ಏರ್ ಇಂಡಿಯಾ ಶೇರು ಖರೀದಿಗೆ ಟಾಟಾ ಆಸಕ್ತಿ
ನವದೆಹಲಿ, ಡಿಸೆಂಬರ್ 1: ಏರ್ ಇಂಡಿಯಾದ ಶೇರು ಖರೀದಿಗೆ ಟಾಟಾ ಸಂಸ್ಥೆ ಆಸಕ್ತಿ ತೋರಿಸಿದೆ ಎಂದು ಕೇಂದ್ರ ವಿಮಾನಯಾನ ರಾಜ್ಯ ದರ್ಜೆ ಸಚಿವ ಜಯಂತ್ ಸಿನ್ಹಾ ಹೇಳಿದ್ದಾರೆ.
50,000 ಕೋಟಿ ಸಾಲದ ಹೊರೆ ಹೊತ್ತಿರುವ ಏರ್ ಇಂಡಿಯಾದ ಶೇರುಗಳ ಮಾರಾಟಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಈ ಕುರಿತು ತೀರ್ಮಾನ ತೆಗೆದುಕೊಂಡಿರುವ ಸರಕಾರ ಹೂಡಿಕೆದಾರರಿಗಾಗಿ ಹುಡುಕಾಡುತ್ತಿದೆ. ಹಲವು ಕಂಪನಿಗಳು ಹೂಡಿಕೆಗೂ ಮುಂದೆ ಬಂದಿವೆ.

"ಏರ್ ಇಂಡಿಯಾದಲ್ಲಿ ಹೂಡಿಕೆ ಮಾಡುವ ಆರಂಭಿಕ ಪ್ರಸ್ತಾಪವನ್ನು ನಾವು ಇಂಡಿಗೋ ಮತ್ತು ಟಾಟಾ ಸಂಸ್ಥೆಯಿಂದ ಪಡೆದಿದ್ದೇವೆ," ಎಂದು ಸಿನ್ಹಾ ಹೇಳಿದ್ದಾರೆ.
ಆರರಿಂದ ಎಂಟು ತಿಂಗಳ ಒಳಗೆ ಏರ್ ಇಂಡಿಯಾ ಬಿಡ್ ಪ್ರಕ್ರಿಯೆ ಪೂರ್ಣಗೊಳಿಸಲು ಸರಕಾರ ಯೋಜನೆ ಹಾಕಿಕೊಂಡಿದೆ. ಇದರ ಜತೆಗೆ ಬರ್ಡ್ ಗ್ರೂಪ್ ಮತ್ತು ಟರ್ಕಿ ಕಂಪನಿ ಸೆಲೆಬಿ ಕೂಡಾ ಏರ್ ಇಂಡಿಯಾ ಭಾರ ಹೊರಲು ಮುಂದಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.












Click it and Unblock the Notifications