• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟಾಟಾ ಸಫಾರಿ ಹೊಸ ಎಸ್‌ಯುವಿ ಬಿಡುಗಡೆ: ಬೆಲೆ, ವೈಶಿಷ್ಟತೆ ಏನು?

|

ನವದೆಹಲಿ, ಜನವರಿ 27: ಭಾರತದ ಯಶಸ್ವಿ ವಾಹನ ತಯಾರಕ ಟಾಟಾ ಮೋಟಾರ್ಸ್‌ ತನ್ನ ಯಶಸ್ವಿ ಬ್ರಾಂಡ್ ಟಾಟಾ ಸಫಾರಿ ಹೊಸ ಮಾದರಿಯನ್ನು ಪರಿಚಯಿಸಿದೆ. ಫೆಬ್ರವರಿ 4 ರಿಂದ ದೇಶಾದ್ಯಂತ ತನ್ನ ಬುಕಿಂಗ್ ಅನ್ನು ಪ್ರಾರಂಭಿಸಲಿದೆ ಮತ್ತು ಫೆಬ್ರವರಿಯಲ್ಲಿಯೇ ಈ ಕಾರನ್ನು ಬಿಡುಗಡೆ ಮಾಡಲಾಗುವುದು.

ಟಾಟಾ ಸಫಾರಿ ಕಂಪನಿಯ ಹ್ಯಾರಿಯರ್ ಎಸ್‌ಯುವಿ ಆಧಾರಿತ ಮಾದರಿಯಾಗಿದೆ, ಹಿಂದಿನ 5 ಆಸನಗಳಿಗಿಂತ ಭಿನ್ನವಾಗಿ, ಇದನ್ನು 6 ಮತ್ತು 7 ಆಸನಗಳ ಆಯ್ಕೆಗಳೊಂದಿಗೆ ಪರಿಚಯಿಸಲಾಗಿದೆ.

ಹೊಸ ಸಫಾರಿ ವಿನ್ಯಾಸ ಹೇಗಿದೆ ?

ಹೊಸ ಸಫಾರಿ ವಿನ್ಯಾಸ ಹೇಗಿದೆ ?

ಇಂಪ್ಯಾಕ್ಟ್ 2.0 ರೀತಿಯಲ್ಲಿ ಇದನ್ನು ಸಿದ್ಧಪಡಿಸಲಾಗಿದೆ. ಇದು 'ವೈ' ಆಕಾರದ ಗ್ರಿಲ್, ತೆಳುವಾದ ಎಲ್ಇಡಿ ಫಾಗ್ ಲ್ಯಾಂಪ್, ಎಲ್ಇಡಿ ಹೆಡ್ಲೈಟ್ ಮತ್ತು ಮುಂಭಾಗದಲ್ಲಿ ಟರ್ನ್ ಇಂಡಿಕೇಟರ್‌ಗಳನ್ನು ಹೊಂದಿದೆ.

2021ರ ಮರ್ಸಿಡಿಸ್ GLC ಕಾರು ಬಿಡುಗಡೆ: ಬೆಲೆ, ವೈಶಿಷ್ಟ್ಯತೆ ಏನು?2021ರ ಮರ್ಸಿಡಿಸ್ GLC ಕಾರು ಬಿಡುಗಡೆ: ಬೆಲೆ, ವೈಶಿಷ್ಟ್ಯತೆ ಏನು?

ಸಫಾರಿ ಹಿಂಭಾಗವನ್ನು ಹೊಸ ಬಂಪರ್, ಬ್ಲ್ಯಾಕ್- LED ಎಲ್ಇಡಿ ಟೈಲ್‌ಲ್ಯಾಂಪ್‌ಗಳು, ಸಫಾರಿ ಬ್ಯಾಡ್ಜ್‌ಗಳೊಂದಿಗೆ ಮರುವಿನ್ಯಾಸಗೊಳಿಸಲಾಗಿದ್ದು, ಮೂರನೇ ಸಾಲಿನಿಂದಾಗಿ ಅದರ ಆಕಾರವನ್ನು ಸಹ ಬದಲಾಯಿಸಲಾಗಿದೆ.

