Get Updates
Get notified of breaking news, exclusive insights, and must-see stories!

ಬೆಂಗಳೂರಿನಲ್ಲಿ ಒಪ್ಪೋ ಎಫ್‌9 ಪ್ರೋದ ಮೊದಲ ಮಾರಾಟ!

ಸ್ಮಾರ್ಟ್‌ಫೋನ್‌ ಖರೀದಿಸಲು ಉದ್ದೇಶಿಸಿದಾಗ ನೀವು ನೋಡುವ ಮೊದಲ ಸಂಗತಿಯೇನು? ಅದರ ನೋಟ, ವೈಶಿಷ್ಟ್ಯಗಳು, ತಂತ್ರಜ್ಞಾನ, ಕ್ಯಾಮೆರಾ ಇತ್ಯಾದಿ. ಅಲ್ಲವೇ? ಕೆಲವು ವೈಶಿಷ್ಟ್ಯಗಳಿಗೆ ಆದ್ಯತೆ ನೀಡುವ ನಾವು ಇನ್ನು ಕೆಲವೊಂದಕ್ಕೆ ರಾಜಿಯಾಗುತ್ತೇವೆ.

ಈ ಮೇಲಿನ ಎಲ್ಲ ವೈಶಿಷ್ಟ್ಯಗಳ ಜತೆಗೆ ಇನ್ನೂ ಅನೇಕ ಸೌಲಭ್ಯಗಳ ಮೂಲಕ ನಿಮ್ಮನ್ನು ಪ್ರಭಾವಿಸುವ ಅತ್ಯದ್ಭುತ ಸ್ಮಾರ್ಟ್‌ಫೋನ್ ಇದೆಯೆಂದರೆ ಏನು ಮಾಡುತ್ತೀರಿ?

ಪ್ರೀಮಿಯಂ ಬ್ರ್ಯಾಂಡ್ ಫೋನ್‌ಗಳು ನಾಚುವಂತೆ ಮಾಡುವ ಒಪ್ಪೋ ಸ್ಮಾರ್ಟ್‌ಫೋನ್‌ನ ವಿಸ್ಮಯಕಾರಿ ಜಗತ್ತಿಗೆ ಸ್ವಾಗತ.

ಒಪ್ಪೋದ ಹೊಸ ಸುಂದರಿ

ಒಪ್ಪೋದ ಹೊಸ ಸುಂದರಿ

ಸ್ಮಾರ್ಟ್‌ಫೋನ್‌ಗಳ ವಿಚಾರ ಬಂದಾಗ ನಿಜಕ್ಕೂ ಸುಂದರಿಯರನ್ನು ನೀಡುವುದರಲ್ಲಿ ಹೆಸರುವಾಸಿಯಾದ ಬ್ರ್ಯಾಂಡ್, ತನ್ನ ಕ್ಲಾಸ್ ಮತ್ತು ಸ್ಟೈಲ್ ನಲ್ಲಿ ಮತ್ತಷ್ಟು ವಿಭಿನ್ನವಾದ ಇನ್ನೊಂದು ಫೋನ್‌ಅನ್ನು ಬಿಡುಗಡೆ ಮಾಡಿದೆ.

ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌ನಲ್ಲಿರುವ ಶೋರೂಂನಲ್ಲಿ ಒಪ್ಪೋ ಎಫ್9 ಪ್ರೋ ಹೊಸ ಬ್ರ್ಯಾಂಡ್‌ನ ಮೊದಲ ಮಾರಾಟ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸ್ಮಾರ್ಟ್‌ಫೋನ್‌ನ ವಿಸ್ಮಯಕಾರಿ ಸೌಂದರ್ಯದ ಮೊದಲ ನೋಟವನ್ನು ನೋಡಲು ಒಂದು ಸೂರಿನಡಿ ಕಾತರದಿಂದ ಸೇರಿದ್ದ ಎಲ್ಲ ಒಪ್ಪೋ ಅಭಿಮಾನಿಗಳಿದ್ದ ಕಾರ್ಯಕ್ರಮ ಸಾಕಷ್ಟು ಮೋಜು ಮಸ್ತಿಯಿಂದ ಕೂಡಿತ್ತು.

