ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ ಟಿ ಜಾರಿಯಾದರೆ ಆಗುವ 9 ಅನುಕೂಲಗಳು

ಜಿಎಸ್ ಟಿ ಜಾರಿಯಿಂದ ಅಗುವ ಫಾಯಿದೆ ಏನು ಎಂಬುದು ಸದ್ಯದ ಪ್ರಶ್ನೆ ಅದಕ್ಕೆ ಉತ್ತರಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ.

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ನವದೆಹಲಿ, ನವೆಂಬರ್ 3: ಜಿಎಸ್ ಟಿ (ಗೂಡ್ಸ್ ಅಂಡ್ ಸರ್ವೀಸ್ ಟ್ಯಾಕ್ಸ್) ದರದ ನಾಲ್ಕು ವಿವಿಧ ಹಂತವನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಗುರುವಾರ ಘೋಷಿಸಿದ್ದಾರೆ. ಇದು ಬಹುದಿನ ಹಾಗೂ ವರ್ಷದಿಂದ ನಿರೀಕ್ಷಿಸುತ್ತಿದ್ದ ಕ್ಷಣ. ಜಿಎಸ್ ಟಿ ಜಾರಿಯಿಂದ ಅಗುವ ಫಾಯಿದೆ ಏನು ಎಂಬುದು ಸದ್ಯದ ಪ್ರಶ್ನೆ ಅದಕ್ಕೆ ಉತ್ತರಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ.

ಬದುಕು ಸರಳವಾಯಿತು: ಸದ್ಯಕ್ಕೆ ಇರುವ ಹದಿನೇಳು ಪರೋಕ್ಷ ತೆರಿಗೆಗಳು ಇನ್ನು ಮಂದೆ ಇರಲ್ಲ. ಅದರ ಬದಲಿಗೆ ಏಕರೂಪದ ಜಿಎಸ್ ಟಿ ಜಾರಿಗೆ ಬರುತ್ತದೆ. ಇದರಿಂದ ತೆರಿಗೆ ಜಾರಿ ಹಂತದಲ್ಲಿ ಆಗುವ ಖರ್ಚು ಕಡಿಮೆ ಆಗುತ್ತದೆ.

ಆದಾಯ ಜಾಸ್ತಿಯಾಗುತ್ತೆ: ತೆರಿಗೆ ತಪ್ಪಿಸಿಕೊಳ್ಳಲ್ಲ. ಇನ್ ಪುಟ್ ತೆರಿಗೆ ಕ್ರೆಡಿಟ್ ಸರಬರಾಜುದಾರರಿಗೆ ತೆರಿಗೆ ಪಾವತಿಸಲು ಪ್ರೇರಣೆ ನೀಡುತ್ತದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿಗಾ ಇರುವುದರಿಂದ, ತೆರಿಗೆ ರಹಿತ ವಸ್ತುಗಳ ಸಂಖ್ಯೆ ಕಡಿಮೆಯಾಗುತ್ತದೆ.[ನಾಲ್ಕು ಹಂತದ ಜಿಎಸ್ ಟಿ ದರ ನಿಗದಿ: ಅರುಣ್ ಜೇಟ್ಲಿ]

GST

ಏಕರೂಪದ ಮಾರುಕಟ್ಟೆ: ಈಗ ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆಯಾಗಿರುವ ತೆರಿಗೆ ದರವು ಒಂದೇ ರೀತಿಯಾಗುತ್ತದೆ. ವಿವಿಧ ದರಗಳಿರುವುದರಿಂದ ಶೇ 20-30ರಷ್ಟು ಬೆಲೆಯಲ್ಲೂ ಹೆಚ್ಚಳವಾಗುತ್ತಿದೆ. ಇನ್ನು ಮುಂದೆ ಆ ಸಮಸ್ಯೆ ಇಲ್ಲ.

ಸರಕು-ಸಾಗಣೆ ವೆಚ್ಚ ಕಡಿಮೆಯಾಗುತ್ತೆ: ಯಾವುದೇ ರಾಜ್ಯದ ಗಡಿ ಭಾಗದಲ್ಲಿ ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ನಿಲ್ಲುವ ವಾಹನಗಳನ್ನು ನೋಡಿರುತ್ತೀರಿ. ಭಾರತದಲ್ಲಿ ಇಂಥ ಟ್ರಕ್ ಗಳು ದಿನಕ್ಕೆ 280 ಕಿ.ಮೀ. ಸಾಗುತ್ತವೆ. ಅದೇ ಅಮೆರಿಕಾದಲ್ಲಿ 800 ಕಿ.ಮೀ. ಸಾಗುತ್ತವೆ. ಅಂದರೆ ಜಿಎಸ್ ಟಿಯಿಂದ ಸರಕು ಸಾಗಣೆ ವೆಚ್ಚ ಕಡಿಮೆಯಾಗುತ್ತೆ.[ಜಿಎಸ್ಟಿ ಎಂದರೇನು? ಇದರಿಂದ ಯಾರಿಗೆ ಪ್ರಯೋಜನ?]

