ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಭಾನ್ವಿತರ ಸೆಳೆಯಲು ವೇತನ ಹೆಚ್ಚಿಸಿದ ಟಿಸಿಎಸ್

By Kiran B Hegde
|
Google Oneindia Kannada News

ಬೆಂಗಳೂರು, ಡಿ. 13: ದೇಶದ ಅತಿದೊಡ್ಡ ಸಾಫ್ಟ್‌ವೇರ್ ಕಂಪನಿಗಳಲ್ಲಿ ಒಂದಾದ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ (ಟಿಸಿಎಸ್) ನೂತನ ಉದ್ಯೋಗಿಗಳಿಗೆ ನೀಡುವ ವೇತನದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಲು ನಿರ್ಧರಿಸಿದೆ.

ಈ ಕುರಿತು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಜಾಗತಿಕ ಮುಖ್ಯಸ್ಥ ಅಜೋಯೇಂದ್ರ ಮುಖರ್ಜಿ ಮಾಹಿತಿ ನೀಡಿದ್ದಾರೆ. ದೊಡ್ಡ ಮೊತ್ತದ ವೇತನದ ಮೂಲಕ ಪ್ರತಿಭಾನ್ವಿತರನ್ನು ಸೆಳೆಯುವುದು ಹಾಗೂ ಕಂಪನಿಯಲ್ಲಿ ಅವರ ಬೆಳವಣಿಗೆಗೆ ಉತ್ತಮ ಅವಕಾಶವಿದೆ ಎಂಬುದನ್ನು ಮನವರಿಕೆ ಮಾಡಿಕೊಡುವುದು ನಮ್ಮ ಉದ್ದೇಶ. ಅಲ್ಲದೆ ಹೊಸದಾಗಿ ಆಯ್ಕೆಯಾದವರಿಗೆ ನೀಡುವ ವೇತನವನ್ನು ಅನೇಕ ವರ್ಷಗಳಿಂದ ಪರಿಷ್ಕರಿಸಿರಲಿಲ್ಲ ಎಂದು ತಿಳಿಸಿದ್ದಾರೆ.

tcs

ಎಲ್ಲರಿಗೂ ನಗರ ಭತ್ಯೆ: ಕಂಪನಿಯ ಎಲ್ಲ ಉದ್ಯೋಗಿಗಳು ಹಾಗೂ ಆನ್‌ಲೈನ್ ಪರೀಕ್ಷೆ, ವೈಯಕ್ತಿಕ ಸಂದರ್ಶನ ಮತ್ತು ಇಂಜಿನಿಯರಿಂಗ್ ಕಾಲೇಜುಗಳಿಂದ ನೇಮಕಗೊಂಡು ತರಬೇತಿ ಹಂತದಲ್ಲಿರುವವರಿಗೆ ನಗರ ಭತ್ಯೆಯನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ ಎಂದು ಮುಖರ್ಜಿ ತಿಳಿಸಿದರು.

ಪ್ರತಿವರ್ಷ ಅಂದಾಜು 35,000 ಜನರನ್ನು ಹೊಸದಾಗಿ ನೇಮಕ ಮಾಡಿಕೊಳ್ಳುತ್ತೇವೆ. ಆದರೆ, ಪ್ರತಿ ವರ್ಷ ಬರುವ ಅರ್ಜಿಗಳ ಸಂಖ್ಯೆ ಎರಡು ಲಕ್ಷಕ್ಕಿಂತ ಹೆಚ್ಚು. ಮಾಹಿತಿ ತಂತ್ರಜ್ಞಾನ ಪದವೀಧರರು ಹೆಚ್ಚು ಇಷ್ಟಪಡುವ ಕಂಪನಿ ನಮ್ಮದೇ ಎಂದು ಹೇಳಿಕೊಂಡರು. [169 ಕಂಪನಿ, 25 ಸಾವಿರ ಟೆಕ್ಕಿಗಳು ಫೇಕ್]

ಜಗತ್ತಿನಾದ್ಯಂತ ಈ ವರ್ಷ 55 ಸಾವಿರ ಉದ್ಯೋಗಿಗಳ ನೇಮಕ ಮಾಡಿಕೊಳ್ಳಲಿದ್ದೇವೆ. ಅವರಲ್ಲಿ ಭಾರತದಿಂದಲೇ 35 ಸಾವಿರ ನೇಮಕಾತಿ ಮಾಡಲಾಗುವುದು. ಪ್ರಸಕ್ತ ವರ್ಷ ಈಗಾಗಲೇ 31 ಸಾವಿರ ಯುವಜನತೆಗೆ ಆಫರ್ ಲೆಟರ್ ನೀಡಲಾಗಿದೆ. ಕಂಪನಿಯಲ್ಲಿ ನೇರವಾಗಿ ಹಾಗೂ ಹಿರಿಯ ಅಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಕೂಡ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ದೇಶದಲ್ಲೇ ಅತಿ ಹೆಚ್ಚು ಟೆಕ್ಕಿಗಳ ಕಂಪನಿ: ಪ್ರಸ್ತುತ ಟಿಸಿಎಸ್ ಕಂಪನಿಯ ಮೌಲ್ಯ 13 ಬಿಲಿಯನ್ ಡಾಲರ್ ಬೆಲೆ ಬಾಳುತ್ತದೆ. ಕಂಪನಿಯಲ್ಲಿ 3,13,757 ಸಾಫ್ಟ್‌ವೇರ್ ತಂತ್ರಜ್ಞರಿದ್ದಾರೆ. ಅವರಲ್ಲಿ ಒಂದು ಲಕ್ಷ ಮಹಿಳಾ ಉದ್ಯೋಗಿಗಳು. ನಾವು ಶೇ. 60ರಷ್ಟು ಹೊಸಬರನ್ನು ಹಾಗೂ ಶೇ. 40ರಷ್ಟು ಅನುಭವಿಗಳನ್ನು ಹೊಂದಿದ್ದೇವೆ. ಈ ಸಂಖ್ಯೆ ದೇಶದ ಸಾಫ್ಟ್‌ವೇರ್ ಕಂಪನಿಗಳಲ್ಲಿ ಹಾಗೂ ಖಾಸಗಿ ವಲಯದಲ್ಲಿಯೇ ಅತಿ ಹೆಚ್ಚಿನದು ಎಂದು ಅಜೋಯೇಂದ್ರ ಮುಖರ್ಜಿ ಹೇಳಿಕೊಂಡಿದ್ದಾರೆ.

English summary
Tata Consultancy Services (TCS) is planning to increase its pay offer to freshers recruited directly or through campus interviews. Company wants to attract more talented youth and ensure their retention with bright opportunities to move up the value chain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X