ಉಬರ್ ನಿಂದ ಹಾರಾಡುವ ಕ್ಯಾಬ್ ಸೇವೆ, ಐದು ದೇಶಗಳಲ್ಲಿ ಭಾರತವೂ ಒಂದು

ಉಬರ್ ನಿಂದ ಶೀಘ್ರದಲ್ಲೇ ಭಾರತದಲ್ಲಿ ಹಾರಾಡುವ ಕ್ಯಾಬ್ ಸೇವೆ ಆರಂಭವಾಗಲಿದೆ. ಇಂಥ ಹಾರಾಟ ಸೇವೆಗೆ ಗುರುವಾರದಂದು ಉಬರ್ ಭಾರತವನ್ನು ಕೂಡ ಆಯ್ಕೆ ಮಾಡಿಕೊಂಡಿದೆ. ಉಬರ್ ಒಟ್ಟು ಐದು ದೇಶಗಳಲ್ಲಿ ಹಾರಾಟ ಕ್ಯಾಬ್ ಸೇವೆ ನೀಡಲು ನಿರ್ಧರಿಸಿದ್ದು, ಆ ಪಟ್ಟಿಯಲ್ಲಿ ಭಾರತ ಕೂಡ ಇದೆ. ಮುಂದಿನ ಐದು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಉಬರ್ ಏರ್ ಸಿಟಿ ಆರಂಭವಾಗಲಿದೆ.

ಸಾಧಕ-ಬಾಧಕಗಳನ್ನೆಲ್ಲ ಗಣನೆಗೆ ತೆಗೆದುಕೊಂಡಿರುವ ಉಬರ್, ಜಪಾನ್, ಭಾರತ, ಆಸ್ಟ್ರೇಲಿಯಾ, ಬ್ರೆಜಿಲ್ ಹಾಗೂ ಫ್ರಾನ್ಸ್ ದೇಶಗಳಲ್ಲಿ ಹಾರಾಟದ ಕ್ಯಾಬ್ ಸೇವೆ ಒದಗಿಸಲು ತೀರ್ಮಾನ ಕೈಗೊಂಡಿದೆ. ಈ ವಿಚಾರವನ್ನು ಟೊಕಿಯೋದಲ್ಲಿ ನಡೆದ ಮೊದಲ ಉಬರ್ ಎಲಿವೇಟ್ ಏಷ್ಯಾ ಪೆಸಿಫಿಕ್ ಎಕ್ಸ್ ಪೋನಲ್ಲಿ ಘೋಷಣೆ ಮಾಡಿದೆ.

ಈಗ ಆಯ್ದುಕೊಂಡಿರುವ ಐದು ದೇಶಗಳಲ್ಲಿ ಒಂದು ನಗರವನ್ನು ಆಯ್ಕೆ ಮಾಡಿಕೊಂಡು, ಅಲ್ಲಿ ಹಾರಾಟ ಟ್ಯಾಕ್ಸಿ ಸೇವೆ ಆರಂಭಿಸಲಿದೆ. ಈಗ ಆರಿಸಿಕೊಳ್ಳಲಿರುವ ನಗರ ಅಂಥ ಮೂರನೇ ಪ್ರಯತ್ನ ಆಗಲಿದೆ. ಈಗಾಗಲೇ ಅಮೆರಿಕದ ಡಲ್ಲಾಸ್ ಮತ್ತು ಲಾಸ್ ಏಂಜಲೀಸ್ ನಲ್ಲಿ ಉಬರ್ ಇಂಥ ಸೇವೆ ಒದಗಿಸುತ್ತಿದೆ.

Uber planning to start flying cabs: India one of 5 shortlisted countries

ಮುಂಬೈ, ದೆಹಲಿ ಹಾಗೂ ಬೆಂಗಳೂರು ಜಗತ್ತಿನ ಬಹಳ ಕಿರಿದಾದ ನಗರಗಳು. ಕೆಲವೇ ಕಿಲೋಮೀಟರ್ ಸಾಗಲು ಸಹ ಗಂಟೆಗಟ್ಟಲೆ ಸಮಯ ಬೇಕಾಗುತ್ತದೆ. ಇಂಥ ಸಮಸ್ಯೆಯಿಂದ ಹೊರಬರುವುದಕ್ಕೆ ಉಬರ್ ಏರ್ ಸೇವೆ ಬಹಳ ಸಹಾಯಕ ಆಗಿರುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

ಮುಂದಿನ ಐದು ವರ್ಷಗಳಲ್ಲಿ ಈಗ ಅಂತಿಮಗೊಳಿಸಿರುವ ದೇಶದ ಉಬರ್ ಬಳಕೆದಾರರು ಬೇಡಿಕೆ ಆಧಾರದಲ್ಲಿ ಫ್ಲೈಯಿಂಗ್ ಕಾರ್ ನಲ್ಲಿ ಸಂಚರಿಸಬಹುದು. ಈ ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ವಾಹನ ತಯಾರಕರು, ರಿಯಲ್ ಎಸ್ಟೇಟ್ ಉದ್ಯಮದವರು ಹಾಗೂ ತಾಂತ್ರಿಕ ಪರಿಣತರ ಜತೆಗೆ ಉಬರ್ ಮಾತುಕತೆ ನಡೆಸಿದೆ.

ಹಾರುವ ಕಾರುಗಳಿಗೆ ಬೇಡಿಕೆ ಉಂಟಾಗುವುದನ್ನು ನಾವೀಗ ಊಹಿಸಬಹುದು. ಇದರಿಂದ ಕಿಷ್ಕಿಂದೆಯಂಥ ನಗರಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆ ಆಗುವುದು ಮಾತ್ರವಲ್ಲ, ದೂರದ ದ್ವೀಪಗಳು, ಬೆಟ್ಟ ಪ್ರದೇಶಗಳ ಸಂಚಾರಕ್ಕೆ ಸಹಾಯ ಆಗಲಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಹಾಗೂ ಪ್ರಾಕೃತಿಕ ವಿಕೋಪ ಪರಿಹಾರಕ್ಕೆ ಕೂಡ ಇದರಿಂದ ನೆರವಾಗಲಿದೆ ಎಂದು ಅಭಿಪ್ರಾಯ ಪಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+