Rajesh Rawani: ಯೂಟ್ಯೂಬ್‌ನಿಂದ ಈ ಟ್ರಕ್ ಚಾಲಕ ದುಡಿದ ಹಣ ಎಷ್ಟು ಕೋಟಿ ಗೊತ್ತಾ?

ಅದೃಷ್ಟ ಯಾರಿಗೆ, ಯಾವಾಗ, ಯಾವ ರೂಪದಲ್ಲಾದರೂ ಬರಬಹುದು. ಅದೃಷ್ಟ ಬರಲಿ ಎಂದು ಕಾಯುತ್ತಾ ಕೂರಬಾರದು, ನಮ್ಮ ಶ್ರಮ, ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರೆ ಯಶಸ್ಸು ಸಿಗುತ್ತದೆ. ಈ ಲಾರಿ ಡ್ರೈವರ್ ಜೀವನದಲ್ಲಿ ಆಗಿದ್ದು ಕೂಡ ಅದೇ, ಹೊಟ್ಟೆಪಾಡಿಗಾಗಿ ಟ್ರಕ್‌ ಚಾಲಕನ ಕೆಲಸಕ್ಕೆ ಸೇರಿದ ವ್ಯಕ್ತಿ ಇಂದು ಸೋಷಿಯಲ್ ಮೀಡಿಯಾದಲ್ಲಿ ಚಿರಪರಿಚಿತ. ಯೂಟ್ಯೂಬ್‌ ಚಾನೆಲ್‌ನಿಂದ ಇವರು ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಆದಾಯ ಪಡೆಯುತ್ತಾರೆ.

ಯೂಟ್ಯೂಬ್‌ ರಾಜೇಶ್ ರವಾನಿ ಎನ್ನುವ ಟ್ರಕ್ ಚಾಲಕನ ಬದುಕನ್ನೇ ಬದಲಾಯಿಸಿದೆ. ಎರಡು ದಶಕಗಳಿಂದ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿರುವ ಅವರು, ತಾವೇ ಅಡುಗೆಯನ್ನು ತಯಾರಿಸಿಕೊಳ್ಳುತ್ತಾರೆ, ಅದನ್ನೇ ಅವರು ವಿಡಿಯೋ ಮಾಡಿ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡುತ್ತಿದ್ದು, ಮಿಲಿಯನ್ ಗಟ್ಟಲೆ ವೀಕ್ಷಣೆಗಳನ್ನು ಪಡೆದುಕೊಳ್ಳುತ್ತಿವೆ.

Truck Driver Rajesh Rawani Becomes YouTube Star Earning Up to 10 Lakh Monthly

ಆರ್ ರಾಜೇಶ್ ವ್ಲಾಗ್ಸ್ ಎನ್ನುವ ಚಾನೆಲ್ ನಡೆಸುತ್ತಿದ್ದು, 1.86 ಮಿಲಿಯನ್ ಚಂದಾದಾರನ್ನು ಹೊಂದಿದೆ. ಜಾರ್ಖಂಡ್‌ನ ಜಮ್ತಾರಾ ಮೂಲದವರಾದ ರಾಜೇಶ್ ಅವರಿಗೆ ಯೂಟೂಬ್ ಚಾನೆಲ್ ಸಾಕಷ್ಟು ಹೆಸರು, ಹಣ ತಂದುಕೊಟ್ಟಿದೆ. ಯೂಟೂಬ್‌ ದುಡಿಮೆ ಹಣದಲ್ಲೇ ಅವರು ಮನೆಯನ್ನು ಖರೀದಿ ಮಾಡಿದ್ದಾರೆ.

ತಿಂಗಳಿಗೆ ಲಕ್ಷ ಲಕ್ಷ ದುಡಿಮೆ!