ಏಕೆಂದರೆ ಇದು ನೋಟ ಮತ್ತು ತಂತ್ರಜ್ಞಾನಗಳ ಸೂಕ್ತವಾದ ಸಂಯೋಜನೆಯಾಗಿರುವ ಸ್ಮಾರ್ಟ್‌ಫೋನ್. ಬಹುತೇಕ ಎಲ್ಲ ವಯೋಮಾನದ ಖರೀದಿದಾರರನ್ನು ಇದು ಕಂಡುಕೊಂಡಿದೆ. ಈ ಕಾರ್ಯಕ್ರಮಕ್ಕೆ ಕಳೆ ನೀಡಿದ್ದು ಮತ್ಯಾರೂ ಅಲ್ಲ, ತಮ್ಮ ತೀಕ್ಷ್ಣ ವಿನೋದ ಮತ್ತು ಚಾರ್ಮ್‌ನಿಂದ ಗಮನ ಸೆಳೆದಿರುವ ಸ್ನಿಗ್ಧ ಸುಂದರಿ ಕಾಜಲ್ ಅಗರ್ವಾಲ್.

ವೂಕ್ ಚಾರ್ಜಿಂಗ್ ತಂತ್ರಜ್ಞಾನ

ವೂಕ್ ಚಾರ್ಜಿಂಗ್ ತಂತ್ರಜ್ಞಾನ

ಈ ಅದ್ಭುತ ಸ್ಮಾರ್ಟ್‌ಫೋನ್‌ಗಳ ಕುರಿತು ಕೇಳಿದಾಗ, ಕಾಜಲ್ ಅಷ್ಟೇ ಅಚ್ಚರಿಯ ಸಂಗತಿಗಳನ್ನು ಹಂಚಿಕೊಂಡರು.

ಒಪ್ಪೋ ತನ್ನ ಗ್ರಾಹಕರಿಗಾಗಿ ತಂದಿರುವ ಹೊಸ ಆವಿಷ್ಕಾರ ಮತ್ತು ತಂತ್ರಜ್ಞಾನವನ್ನು ಮೆಚ್ಚಿಕೊಂಡಿರುವುದಾಗಿ ಹೇಳಿಕೊಂಡರು. ಕೇವಲ 5 ನಿಮಿಷದ ಚಾರ್ಜ್ 2 ಗಂಟೆಗಳ ಕಾಲ ಮಾತನಾಡುವಷ್ಟು ಬ್ಯಾಟರಿ ಶಕ್ತಿ ನೀಡುವುದರಿಂದ VOOC ಚಾರ್ಜಿಂಗ್ ತಂತ್ರಜ್ಞಾನದ ಒಪ್ಪೋ ಎಫ್‌9 ಪ್ರೋ ಜನರಿಗೆ ಅತಿ ಅಗತ್ಯವಾಗಿದೆ ಎಂದರು.

ವಿವಿಧ ಬಣ್ಣಗಳಲ್ಲಿ ನಯವಾದ ಮತ್ತು ಸ್ಟೈಲಿಶ್ ಆಗಿರುವ ಫೋನ್‌ನ ಲುಕ್‌ ಬಗ್ಗೆ ಅವರು ಪ್ರಶಂಸೆ ಕೂಡ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಹಾಜರಿದ್ದ ಸಿ4ಇಟೆಕ್‌ನ ಸಂಸ್ಥಾಪಕ ಅಶ್ವಿನ್ ಗಣೇಶ್ ಈ ಸ್ಮಾರ್ಟ್‌ಫೋನ್‌ ಕುರಿತು ಅನೇಕ ಸಕಾರಾತ್ಮಕ ಸಂಗತಿಗಳನ್ನು ಹಂಚಿಕೊಂಡರು.

