ಟಿಸಿಎಸ್ ನಿಂದ ಫ್ರೆಶರ್ಸ್ ಗೆ ಶುಭ ಸುದ್ದಿ

TCS to recruit 25,000 freshers next FY15
ಬೆಂಗಳೂರು, ಅ.17: ಭಾರತದ ಅತಿದೊಡ್ಡ ಸಾಫ್ಟ್ ವೆರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಫ್ರೆಶರ್ಸ್ ಗೆ ಶುಭ ಸುದ್ದಿ ನೀಡಿದೆ. ಮುಂಬರುವ ಆರ್ಥಿಕ ವರ್ಷದಲ್ಲಿ ಫ್ರೆಶರ್ಸ್ ಗೆ ಅವಕಾಶಗಳ ಮಹಾಪೂರ ಹರಿಯಲಿದೆ ಎಂದು ಸಂಸ್ಥೆ ಪ್ರಕಟಿಸಿದೆ.

ಮುಂದಿನ ಆರ್ಥಿಕ ವರ್ಷದಲ್ಲಿ ಸುಮಾರು 350 ಇನ್ಸ್ಟಿಟ್ಯೂಟ್ ಗಳಿಂದ 25,000ಕ್ಕೂ ಅಧಿಕ ಫ್ರೆಶರ್ಸ್ ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಟಿಸಿಎಸ್ ಘೋಷಿಸಿದೆ. ಆರ್ಥಿಕ ವರ್ಷ2014ರಲ್ಲಿ ನೇಮಕಾತಿ ಸಂಖ್ಯೆಯನ್ನು 45,000ರಿಂದ 50,000ಕ್ಕೆ ಏರಿಸಲಾಗಿತ್ತು.

ಪ್ರಸಕ್ತ ಆರ್ಥಿಕ ವರ್ಷದ ಆರಂಭದಲ್ಲಿ ನೇಮಕಾತಿ ಟಾರ್ಗೆಟ್ 45,000 ದಷ್ಟಿತ್ತು. ಆದರೆ, ಈಗ ನೇಮಕಾತಿ ಸಂಖ್ಯೆ 50,000 ದಾಟುವ ಸಾಧ್ಯತೆಗಳಿವೆ. ಆದರೆ, ಯಾವ ರೀತಿ ನೇಮಕಾತಿ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಆಫ್ ಕ್ಯಾಂಪಸ್ ಅಥವಾ ಲ್ಯಾಟರಲ್ ನೇಮಕಾತಿ ಸಾಧ್ಯತೆಯಿದೆ ಎಂದು ಜಾಗತಿಕ ಮಾವನ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಕಾರ್ಯಕಾರಿ ಉಪಾಧ್ಯಕ್ಷ ಅಜಯ್ ಮುಖರ್ಜಿ ಹೇಳಿದ್ದಾರೆ. ಮುಂದಿನ ಆರ್ಥಿಕ 2015ರಲ್ಲಿ ಟಾರ್ಗೆಟ್ ಈ ವರ್ಷದಂತೆ ಮುಂದುವರೆಯಲಿದೆ. ಫ್ರೆಶರ್ಸ್ ಗೆ ಹೆಚ್ಚಿನ ಅವಕಾಶ ಸಿಗಲಿದೆ ಎನ್ನಲಾಗಿದೆ.

ಇತರೆ ಐಟಿ ಕಂಪನಿಗಳಿಗೆ ಹೋಲಿಸಿದರೆ(ಇನ್ಫೋಸಿಸ್, ಎಚ್ ಸಿಎಲ್ ಟೆಕ್ನಾಲಜೀಸ್) ಟಿಸಿಎಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಸದಾ ಮುಂದಿದೆ. ಪ್ರತಿ ವರ್ಷ ಕಾಲಕ್ಕೆ ತಕ್ಕಂತೆ ಅಗತ್ಯ ನೇಮಕಾತಿ ಮಾಡಿಕೊಳ್ಳುತ್ತಿದೆ. ಇತರೆ ಸ್ಪರ್ಧಿಗಳು ನೇಮಕಾತಿ ಲೆಟರ್ ನೀಡಿದರೂ ಕೂಡಾ ಉದ್ಯೋಗಾರ್ಥಿಗಳನ್ನು ಕಂಪನಿಯೊಳಗೆ ಸೇರಿಸಿಕೊಳ್ಳದೆ ವಿಳಂಬ ನೀತಿ ಅನುಸರಿಸುತ್ತಿವೆ. ಮೂಲಗಳ ಪ್ರಕಾರ ಮುಂದಿನ ವರ್ಷದ ನೇಮಕಾತಿಗಾಗಿ ಈಗಾಗಲೇ ಕ್ಯಾಂಪಸ್ ಗಳಿಗೆ ಟಿಸಿಎಸ್ ಸಿಬ್ಬಂದಿ ಭೇಟಿ ನೀಡುತ್ತಿದ್ದಾರೆ ಎಂಬ ಸುದ್ದಿಯಿದೆ.

ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ನಿರೀಕ್ಷಿತ ಮಟ್ಟದ ಲಾಭ ಗಳಿಸಿರುವ ಟಿಸಿಎಸ್, ಸೆ.30,2013ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಒಟ್ಟಾರೆ ನಿವ್ವಳ 4,702 ಕೋಟಿ ರು ಲಾಭ ಗಳಿಸುವುದ ರೊಂದಿಗೆ ಶೇ 34ರಷ್ಟು ಭಾರಿ ಪ್ರಗತಿ ದಾಖಲಿಸಿತ್ತು. ತ್ರೈಮಾಸಿಕದ ಅವಧಿಯಲ್ಲಿ 7,664 ಸಿಬ್ಬಂದಿಗಳನ್ನು ನೇಮಿಸಿ ಕೊಳ್ಳಲಾಗಿದ್ದು, ಕಂಪೆನಿಯಲ್ಲಿನ ಒಟ್ಟು ಉದ್ಯೋಗಿಗಳ ಸಂಖ್ಯೆ 2,85,250ಕ್ಕೇರಿತ್ತು.

ಆಟೋಮೇಷನ್ ನಲ್ಲಿ ಏರಿಕೆ, ಐಟಿ ಕ್ಷೇತ್ರದ attrition ಪ್ರಮಾಣದಲ್ಲಿ ಇಳಿಕೆ ಎಲ್ಲವೂ ನೇಮಕಾತಿ ಮೇಲೆ ನೇರ ಪರಿಣಾಮ ಬೀರಲಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನೇಮಕಾತಿ ಶೇ 17ರಷ್ಟು ಅಥವಾ 1,50,000 ಕ್ಕೆ ಕುಸಿತ ಕಾಣಲಿದೆ ಎಂದು ನಾಸ್ಕಾಂ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+