ಬಂಡವಾಳಕ್ಕೆ ಪ್ರೋತ್ಸಾಹ: ಹಲವು ಬಂಡವಾಳ ಸರಕುಗಳಿಗೆ (ಕ್ಯಾಪಿಟಲ್ ಗೂಡ್ಸ್) ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಸಿಗ್ತಿರಲಿಲ್ಲ. ಜಿಎಸ್ ಟಿಯಲ್ಲಿ ಪೂರ್ತಿಯಾಗಿ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಸಿಕ್ಕರೆ ಬಂಡವಾಳ ಸರಕುಗಳ ವೆಚ್ಚದಲ್ಲಿ ಶೇ 12-14ರಷ್ಟು ಕಡಿಮೆಯಾಗುತ್ತದೆ. ಇದರಿಂದ ಬಂಡವಾಳ ಸರಕಿನ ಮೇಲಿನ ಹೂಡಿಕೆ ಶೇ 6ರಷ್ಟು, ಒಟ್ಟಾರೆ ಶೇ 2ರಷ್ಟು ಹೆಚ್ಚಳವನ್ನು ನಿರೀಕ್ಷೆ ಮಾಡಬಹುದು.

ಮೇಕ್ ಇನ್ ಇಂಡಿಯಾ: ತೆರಿಗೆಯಲ್ಲಿ ಏಕರೂಪ ಆಗಿ, ಅಂತರರಾಜ್ಯ ತೆರಿಗೆ ಹೊರೆ ತಗ್ಗಿ, ಸರಕು-ಸಾಗಣೆ ವೆಚ್ಚವೂ ಕಡಿಮೆ ಆಗುತ್ತದೆ. ಆಮದು ವಸ್ತುಗಳಿಗೆ ಹೆಚ್ಚು ಸುರಕ್ಷತೆ ದೊರೆಯುತ್ತದೆ. ಇದರಿಂದ ದೇಶಿ ವಸ್ತುಗಳು ಹೆಚ್ಚು ಸ್ಪರ್ಧಾತ್ಮಕ ಬೆಲೆಗೆ ದೊರೆಯುತ್ತವೆ.

ರಾಜ್ಯಗಳ ಅಭಿವೃದ್ಧಿಗೆ ಅನುಕೂಲ: ಸದ್ಯಕ್ಕೆ ಅಂತರರಾಜ್ಯ ತೆರಿಗೆ ಅಂದರೆ ಶೇ 2ರಷ್ಟು ಮಾತ್ರ. ಹಾಗಂದರೆ ಅ ರಾಜ್ಯದೊಳಗೆ ಮಾತ್ರ ಉತ್ಪನ್ನಗಳಿಗೆ ವಿಧಿಸುವಂಥದ್ದು. ಜಿಎಸ್ ಟಿ ಅಂದರೆ ರಾಷ್ಟ್ರಮಟ್ಟದ ಮಾರುಕಟ್ಟೆ. ಇದನ್ನು ಎಲ್ಲ ರಾಜ್ಯಗಳಿಗೂ ಹಂಚಲಾಗುತ್ತದೆ. ಇದರಿಂದ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ರಾಜ್ಯಗಳಿಗೆ ಅನುಕೂಲವಾಗುತ್ತದೆ.[ಜಿಎಸ್ ಟಿ ಅಂಗೀಕಾರಕ್ಕೆ ನರೇಂದ್ರ ಮೋದಿ ಸರ್ಕಾರದ ಹೆಜ್ಜೆ]

ಜಿಡಿಪಿಯಲ್ಲಿ ಹೆಚ್ಚಳ: ಎಚ್ ಎಸ್ ಬಿಸಿ ಅಂದಾಜು ಮಾಡಿರುವಂತೆ ಇನ್ನು ಮೂರರಿಂದ ಐದು ವರ್ಷದಲ್ಲಿ 80 ಬೇಸಿಸ್ ಪಾಯಿಂಟ್ ಹೆಚ್ಚಳವಾಗುತ್ತದೆ. ಅದು ಒಟ್ಟಾರೆಯಾಗಿ ನೋಡಿದಾಗ ಇನ್ನು ಮೂರರಿಂದ ಐದು ವರ್ಷದಲ್ಲಿ ಜಿಡಿಪಿ ದರವು ಶೇ 0.9-1.7ರಷ್ಟು ಹೆಚ್ಚಾಗುತ್ತದೆ.

ಆನ್ ಲೈನ್ ವ್ಯವಹಾರ ಜೋರು: ರಾಜ್ಯ ಸರಕಾರಗಳ ನಿರ್ಬಂಧ ಹಾಗೂ ತೆರಿಗೆಗಳು ಇ ಕಾಮರ್ಸ್ ವ್ಯವಹಾರವನ್ನು ಗೋಜಲಾಗಿಸಿದೆ. ಅ ಕಾರಣಕ್ಕೆ ಕೆಲವು ಮಾರಾಟಗಾರರು ಕೆಲವು ರಾಜ್ಯಗಳಿಗೆ ಸರಕನ್ನು ಕೊಡುವುದೇ ಇಲ್ಲ. ಇನ್ನು ಮುಂದೆ ಈ ಸಮಸ್ಯೆ ಇರುವುದಿಲ್ಲ.

English summary
Goods and services tax (GST), the reform is expected to bump up GDP by about a percentage point or even more. Here's a look at GST's benefits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X