಾಲರ್) ಆದಾಯವನ್ನು 2016/17ರ ಅವಧಿಯಲ್ಲಿ ಪೆಟ್ರೋಲಿಯಂ ಕ್ಷೇತ್ರದಿಂದ ಸರ್ಕಾರ ಪಡೆದುಕೊಂಡಿದೆ.
ಆದರೆ, 2014 ರಿಂದ 2016ರ ಅವಧಿಯಲ್ಲಿ ಸುಮಾರು 9 ಬಾರಿ ಅಬಕಾರಿ ಸುಂಕ ಹೆಚ್ಚಿಸಲಾಗಿದೆ. ಸರಕು ಸೇವಾ ತೆರಿಗೆ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್, ಜೆಟ್ ಇಂಧನ ಹಾಗೂ ನೈಸರ್ಗಿಕ ಅನಿಲವನ್ನು ತರುವ ಸಚಿವಾಲಯದ ಪ್ರಯತ್ನ ವಿಫಲವಾಗಿದೆ. ಸುಮಾರು 650 ಕಿಲೋಮೀಟರ್ ಗಳಷ್ಟು ದೂರದ ಇಂಧನ ಪೈಪ್ ಲೈನ್ ಅಳವಡಿಕೆ ಸದ್ಯಕ್ಕೆ ಸಚಿವಾಲಯದ ಆಶಾದಾಯಕ ಯೋಜನೆಯಾಗಿದೆ.












Click it and Unblock the Notifications