ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Q2: ಟಿಸಿಎಸ್ ಗೆ ನಿರೀಕ್ಷಿತ ಲಾಭ, ಆದಾಯ

By Mahesh
|
Google Oneindia Kannada News

TCS Q2 net profits at Rs 4702 crores; beats estimates
ಬೆಂಗಳೂರು, ಅ.16: ದೇಶದ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ 'ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್' (ಟಿಸಿಎಸ್), ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ನಿರೀಕ್ಷಿತ ಮಟ್ಟದ ಲಾಭ ಗಳಿಸಿದೆ.

ಸೆ.30,2013ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಒಟ್ಟಾರೆ ನಿವ್ವಳ 4,702 ಕೋಟಿ ರು ಲಾಭ ಗಳಿಸುವುದ ರೊಂದಿಗೆ ಶೇ 34ರಷ್ಟು ಭಾರಿ ಪ್ರಗತಿ ದಾಖಲಿಸಿದೆ. ಹಿಂದಿನ ವರ್ಷ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಕಂಪೆನಿಯ ಲಾಭ ರೂ3,512 ಕೋಟಿಯಷ್ಟಿತ್ತು.

ಎರಡನೇ ತ್ರೈಮಾಸಿಕದಲ್ಲಿ ಟಿಸಿಎಸ್ ಆದಾಯ 20,977.24 ಕೋಟಿ ರು ಬಂದಿದ್ದು ನಿರೀಕ್ಷೆ ಮೀರಿದ ಗಳಿಕೆ ಕಾಣಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಆದಾಯ ಗಳಿಕೆ 15,620.75 ಕೋಟಿ ರು ಇತ್ತು. ಈ ಬಾರಿ ಶೇ 34.3 ರಷ್ಟು ಉತ್ತಮ ಪ್ರಗತಿ ಕಂಡು ಬಂದಿದೆ.

ಈ ಬಾರಿಯ ಪ್ರಗತಿಗೆ ಉತ್ತರ ಅಮೆರಿಕ, ಯೂರೋಪ್ ಮತ್ತು ಯುನೈ ಟೆಡ್ ಕಿಂಗ್ ಡಂ ಮೂಲದ ಕಂಪೆನಿಗಳಿಂದ ಹೆಚ್ಚಿನ ಸೇವಾ ಬೇಡಿಕೆ ಬಂದಿದ್ದು ಕಾರಣವಾಗಿದೆ. ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ ಕ್ಷೇತ್ರ ಹಾಗೂ ಪರಿಕರ ತಯಾರಿಕಾ ವಲಯದ ಕಂಪೆನಿಗಳಿಗೆ ಸಲ್ಲಿಸಿದ ಸೇವೆಗಳಿಂದ ಹೇರಳ ವರ ಮಾನ ಬಂದಿದೆ.

ಜತೆಗೆ ರೂಪಾಯಿ ಅಪಮೌಲ್ಯದಿಂದ ವಿದೇಶಿ ಗ್ರಾಹಕ ಮೂಲದ ಲಾಭ ಹೆಚ್ಚಳವಾಗಿದೆ ಎಂದು 'ಮುಂಬೈ ಷೇರು ವಿನಿಮಯ ಕೇಂದ್ರ'ಕ್ಕೆ (ಬಿಎಸ್‌ಇ) ಟಿಸಿಎಸ್‌ ಮಂಗಳವಾರ ಸಲ್ಲಿಸಿದ ವರದಿಯಲ್ಲಿ ವಿವರಿಸಿದೆ.
ಪ್ರಸಕ್ತ ತ್ರೈಮಾಸಿಕದಲ್ಲಿ 10 ಕೋಟಿ ಡಾಲರ್ ವಹಿವಾಟಿನ 3 ಕಂಪೆನಿಗಳು ಗ್ರಾಹಕರಾ­ಗಿವೆ. 7,664 ಸಿಬ್ಬಂದಿಗಳನ್ನು ನೇಮಿಸಿ ಕೊಳ್ಳಲಾಗಿದ್ದು, ಕಂಪೆನಿಯಲ್ಲಿನ ಒಟ್ಟು ಉದ್ಯೋಗಿಗಳ ಸಂಖ್ಯೆ 2,85,250ಕ್ಕೇರಿದೆ ಎಂದು ಸಿಎಫ್ ಒ ರಾಜೇಶ್ ಗೋಪಿನಾಥನ್ ಹೇಳಿದ್ದಾರೆ.

English summary
India's largest IT Services company, Tata Consultancy Services (TCS) has reported net profits of Rs 4702 crores for the quarter ending Sept 30, 2013, beating most analysts estimates on profitability.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X