ಕೇಂದ್ರ ಬಜೆಟ್ 2016: ಯಾವುದು ಅಗ್ಗ? ಯಾವುದು ತುಟ್ಟಿ?

Posted By:
Subscribe to Oneindia Kannada

ನವದೆಹಲಿ, ಫೆ. 29: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ 2016-17ನೇ ಸಾಲಿನ ಪ್ರಧಾನ ಆಯವ್ಯಯ ಪತ್ರವನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ (ಫೆಬ್ರವರಿ 29) ಸಂಸತ್ತಿನಲ್ಲಿ ಮಂಡಿಸಿದರು.

ಮೊದಲ ಮೂರು ವರ್ಷಗಳ ಕಾಲ ತೆರಿಗೆ ಕಟ್ಟಬೇಕಾಗಿಲ್ಲ, ಸ್ಟಾರ್ಟ್ ಅಪ್ ಗಳಿಗೆ ಶೇ 100ರಷ್ಟು ತೆರಿಗೆ ವಿನಾಯಿತಿ ಘೋಷಣೆ. ಐಷಾರಾಮಿ ವಸ್ತು ಮತ್ತು ಸೇವೆಗಳ ಮೇಲೆ ತೆರಿಗೆ ಹೆಚ್ಚಳ ಮಾಡಿದ್ದರೆ ಮೂಲಸೌರ್ಕಯಕ್ಕೆ ವಿನಾಯಿತಿ ತೋರಿಸಿದ್ದಾರೆ. ವಿವರಗಳು ಕೆಳಕಂಡಂತಿವೆ: [LIVE: ಕೇಂದ್ರ ಬಜೆಟ್ ಮಂಡನೆ ವಿವರ, ಮುಖ್ಯಾಂಶ]

Jaitley

ಏರಿಕೆ:

* ಐಷಾರಾಮಿ ಕಾರುಗಳ ಮೇಲೆ ಶೇ 4 ರಷ್ಟು ಪೆಟ್ರೋಲ್, ಡೀಸೆಲ್ ಸೆಸ್ ಹೆಚ್ಚಳ
* ಐಷಾರಾಮಿ ಸರಕು ಹಾಗೂ ಎಸ್ ಯುವಿ ಕಾರಿನ ಮೇಲೆ ಶೇ1ರಷ್ಟು ತೆರಿಗೆ.
* ಬೀಡಿ ಬಿಟ್ಟು ಎಲ್ಲಾ ತಂಬಾಕು ಉತ್ಪನ್ನಗಳ ಬೆಲೆ ಏರಿಕೆ. ತಂಬಾಕು ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಶೇ 10 ರಿಂದ 15ರಷ್ಟು ಏರಿಕೆ. ಅಂದರೆ, ಸಿಗರೇಟು, ಗುಟ್ಕಾ ಬೆಲೆ ಏರಿಕೆ. [ಫನ್ನಿ ಟ್ವೀಟ್ಸ್ : ಬೀಡಿ ಸೇದೋಣ, ಗುಂಡು ಹಾಕೋಣ]

* ಬ್ರ್ಯಾಂಡೆಡ್ ಬಟ್ಟೆಗಳು. ಶರ್ಟು, ಪ್ಯಾಂಟು, ಚೂಡಿದಾರು ಮತ್ತಿತ್ತರ ಡ್ರೆಸ್ ಮೆಟಿರಿಯಲ್ಸ್.
* ಚಿನ್ನಾಭರಣ, ವಜ್ರಗಳು ಮತ್ತಷ್ಟು ದುಬಾರಿ.
* ಎಟಿಎಂನಿಂದ ಹಣ ಪಡೆಯುವುದು
* ಜಿಮ್, ಹೊಟೇಲ್ ರೂಮ್, ರೇಡಿಯೋ ಟ್ಯಾಕ್ಸಿ, ಜೀವ ವಿಮೆ.
* ಏಕ್ಸ್ ಪ್ರೆಸ್ ರೈಲು ಹಾಗೂ ವಿಮಾನಯಾನ ಪ್ರಯಾಣ ದರ ಏರಿಕೆ
* ಮಿನರಲ್ ವಾಟರ್, ಸಕ್ಕರೆ ಅಂಶವುಳ್ಳ ಪಾನೀಯ ಬೆಲೆ ದುಬಾರಿ

Union Budget 2016 LIVE What became Expensive and What became Cheap

[ತೆರಿಗೆ ಉಳಿಸಲು ಎಚ್‌ಡಿಎಫ್‌ಸಿ ಯುಲಿಪ್‌ನಲ್ಲಿ ಹೂಡಿಕೆ ಮಾಡಿ]
ಇಳಿಕೆ:
* 60 ಚದರ ಮೀಟರ್ ತನಕದ ಮನೆ ನಿರ್ಮಾಣದ ಮೇಲೆ ಸೇವಾ ತೆರಿಗೆ ವಿನಾಯಿತಿ.
* ಇಪಿಎಫ್ ಒ ನೀಡುವ ಸೇವೆಗಳಿಗೆ ಸೇವಾ ತೆರಿಗೆ ಅನ್ವಯವಾಗುವುದಿಲ್ಲ.
* ಮದ್ಯದ ಮೇಲೆ ಯಾವುದೇ ಅಬಕಾರಿ ಸುಂಕ ಹೆಚ್ಚಳವಿಲ್ಲ.
* ಡಯಾಲಿಸೀಸ್ ಯಂತ್ರಗಳ ಮೇಲಿನ ತೆರಿಗೆ ಇಳಿಕೆ.
* ಸಣ್ಣ ತೆರಿಗೆದಾರರಿಗೆ ರಿಲೀಫ್, ಮನೆ ಬಾಡಿಗೆ ಭತ್ಯೆ ಮಿತಿ ವಾರ್ಷಿಕ 24 ಸಾವಿರ ರು ನಿಂದ 60, 000 ರು ಗೆ ಹೆಚ್ಚಳ.
* 50 ಲಕ್ಷ ರು ಮೌಲ್ಯದ ಮನೆ ಖರೀದಿಸಿದರೆ 50 ಸಾವಿರ ರು ತನಕ ವಿನಾಯಿತಿ.

(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Changes announced in Union Budget 2016 in tax rates on specific items will impact prices of goods that you use everyday. India Finance minister Arun Jaitley tabled budget for 3rd time.
Please Wait while comments are loading...