ಮುಖ್ಯವಾಗಿ ಒಪ್ಪೋ ಎಫ್‌9 ಪ್ರೋದಲ್ಲಿನ ವೂಕ್ ಚಾರ್ಜಿಂಗ್ ಮತ್ತು ವಾಟರ್ ಡ್ರಾಪ್ ಪರದೆ ಅವರನ್ನು ಪ್ರಮುಖವಾಗಿ ಆಕರ್ಷಿಸಿವೆ.

ಸೆಲ್ಫಿಪ್ರಿಯ ಗ್ರಾಹಕರಲ್ಲಿ ಖುಷಿ

ಸೆಲ್ಫಿಪ್ರಿಯ ಗ್ರಾಹಕರಲ್ಲಿ ಖುಷಿ

ಜನಸಮೂಹದ ನಡುವೆ ಸ್ಮಾರ್ಟ್‌ಫೋನ್‌ ಯಶಸ್ವಿಯಾಗಿದೆಯೇ ಇಲ್ಲವೇ ಎಂಬುದನ್ನು ತಿಳಿಯುವ ಸೂಕ್ತ ಮಾರ್ಗ ಯಾವುದು? ಗ್ರಾಹಕರನ್ನು ಕೇಳುವುದು...!

ಸೆಲ್ಫಿ ಪ್ರಿಯರಿಂದ ಹಿಡಿದು ಫ್ಯಾಷನ್ ಪ್ರಜ್ಞೆಯುಳ್ಳ, ತಮ್ಮ ಮುಂದಿನ ಫ್ಯಾಷನ್ ಸಾಧನವಾಗಿ ಹೊಂದಲಿರುವ ಫೋನ್‌ನ ಕ್ಯಾಮೆರಾ ಬಗ್ಗೆ ಸಾಕಷ್ಟು ಕಾತರತೆ ಹೊಂದಿರುವ ಅನೇಕ ಸಂತುಷ್ಟ ಗ್ರಾಹಕರಿದ್ದರು.

ಯುವ ಅಥವಾ ಸೆಲ್ಫಿ ಪ್ರಿಯ ಪೀಳಿಗೆಯವರೇ ಹೆಚ್ಚಿದ್ದ ಉತ್ಸಾಹಿ ಜನಸಮೂಹದ ನಡುವೆ ತರುಣರ ಸಂಖ್ಯೆಯೂ ಕಡಿಮೆ ಇರಲಿಲ್ಲ. ಎಲ್ಲ ವಯೋಮಾನದ ಗುಂಪುಗಳ ನಡುವೆ ಒಪ್ಪೋ ಎಫ್9 ಪ್ರೋ ದೊಡ್ಡ ಹಿಟ್ ಆಗಲು ಕಾರಣವೇನು? ಅದಕ್ಕೆ ನಮ್ಮ ಬಳಿ ದೊಡ್ಡ ಪಟ್ಟಿಯೇ ಇದೆ.

ನೂತನ ಒಪ್ಪೋ ಎಫ್9 ಪ್ರೋ ಕುರಿತು ನೀವು ತಿಳಿದುಕೊಳ್ಳಬೇಕಿರುವ ಕೆಲವು ಸಂಗತಿಗಳಿವು.

