ಟಿಕ್‌ ಟಾಕ್ ಬ್ಯಾನ್ ಎಫೆಕ್ಟ್‌: ಭಾರತದ ರೊಪೊಸೊ ಪ್ರತಿ ಗಂಟೆಗೆ 5 ಲಕ್ಷ ಡೌನ್‌ಲೋಡ್

ನವದೆಹಲಿ, ಜುಲೈ 15: ಜೂನ್ ಅಂತ್ಯದಲ್ಲಿ ಟಿಕ್ ಟಾಕ್ ಸೇರಿದಂತೆ ಚೀನಾದ 59 ಅಪ್ಲಿಕೇಶನ್‌ಗಳನ್ನು ಭಾರತ ನಿಷೇಧಿಸಿದ ಬಳಿಕ ದೇಸಿ ಆ್ಯಪ್‌ಗಳ ಡೌನ್‌ಲೋಡ್ ಹೆಚ್ಚಾಗತೊಡಗಿದೆ. ಅದರಲ್ಲೂ ಟಿಕ್ ಟಾಕ್ ಪ್ರತಿಸ್ಪರ್ಧಿ ರೊಪೊಸೊ ಭರ್ಜರಿ ಡೌನ್‌ಲೋಡ್‌ ಆಗ್ತಿದೆ.

ಕಿರು ವೀಡಿಯೋ ಪ್ಲಾಟ್‌ಫಾರ್ಮ್‌ ರೊಪೊಸೊ ಟಿಕ್‌ ಟಾಕ್ ಬ್ಯಾನ್ ಆದ ಬಳಿಕ ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಬಹು ಯಶಸ್ವಿಯಾಗಿದೆ. ಅದರಲ್ಲೂ ಎಷ್ಟರ ಮಟ್ಟಿಗೆ ಅಂದರೆ ಇದು ಗಂಟೆಗೆ 5,00,000 ಹೊಸ ಬಳಕೆದಾರರನ್ನು ತಲುಪುತ್ತಿದೆ ಮತ್ತು ತಿಂಗಳ ಅಂತ್ಯದ ವೇಳೆಗೆ 100 ಮಿಲಿಯನ್ ಪಡೆಯುವ ನಿರೀಕ್ಷೆಯಿದೆ ಎಂದು ಹೇಳುತ್ತಾರೆ.

ಟಿಕ್‌ ಟಾಕ್ ನಿಷೇಧದ ಮೊದಲು ಹೊಂದಿದ್ದ 55 ದಶಲಕ್ಷದಷ್ಟು ದುಪ್ಪಟ್ಟು ಬಳಕೆದಾರರನ್ನು ಈಗ ರೊಪೊಸೊ ಹೊಂದಿದೆ. ಜೊತೆಗೆ ದೇಶದಲ್ಲಿನ ಟಿಕ್‌ಟಾಕ್‌ನ ತೊಂದರೆಗಳಿಂದ ಲಾಭ ಪಡೆಯಲು ಭಾರತೀಯ ಸ್ಟಾರ್ಟ್ಅಪ್‌ಗಳು ರೆಡಿಯಾಗಿವೆ.

TikTok Ban: Desi App Roposo Booms With 5 Lakh Users Added Every Hour

ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ಚೀನಾದ ಇತರ ದೊಡ್ಡ ಆ್ಯಪ್‌ಗಳಾದ ಅಲಿಬಾಬಾ ಗ್ರೂಪ್‌ನ ಯುಸಿ ವೆಬ್ ಮೊಬೈಲ್ ಬ್ರೌಸರ್ ಮತ್ತು ಟೆನ್ಸೆಂಟ್‌ನ ವೀಚಾಟ್ ಮೆಸೇಜಿಂಗ್ ಆ್ಯಪ್ ಅನ್ನು ನಿಷೇಧಗೊಳಿಸಿದೆ.

ರೊಪೊಸೊ 12 ಭಾರತೀಯ ಭಾಷೆಗಳಲ್ಲಿ ಲಭ್ಯವಿದ್ದು, 14 ದಶಲಕ್ಷಕ್ಕೂ ಅಧಿಕ ವಿಡಿಯೋ ಸೃಷ್ಟಿಕರ್ತರು ಮತ್ತು ತಿಂಗಳಿಗೆ 80 ದಶಲಕ್ಷಕ್ಕೂ ಅಧಿಕ ವಿಡಿಯೋಗಳನ್ನು ಸೃಷ್ಟಿಸಲಾಗುತ್ತಿದೆ.

ಭಾರತೀಯ ಮನಗಳ ಉತ್ಪನ್ನವಾಗಿರುವ ರೊಪೊಸೊವನ್ನು ಮೂವರು ಐಐಟಿ ದೆಹಲಿ ಇಂಜಿನಿಯರ್ ಗಳು ಸ್ಥಾಪಿಸಿದ್ದಾರೆ ಮತ್ತು ಮಾಲೀಕತ್ವವನ್ನು ಹೊಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+