ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸದೀಯ ಸಮಿತಿ ಪ್ರಶ್ನೆಗಳಿಗೆ ಉತ್ತರಿಸಲು ಟ್ವಿಟ್ಟರಿಗೆ 10 ದಿನ ಅವಕಾಶ

|
Google Oneindia Kannada News

ನವದೆಹಲಿ, ಮಾರ್ಚ್ 06 : ಸಂಸದೀಯ ಸಮಿತಿ ಮುಂದೆ ಹಾಜರಾಗುವಂತೆ ನೋಟಿಸ್ ನೀಡಿದ್ದರೂ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನ ಸಿಇಒ ಜಾಕ್ ಡೋರ್ಸೆ ಗೈರು ಹಾಜರಾಗಿದ್ದರು. ಬದಲಿಗೆ ಟ್ವಿಟ್ಟರ್ ನ ಸಾರ್ವಜನಿಕ ನಿಯಮಾವಳಿ ವಿಭಾಗದ ಮುಖ್ಯಸ್ಥರಾದ ಕಾಲಿನ್ ಕ್ರೊವೆಲ್ ಅವರು ಸಮಿತಿ ಮುಂದೆ ಹಾಜರಾಗಿ, ಸಮಿತಿಯ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಬಾಕಿ ಉಳಿದ ಪ್ರಶ್ನೆಗಲಿಗೆ ಉತ್ತರಿಸಲು 10 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಸಂಸದ ಅನುರಾಗ್ ಠಾಕೂರ್ ಹೇಳಿದರು.

ಟ್ವಿಟ್ಟರ್ ನಲ್ಲಿ ಬಲಪಂಥೀಯ ವಿಚಾರಗಳ ವಿರುದ್ಧವಾದ ಧೋರಣೆ ಇದೆ ಎಂದು ದೂರುಗಳು ಬಂದಿದ್ದವು. ನಾಗರಿಕರ ಮಾಹಿತಿ ಭದ್ರತೆ, ಸಾಮಾಜಿಕ ಮಾಧ್ಯಮಗಳ ಪಾತ್ರ ಕುರಿತಂತೆ ಅನುರಾಗ್ ಠಾಕೂರ್ ನೇತೃತ್ವದ ಸದನ ಸಮಿತಿಯು ಜಾಕ್ ಡೋರ್ಸೆಗೆ ಈ ಬಗ್ಗೆ ಅಭಿಪ್ರಾಯ ಕೇಳಿತ್ತು.

'ಬ್ರಾಹ್ಮಣರ ಪ್ರಭುತ್ವವನ್ನು ಹತ್ತಿಕ್ಕಿ' ಎಂದ ಟ್ವಿಟ್ಟರ್ ಸಿಇಒಗೆ ಟ್ವಿಟ್ಟರ್ ನಲ್ಲೇ ಗೂಸಾ!'ಬ್ರಾಹ್ಮಣರ ಪ್ರಭುತ್ವವನ್ನು ಹತ್ತಿಕ್ಕಿ' ಎಂದ ಟ್ವಿಟ್ಟರ್ ಸಿಇಒಗೆ ಟ್ವಿಟ್ಟರ್ ನಲ್ಲೇ ಗೂಸಾ!

ಯೂಥ್ ಫಾರ್ ಸೋಷಿಯಲ್ ಮೀಡಿಯಾ ಡೆಮಾಕ್ರಸಿ ಎಂಬ ಬಲಪಂಥೀಯ ಗುಂಪೊಂದು ಈಚೆಗೆ ಪ್ರತಿಭಟನೆ ನಡೆಸಿತ್ತು. ಆಡಳಿತಾರೂಢ ಬಿಜೆಪಿ ಹಾಗೂ ಸರಕಾರದ ಬಗ್ಗೆ ಅನುಕಂಪ ಇರುವವರ ಖಾತೆಯನ್ನು ಟ್ವಿಟ್ಟರ್ ಅಮಾನತು ಮಾಡುತ್ತಿದೆ ಎಂದು ಆರೋಪ ಮಾಡಿತ್ತು.

Twitter Has 10 Days to Reply to House Panel’s Unanswered Questions

3.5 ಕೋಟಿಯಷ್ಟು ಟ್ವಿಟ್ಟರ್ ಬಳಕೆದಾರರು ಇದ್ದಾರೆ. ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗೆ ಟ್ವಿಟ್ಟರ್ ಮುಖ್ಯ ವೇದಿಕೆಯಂತಾಗಿದೆ. ಚುನಾವಣೆ ಆಯೋಗ ಕೂಡ ಟ್ವಿಟ್ಟರ್ ನಲ್ಲಿನ ಪೋಸ್ಟ್ ಗಳ ಬಗ್ಗೆ ಮತ್ತು ಅದರ ಪರಿಣಾಮಗಳ ಬಗ್ಗೆ ನಿಗಾ ವಹಿಸಿದೆ.

31 ಸದಸ್ಯರ ಸಮಿತಿಯಲ್ಲಿ ಸದ್ಯ 21 ಸದಸ್ಯರು ಲೋಕಸಭೆಯಿಂದ ಹಾಗೂ 10 ಮಂದಿ ರಾಜ್ಯಸಭೆಯಿಂದ ಇದ್ದಾರೆ. ಎಲ್ ಕೆ ಅಡ್ವಾಣಿ ಸೇರಿದಂತೆ 13 ಮಂದಿ ಬಿಜೆಪಿ ಸಂಸದರು ಹಾಗೂ ಐವರು ಕಾಂಗ್ರೆಸ್ ಸಂಸದರಿದ್ದಾರೆ.

ಲೋಕಸಭೆ ಚುನಾವಣೆಗೂ ಮುನ್ನ ಇದು ಮಹತ್ವದ ಬೆಳವಣಿಗೆಯಾಗಿದ್ದು, ತಪ್ಪು ಮಾಹಿತಿಯನ್ನು ವೈಭವೀಕರಿಸುವುದು, ನಾಗರಿಕರ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು, ರಾಜಕೀಯ ಪಕ್ಷಪಾತ ಮುಂತಾದವುಗಳನ್ನು ನಿಯಂತ್ರಿಸಲು ಸಾಮಾಜಿಕ ಮಾಧ್ಯಮಗಳು ತೆಗೆದುಕೊಂಡ ಕ್ರಮಗಳ ಬಗ್ಗೆ ಅರಿವು ಸಿಗಲಿದೆ. ಟ್ವಿಟ್ಟರ್ ಅಲ್ಲದೆ, ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಪ್ರತಿನಿಧಿಗಳಿಂದ ಕೂಡಾ ಈ ಬಗ್ಗೆ ಪ್ರತಿಕ್ರಿಯೆ ನೀಡಲಿದ್ದಾರೆ.

English summary
The Parliamentary Committee on Information Technology on Monday, 25 February, asked Twitter to ensure that the upcoming Lok Sabha elections are “not undermined and influenced by foreign entities” – and to work “in real time with Election Commission to address issues.”
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X