64 ಜಿಬಿ ಇಂಟರ್ನಲ್ ಮೆಮೋರಿ

64 ಜಿಬಿ ಇಂಟರ್ನಲ್ ಮೆಮೋರಿ

ನಯವಾದ 6.3 ಇಂಚ್‌ನ ಸಂಪೂರ್ಣ ಎಚ್‌ಡಿ ಡಿಸ್‌ಪ್ಲೇ ಹೊಂದಿರುವ ಈ ಬೆರಗಿನ ಬೆಡಗಿ ಫಿಂಗರ್‌ಟಿಪ್ ಸೆನ್ಸರ್ ಹೊಂದಿದೆ. ಈ ಸೌಲಭ್ಯ ನಿಮ್ಮ ಫೋನ್‌ಅನ್ನು ಸುರಕ್ಷಿತವಾಗಿಡಲು ಮಹತ್ವದ್ದಾಗಿದೆ. 64 ಜಿಬಿ ಸಾಮರ್ಥ್ಯದ ಇಂಟರ್ನೆಲ್ ಮೆಮೋರಿ ಹೊಂದಿರುವುದರಿಂದ ಹೊಸ ಫೋಟೊಗಳಿಗೆ ಜಾಗ ಮಾಡಿಕೊಡಲು ಹಳೆಯ ಫೋಟೊ ಅಥವಾ ವಿಡಿಯೋಗಳನ್ನು ಡಿಲೀಟ್ ಮಾಡಬೇಕಾದ ಅವಶ್ಯಕತೆಯೇ ಬರುವುದಿಲ್ಲ.

ಸೆಲ್ಫಿ ಪ್ರೇಮಿಗಳಿಗಾಗಿಯೇ...

ಸೆಲ್ಫಿ ಪ್ರೇಮಿಗಳಿಗಾಗಿಯೇ...

ಇದರ ಅದ್ಭುತ 25 ಮೆಗಾಪಿಕ್ಸೆಲ್ ಕ್ಯಾಮೆರಾದಿಂದ ಎಷ್ಟು ಫೋಟೊಗಳನ್ನು ತೆಗೆದುಕೊಂಡರೂ ಸೆಲ್ಫಿ ಪ್ರಿಯರಿಗೆ ಸಮಾಧಾನವಾಗದಂತೆ ಅವರಿಗಾಗಿ ಹೇಳಿ ಮಾಡಿಸಿದ ಫೋನ್ ಇದು. ಇದರಲ್ಲಿ ತೆಗೆದ ಫೋಟೊಗಳನ್ನು ಫಿಲ್ಟರ್ ಬಳಸದೆಯೇ ಇನ್‌ಸ್ಟಾಗ್ರಾಂನಲ್ಲಿ ಹಾಕುವಷ್ಟು ಸುಂದರವಾಗಿರುತ್ತವೆ.

ಕೇವಲ 8 ಎಂಎಂನಷ್ಟು ತೆಳವಾಗಿರುವ ಹೊಸ ಒಪ್ಪೋ ಎಫ್9 ಪ್ರೋ ಮೂರು ಚೆಂದದ ಬಣ್ಣಗಳೊಂದಿಗೆ ಲಭ್ಯ. ಜತೆಗೆ ಆಕರ್ಷಕವಾದ ವಿನ್ಯಾಸ, ನಿಜಕ್ಕೂ ಯೋಗ್ಯವಾದದ್ದು. ಈ ಸುಂದರಿಯನ್ನು ಕೈಯಲ್ಲಿ ಹಿಡಿದು ನೀವು ನಗರದಲ್ಲಿ ಅಡ್ಡಾಡಿದರೆ ಎಲ್ಲರ ಕಣ್ಣನ್ನೂ ಸೆಳೆಯುವುದರಲ್ಲಿ ಸಂಶಯವೇ ಇಲ್ಲ.

ಮತ್ಯಾಕೆ ನೀವು ಕಾಯುತ್ತಿದ್ದೀರಿ? ಈ ಮನಮೋಹಕ ಮತ್ತು ತಾಂತ್ರಿಕವಾಗಿ ವಿಶಿಷ್ಟವಾದ, ಸ್ಟೈಲ್ ಮತ್ತು ಆವಿಷ್ಕಾರದ ಪರಿಪೂರ್ಣ ಸಂಯೋಜನೆಯಾದ ಸ್ಮಾರ್ಟ್‌ಫೋನ್‌ಅನ್ನು ನಿಮ್ಮ ಸಮೀಪದ ಒಪ್ಪೋ ಮಾರಾಟ ಮಳಿಗೆಯಿಂದ ಪಡೆದುಕೊಳ್ಳಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+