ಟಾಟಾ ಸಫಾರಿ ಒಳಾಂಗಣ ವಿನ್ಯಾಸ

ಟಾಟಾ ಸಫಾರಿ ಒಳಾಂಗಣ ವಿನ್ಯಾಸ

ಹೊಸ ಸಫಾರಿ ಒಳಾಂಗಣ ಹೊಸ ಚರ್ಮದ ಆಸನ , ಬೀಜ್ ಒಳಾಂಗಣ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಯುಎಸ್‌ಬಿ ಚಾರ್ಜಿಂಗ್ ಸ್ಲಾಟ್‌ಗಳು, 8.8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7 ಇಂಚಿನ ಇನ್ಸ್ಟ್ರುಮೆಂಟ್ ಪ್ಯಾನಲ್, ಜೆಬಿಎಲ್ ಸ್ಪೀಕರ್, ಪ್ಯಾನರೋಮಿಕ್ ಸನ್‌ರೂಫ್, ಐಆರ್ಎ ಸಂಪರ್ಕಿತ ತಂತ್ರಜ್ಞಾನವನ್ನು ಹೊಂದಿದೆ.

ಟಾಟಾ ಸಫಾರಿ ವಿಶೇಷತೆ ಏನು?

ಟಾಟಾ ಸಫಾರಿ ವಿಶೇಷತೆ ಏನು?

ಟಾಟಾ ಸಫಾರಿ 6 ಆಸನಗಳ ರೂಪಾಂತರವು ಮಧ್ಯದ ಸಾಲಿನಲ್ಲಿ 7 ಆಸನಗಳ ರೂಪಾಂತರದಲ್ಲಿ ಬೆಂಚ್ ಸೀಟ್ ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಇದು 6 ಏರ್‌ಬ್ಯಾಗ್, ಎಬಿಎಸ್ ವಿಥ್ ಇಬಿಡಿ, ಹಿಲ್ ಡಿಸೆಂಟ್ ಕಂಟ್ರೋಲ್, ಚೈಲ್ಡ್ ಸೀಟ್ ಐಸೊಫಿಕ್ಸ್, ರಿಯಲ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಹೋಲ್ಡ್ ಕಂಟ್ರೋಲ್ ಹೊಂದಿದೆ.

ಟಾಟಾ ಸಫಾರಿ 2021 ಬೆಲೆ ಎಷ್ಟು?

ಟಾಟಾ ಸಫಾರಿ 2021 ಬೆಲೆ ಎಷ್ಟು?

ಟಾಟಾ ಸಫಾರಿ 2.0 ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಸಿಗಲಿದೆ. ಇದು 173 ಬಿಹೆಚ್‌ಪಿ ಪವರ್ ಮತ್ತು 350 ನ್ಯೂಟನ್ ಮೀಟರ್ ಟಾರ್ಕ್, 6 ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಮತ್ತು 6 ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಪರಿವರ್ತಕ ಗೇರ್‌ಬಾಕ್ಸ್ ಅನ್ನು ಒದಗಿಸುತ್ತದೆ. ಜೊತೆಗೆ ಎಲ್ಲಾ ನಾಲ್ಕು ಚಕ್ರಗಳಲ್ಲಿ ಡಿಸ್ಕ್ ಬ್ರೇಕ್ ನೀಡಲಾಗಿದೆ.

ಇನ್ನು ವಿಶ್ಲೇಷಕರ ಅಂದಾಜಿನ ಪ್ರಕಾರ ಈ ಎಸ್‌ಯುವಿ ಬೆಲೆ 16ರಿಂದ 24 ಲಕ್ಷದವರೆಗೆ ಇರಬಹುದು.

English summary
The much anticipated new-gen Tata Safari 2021 Has Finally been unveiled in India. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X