ಸಿದ್ಧಾರ್ಥ್ ಕಣ್ಣನ್ ಎನ್ನುವ ಯೂಟೂಬರ್ ಜೊತೆಗಿನ ಸಂದರ್ಶನದಲ್ಲಿ ರಾಜೇಶ್ ರವಾನಿ ತಮ್ಮ ಜೀವನದ ಕಷ್ಟ ಸುಖಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ದುಡಿಮೆಯಿಂದ ಮೊದಲ ಮನೆ ಕಟ್ಟುತ್ತಿರುವುದಾಗಿ ಕೂಡ ಅವರು ಹೇಳಿದ್ದಾರೆ. ಅಪಘಾತವೊಂದರಲ್ಲಿ ಗಾಯಗೊಂಡು ಬದುಕುಳಿದ ಘಟನೆಯನ್ನು ಕೂಡ ಹಂಚಿಕೊಂಡಿದ್ದಾರೆ. ಕುಟುಂಬವನ್ನು ಸಾಕಲು ಮತ್ತು ಮನೆಯನ್ನು ಕಟ್ಟಲು ಅವರು ಟ್ರಕ್ ಚಾಲಕನ ಕೆಲಸವನ್ನು ಮುಂದುವರೆಸಿದ್ದಾರೆ.

ಟ್ರಕ್ ಚಾಲಕನ ಕೆಲಸ ಮಾಡಲು ಅವರು ಪ್ರತಿ ತಿಂಗಳು ₹25,000 ದಿಂದ ₹ 30,000 ದವರೆಗೆ ಗಳಿಸುವುದಾಗಿ ರಾಜೇಶ್ ರವಾನಿ ಹೇಳಿದ್ದಾರೆ. ಆದರೆ ಅವರು ಯೂಟ್ಯೂಬ್‌ನಿಂದ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ದುಡಿಯುತ್ತಾರೆ. ಪ್ರತಿ ತಿಂಗಳು ವೀಕ್ಷಕರ ಸಂಖ್ಯೆಗೆ ಅನುಗುಣವಾಗಿ ಆದಾಯ ಹೆಚ್ಚು ಕಡಿಮೆಯಾಗುತ್ತದೆ. ಆದರೂ ಸಾಮಾನ್ಯವಾಗಿ ಪ್ರತಿ ತಿಂಗಳು 4-5 ಲಕ್ಷ ರೂಪಾಯಿ ದುಡಿಯುವುದಾಗಿ ಹೇಳಿದ್ದಾರೆ. ಅವರು ತಿಂಗಳೊಂದರಲ್ಲಿ 10 ಲಕ್ಷ ರೂಪಾಯಿ ಪಡೆದಿರುವುದಾಗಿ ಕೂಡ ಹೇಳಿದ್ದಾರೆ.

ನಾನು ಮೊದಲು ನನ್ನ ಮುಖ ತೋರಿಸದೆ ಬರಿ ಧ್ವನಿಯನ್ನು ನೀಡಿ ವಿಡಿಯೋಗಳನ್ನು ಮಾಡುತ್ತಿದ್ದೆ. ಆದರೆ ಜನ ನನ್ನ ಮುಖವನ್ನು ತೋರಿಸುವಂತೆ ಕೇಳಿದಾಗ, ನನ್ನ ಮಗ ನನ್ನ ಮುಖ ತೋರಿಸಿ ವಿಡಿಯೋ ಮಾಡಿದ್ದಾನೆ. ಇದು ಕೇವಲ ಒಂದು ದಿನದಲ್ಲಿ 4.5 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿತು ಎಂದು ಹೇಳಿದ್ದಾರೆ.

ವಾಹನ ಚಾಲನೆ ಕೆಲಸ ಮತ್ತು ಯೂಟ್ಯೂಬ್ ಚಾನೆಲ್ ಅನ್ನು ಏಕಕಾಲದಲ್ಲೇ ನಿಭಾಯಿಸುತ್ತಿದ್ದೇನೆ. ನನ್ನ ಕುಟುಂಬದ ಬೆಂಬಲ ಮತ್ತು ಸಹಾಯ ಇಲ್ಲದೆ ಇದೆಲ್ಲಾ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ರಾಜೇಶ್ ಅವರ ತಂದೆ ಕೂಡ ಚಾಲಕರಾಗಿದ್ದರು, ಮೊದಲು ಅವರು ಮಾತ್ರವೇ ಕುಟುಂಬದಲ್ಲಿ ದುಡಿಯುವ ವ್ಯಕ್ತಿಯಾಗಿದ್ದರು. ಪ್ರತಿ ತಿಂಗಳು ಕುಟುಂಬದ ಖರ್ಚಿಗಾಗಿ ₹500 ಮಾತ್ರ ಕೊಡುತ್ತಿದ್ದರು, ಇದರಿಂದ ಕುಟುಂಬ ಸಾಲ ಮಾಡುವ ಪರಿಸ್ಥಿತಿ ಇರುತ್ತಿತ್ತು ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+