• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರಿನ ಇವಾಂಕಾ ತಿಮ್ಮಯ್ಯಗೆ ಟಿವಿಎಸ್ ವಿನ್ಯಾಸದ ಪ್ರಶಸ್ತಿ

|

ಹೊಸೂರು, ಡಿಸೆಂಬರ್ 13: ವಿಶ್ವದಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಅಗ್ರಗಣ್ಯ ಕಂಪನಿಯಾಗಿರುವ ಟಿವಿಎಸ್ ಮೋಟರ್ ಕಂಪನಿ ಇಂದು ತನ್ನ ಮೊದಲ ಆವೃತ್ತಿಯ ಟಿವಿಎಸ್ NTORQ 125 ಕಾಲ್ ಆಫ್ ಡಿಸೈನ್ ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಬೆಂಗಳೂರಿನ ಸ್ಟ್ರೇಟ್ ಸ್ಕೂಲ್ ಆಫ್ ಡಿಸೈನ್‍ನ ಇವಾಂಕಾ ತಿಮ್ಮಯ್ಯ ಅವರು ಅಗ್ರ ಪ್ರಶಸ್ತಿ ಗಳಿಸಿದ್ದಾರೆ. ಇವರ ಟಿವಿಎಸ್ NTORQ 125 ರೇಸ್ ಮಷಿನ್‍ನ ವಿನ್ಯಾಸ ಅವರಿಗೆ ಟಿವಿಎಸ್ NTORQ 125 ವಾಹನ ಗೆಲ್ಲಲು ನೆರವಾಗಿದೆ.

ಪ್ರಶಸ್ತಿ ವಿಜೇತ ಸ್ಪರ್ಧಾಳುಗಳಲ್ಲಿ ಗಾಂಧಿನಗರದ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಡಿಸೈನ್ಸ್ ನ ಅನೂಪ್ ನೆಲ್ಲಿಕಲಾಯಿಲ್ ಮೊದಲ ರನ್ನರ್ ಅಪ್ ಪ್ರಶಸ್ತಿ ಹಾಗೂ ಮುಂಬೈ ಐಐಟಿ ಕೈಗಾರಿಕಾ ವಿನ್ಯಾಸ ಕೇಂದ್ರದ ಸಿದ್ಧಾರ್ಥ ಸಂಗ್ವಾನ್, ಗಾಂಧಿನಗರದ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಡಿಇಸೈನ್ಸ್‍ನ ಸಚಿನ್ ಸಿಂಗ್ ತೇನ್‍ಸಿಂಗ್ ಜಂಟಿಯಾಗಿ ದ್ವಿತೀಯ ರನ್ನರ್ಸ್ ಅಪ್ ಪ್ರಶಸ್ತಿ ಪಡೆದರು.

ಎರಡು ಹಂತದಲ್ಲಿ ನಡೆದ ಸ್ಪರ್ಧೆ

ಎರಡು ಹಂತದಲ್ಲಿ ನಡೆದ ಸ್ಪರ್ಧೆ

ಸ್ಪರ್ಧಿಗಳನ್ನು ಎರಡು ಹಂತಗಳಲ್ಲಿ ವಿಭಜಿಸಲಾಗಿತ್ತು ಹಾಗೂ ಇದರ ಅನ್ವಯ ವಿದ್ಯಾರ್ಥಿಗಳು ಹಾಗೂ ವಾಹನ ಪತ್ರಕರ್ತರು ತಮ್ಮ ಸೃಜನಾತ್ಮಕ ಹಾಗೂ ವಿನೂತನ ಸಾಮರ್ಥ್ಯವನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿತ್ತು. ದೇಶದ ಅತ್ಯುನ್ನತ ಆಟೊಮೊಬೈಲ್ ಮಾಧ್ಯಮ ವರ್ಗದಿಂದ ಸ್ಪರ್ಧಿಸಿದವರ ಪೈಕಿ ಪವರ್ ಡ್ರಿಫ್ಟ್ ನ ಅಕ್ಷಯ್ ಚಿತ್ವಾರ್, ಬೈಕ್‍ವಾಲ್‍ನ ಬಿಲಾಲ್ ಫಿರ್‍ಫಿರೇ ಮತ್ತು ಇಂಡಿಯನ್ ಅಟೋಸ್ ಬ್ಲಾಗ್‍ನ ಶೋಯಿಬ್ ಕಲಾನಿಯಾ ಅಗ್ರ ಮೂರು ಪ್ರಶಸ್ತಿಗಳನ್ನು ಗೆದ್ದರು.

