ಟ್ರೂಕಾಲರ್‌ನಿಂದ 4 ಕೋಟಿ ಭಾರತೀಯರ ಮಾಹಿತಿ ಸೋರಿಕೆ!

ಬೆಂಗಳೂರು, ಮೇ 27: ಭಾರತದ ಟ್ರೂಕಾಲರ್ ಬಳಕೆದಾರರ ಖಾಸಗಿ ಮಾಹಿತಿಗಳನ್ನು ಕಪ್ಪು ಮಾರುಕಟ್ಟೆಯಲ್ಲಿ ಮಾರಾಟಕ್ಕಿಡಲಾಗಿದ್ದು, ಡಾರ್ಕ್ ವೆಬ್ ನಲ್ಲಿ 75,000 ರು ಗಳಿಗೆ ಮಾಹಿತಿ ಬಿಕರಿಯಾಗಿದೆ ಎಂಬ ಆಘಾತಕಾರಿ ಸುದ್ದಿಯನ್ನು ಆನ್‌ಲೈನ್ ಗುಪ್ತಚರ ಸಂಸ್ಥೆ ಸೈಬಲ್ ನೀಡಿದೆ.

Recommended Video

      Union Budget 2020 : ನಿರ್ಮಲಾ ಸಿತಾರಾಮನ್ ಕೊಟ್ಟ ಲೆಕ್ಕ ಕೇಳಿ ಪ್ರತಿಪಕ್ಷಗಳು ಶಾಕ್

      ಸೈಬಲ್ ಕಲೆ ಹಾಕಿರುವ ಮಾಹಿತಿ ಪ್ರಕಾರ ಸುಮಾರು 4.75ಕೋಟಿಗೂ ಅಧಿಕ ಭಾರತೀಯ ಬಳಕೆದಾರರ ಟ್ರೂಕಾಲರ್ ಮಾಹಿತಿ ಸೋರಿಕೆಯಾಗಿದೆ. ಟ್ರೂಕಾಲರ್‌ ಬಳಕೆದಾರರ ದಾಖಲೆಗಳನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟಕ್ಕಿಡಲಾಗಿತ್ತು. ಸೈಬರ್ ಕ್ರೈಂನಲ್ಲಿ ಕುಖ್ಯಾತಿ ಪಡೆದಿರುವ ಡಾಟಾ ಟ್ರೋವ್ ಎಂಬ ಕಂಪನಿ ಹೆಸರಿನಲ್ಲಿ ಈ ಡೀಲ್ ಮಾಡಲಾಗುತ್ತಿದೆ. ಅಪಾರ ಪ್ರಮಾಣ ಮಹತ್ವದ ದಾಖಲೆಗಳು ಅತಿ ಕಡಿಮೆ ಬೆಲೆಗೆ ದುಷ್ಟಕೂಟ ಕೈ ಸೇರುತ್ತಿದೆ.

      47.5 ಮಿಲಿಯನ್ ಟ್ರೂಕಾಲರ್ ದಾಖಲೆಗಳನ್ನು 1,000 ಡಾಲರ್‌ಗೆ (ಸುಮಾರು 75,000 ರೂ.) ಕಂಪನಿಯೊಂದು ಖರೀದಿಸಿರುವ ಮಾಹಿತಿ ಸಿಕ್ಕಿದೆ. ಯಾರ ಯಾರ ಮಾಹಿತಿ ಸೋರಿಕೆಯಾಗಿದೆ ಎಂಬುದನ್ನು ತಿಳಿಯಲು ಸೈಬಲ್ ಸಂಸ್ಥೆ ಟ್ರೂಕಾಲರ್ ವಕ್ತಾರರನ್ನು ಕೇಳಿದರೆ, "ನಮ್ಮ ಡೇಟಾಬೇಸ್‌ನ ಯಾವುದೇ ಉಲ್ಲಂಘನೆ ಸಂಭವಿಸಿಲ್ಲ ಮತ್ತು ನಮ್ಮ ಎಲ್ಲಾ ಬಳಕೆದಾರರ ಮಾಹಿತಿಯು ಸುರಕ್ಷಿತವಾಗಿದೆ. ನಮ್ಮ ಬಳಕೆದಾರರ ಗೌಪ್ಯತೆ ಮತ್ತು ನಮ್ಮ ಸೇವೆಗಳ ಸಮಗ್ರತೆಯನ್ನು ನಾವು ತುಂಬಾ ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಅನುಮಾನಾಸ್ಪದ ಚಟುವಟಿಕೆಗಳಿಗಾಗಿ ನಾವು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ'' ಎಂದಿದ್ದಾರೆ.

      Truecaller data of 4.75 cr Indian users leaked on dark web: Report

      ಬಳಕೆದಾರರ ಫೋನ್ ನಂಬರ್ , ಯಾವ ಕಂಪನಿ ಸೇವೆ ಪಡೆದಿದ್ದಾರೆ, ಬಳಕೆದಾರರ ಹೆಸರು, ಇಮೇಲ್, ಫೇಸ್ಬುಕ್ ಖಾತೆ ಐಡಿ, ಐಡೆಂಟಿಟಿ ಪ್ರೂಫ್ ದಾಖಲೆ ಎಲ್ಲವೂ ಸೈಬರ್ ಕಳ್ಳರ ಪಾಲಾಗಿದೆ ಎಂದು ತನ್ನ ಬ್ಲಾಗಿನಲ್ಲಿ ಸೈಬಲ್ ಪ್ರಕಟಿಸಿದೆ. ಈ ಮಾಹಿತಿಯನ್ನು ಬಳಸಿಕೊಂಡು ಸುಳ್ಳುಸುದ್ದಿ ಹಬ್ಬಿಸುವುದು, ಹಣ ಗಳಿಸಿ ಎಂದು ವಂಚನೆ ಮಾಡುವುದು, ಬ್ಯಾಂಕ್ ಖಾತೆಗೆ ಕನ್ನ ಹಾಕುವುದು ನಡೆಸಬಹುದು.

      ಆದರೆ, ಈ ರೀತಿ ಯಾವುದೇ ಅನುಮಾನಾಸ್ಪದ ಫೋನ್ ಕರೆ, ಫೋನಿಗೆ ಎಸ್ಎಂಎಸ್ ಬಂದರೆ ಟ್ರೂಕಾಲರ್ ಸ್ವಯಂಚಾಲಿತ ಸ್ಪಾಮ್ ಫೈಂಡರ್ ಸಕ್ರಿಯವಾಗುತ್ತದೆ. ಸ್ಪಾಮ್ ಸಂದೇಶಗಳನ್ನು ಬಳಕೆದಾರರು ಕೂಡಾ ಗುರುತಿಸಿ ಎಚ್ಚರಿಸಬಹುದು ಎಂದು ಸಂಸ್ಥೆ ಹೇಳಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+