ವಿದ್ಯಾರ್ಥಿಗಳಿಗೆ ಅವಕಾಶ

ವಿದ್ಯಾರ್ಥಿಗಳಿಗೆ ಅವಕಾಶ

ಈ ಸ್ಪರ್ಧೆಯ ಅಂಗವಾಗಿ ಆಯ್ಕೆ ಮಾಡಲಾದ ವಿದ್ಯಾರ್ಥಿಗಳಿಗೆ ತಮ್ಮ ಕಲ್ಪನೆಯನ್ನು ಮಷಿನ್‍ನಲ್ಲಿ ಪ್ರತಿರೂಪ ಮಾಡಲು ಅವಕಾಶ ಕಲ್ಪಿಸಲಾಗಿತ್ತು ಹಾಗೂ ಬಳಿಕ ಆಯ್ಕೆ ಪ್ರಕ್ರಿಯೆಯನ್ನು ಮತ್ತಷ್ಟು ವಿಭಜಿಸಲಾಯಿತು. ವೀಕ್ಷಕರ ಆಯ್ಕೆ ಪ್ರಶಸ್ತಿ ಹಾಗೂ ತೀರ್ಪುಗಾರರ ಪ್ರಶಸ್ತಿಯ ಪ್ರತ್ಯೇಕ ವರ್ಗ ರೂಪಿಸಲಾಗಿತ್ತು.

ಆನ್‍ಲೈನ್ ಮತದಾನದಲ್ಲಿ ಆಯ್ಕೆ

ಆನ್‍ಲೈನ್ ಮತದಾನದಲ್ಲಿ ಆಯ್ಕೆ

ಮೊದಲ ವಿಭಾಗದಲ್ಲಿ ವಿನ್ಯಾಸಗಳನ್ನು ದೊಡ್ಡ ಸಮುದಾಯವು ಆನ್‍ಲೈನ್ ಮತದಾನವಾಗಿ ಆಯ್ಕೆ ಮಾಡಿತು. ಇದರಲ್ಲಿ 10 ವಿನ್ಯಾಸಗಳನ್ನು ಟಿವಿಎಸ್ NTORQ 125 ಸಾಮಾಜಿಕ ಜಾಲತಾಣ ಹ್ಯಾಂಡಲ್‍ನಲ್ಲಿ ಬಿತ್ತರಿಸಲಾಗಿತ್ತು. ಐಟಿ ಐಡಿಸಿಯ ರಜತ್ ಕುಶ್ವಾಹ ಅವರು ವೀಕ್ಷಕರ ಆಯ್ಕೆ ಪ್ರಶಸ್ತಿಯನ್ನು ಗೆದ್ದರು.

ಟಿವಿಎಸ್ NTORQ 125 ಕಾಲ್ ಆಫ್ ಡಿಸೈನ್

ಟಿವಿಎಸ್ NTORQ 125 ಕಾಲ್ ಆಫ್ ಡಿಸೈನ್

ಟಿವಿಎಸ್ NTORQ 125 ಕಾಲ್ ಆಫ್ ಡಿಸೈನ್ 2019ರ ಆಗಸ್ಟ್ ನಲ್ಲಿ ಆರಂಭವಾಗಿತ್ತು. ಆಸಕ್ತರು ತಮ್ಮ ಪ್ರಬಲ ವಿನ್ಯಾಸ ಭಾಷೆಯಲ್ಲಿ ಟಿವಿಎಸ್ ಓಖಿಔಖಕಿ 125 ಪ್ರತಿಕೃತಿಯನ್ನು ರೇಸ್ ಮೆಷಿನ್ ಆಗಿ ಬಿಂಬಿಸಲು ಆಹ್ವಾನಿಸಲಾಗಿತ್ತು. ಝೆಡ್ (Z) ಪೀಳಿಗೆಯ ಗ್ರಾಹಕರಿಗೆ ಸ್ಪೂರ್ತಿದಾಯಕವಾಗುವಂತೆ ಇದನ್ನು ರೂಪಿಸಲು ಸೂಚಿಸಲಾಗಿತ್ತು. ದೇಶದ ವಿವಿಧೆಡೆಗಳಿಂದ ಆಗಮಿಸಿದ ಅಗ್ರ 20 ವಿನ್ಯಾಸ ಶಾಲೆಗಳ 300ಕ್ಕೂ ಹೆಚ್ಚು ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದರು. 20ಕ್ಕೂ ಹೆಚ್ಚು ಆಟೊಮೊಬೈಲ್ ಮುದ್ರಣ ಮಾಧ್ಯಮದ ಪತ್ರಕರ್ತರು ಕೂಡಾ ಪಾಲ್ಗೊಂಡಿದ್ದರು.

English summary
The first edition of the TVS NTORQ 125 Call of Design contest. Evanka Thimmaiah from Strate School of Design, Bengaluru claimed the top honours for her rendition of the TVS NTORQ 125 race machine which won her a TVS NTORQ 125.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X