ಮಾರ್ಚ್ 1ರಿಂದ ತಮಿಳುನಾಡು ವರ್ತಕರು ಕೋಕ್, ಪೆಪ್ಸಿ ಮಾರಲ್ಲ!

Posted By:
Subscribe to Oneindia Kannada

ಚೆನ್ನೈ, ಜನವರಿ 25: ತಮಿಳುನಾಡು ವರ್ತಕರು ಮಾರ್ಚ್ 1ರಿಂದ ಬಹುರಾಷ್ಟ್ರೀಯ ಕಂಪನಿಗಳ ಸಾಫ್ಟ್ ಡ್ರಿಂಕ್ಸ್ ಮಾರದಿರಲು ನಿರ್ಧರಿಸಿದ್ದಾರೆ. ಭಾರತೀಯ ಬ್ರ್ಯಾಂಡ್ ಗಳನ್ನು ಮಾತ್ರ ಪ್ರಚಾರ ಮಾಡಲು ತೀರ್ಮಾನಿಸಿದ್ದಾರೆ ಎಂದು 'ದ ಹಿಂದೂ' ಪತ್ರಿಕೆ ವರದಿ ಮಾಡಿದೆ. ಜಲ್ಲಿಕಟ್ಟು ವಿಚಾರವಾಗಿ ನದೆದ ಬೃಹತ್ ಪ್ರತಿಭಟನೆ ನಂತರ ಈ ನಿರ್ಧಾರ ಕೈಗೊಂಡಿದ್ದಾರೆ.

ಜಲ್ಲಿಕಟ್ಟು ಬೆಂಬಲಿಸಿ ಪ್ರತಿಭಟನೆ ನಡೆಸಿದವರು ಅಮೆರಿಕದಲ್ಲಿ ಕೇಂದ್ರ ಕಚೇರಿ ಹೊಂದಿರುವ 'ಪೇಟಾ' ಹಾಗೂ ಅಮೆರಿಕದ ಪೆಪ್ಸಿ ಹಾಗೂ ಕೋಕ್ ತಂಪು ಪಾನೀಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. "ಅವರಿಂದ ದೇಹಕ್ಕೆ ಅನುಕೂಲಕ್ಕಿಂತ ತೊಂದರೆಯೇ ಹೆಚ್ಚು. ಬ್ರ್ಯಾಂಡ್ ಪೈಕಿ ಒಂದು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲಿ ಹಾನಿಕಾರಕ ರಾಸಾಯನಿಕಗಳಿವೆ" ಎಂದು ತಮಿಳುನಾಡು ವರ್ತಕರ ಸಂಘದ ಅಧ್ಯಕ್ಷ ವಿಕ್ರಮರಾಜ ಹೇಳಿದ್ದಾರೆ.[ಸಂಸ್ಕೃತಿ ಉಳಿಸಿ ಬೆಳೆಸಲು ಜಲ್ಲಿಕಟ್ಟಿನಂಥ ಕ್ರೀಡೆ ಬೇಕೇಬೇಕು]

Tamil Nadu Traders Will Not Sell Coke And Pepsi From March 1

"ಪೆಪ್ಸಿ, ಕೋಕ್ ನವರು ತಿರುನಲ್ವೇಲಿಯ ತಾಮ್ರಭರಣಿ ನದಿಯಿಂದ ನೀರು ತೆಗೆದುಕೊಳ್ಳುತ್ತಿದ್ದು, ಇದರಿಂದ ರೈತರಿಗೆ ನೀರಿಲ್ಲದಂತೆ ಆಗಿದೆ" ಎಂದು ಅವರು ಹೇಳಿದ್ದಾರೆ. ವಾಣಿಜ್ಯ ಒಕ್ಕೂಟದ ಬಳಿ ನೋಂದಾಯಿತ ಆರು ಸಾವಿರ ಒಕ್ಕೂಟಗಳಿವೆ. ಅವುಗಳಲ್ಲಿ 15.87 ಲಕ್ಷ ಸದಸ್ಯರಿದ್ದಾರೆ.ಅವರೆಲ್ಲ ಸರಿ ಈ ನಿರ್ಧಾರದ ಬಗ್ಗೆ ಅರಿವು ಮೂಡಿಸಲಿದ್ದಾರೆ. ಹೋಟೆಲ್, ರೆಸ್ಟೋರೆಂಟ್ ಗಳಲ್ಲೂ ವಿದೇಶಿ ಬ್ರ್ಯಾಂಡ್ ಪಾನೀಯಗಳನ್ನು ಮಾರದಂತೆ ಮನವಿ ಮಾಡಲಿದ್ದಾರೆ.

ವಿಕ್ರಮರಾಜ ಮಾತನಾಡಿ, ವರ್ತಕರು ಕಿನ್ಲೇ ಹಾಗೂ ಪೆಪ್ಸಿ ಕೋ ವಿರುದ್ಧ 1998ರಿಂದ ಹೋರಾಡುತ್ತಿದ್ದೇವೆ. ಜಲ್ಲಿಕಟ್ಟು ಹೋರಾಟದ ನಂತರ ಯುವಜನರೇ ಸಾಫ್ಟ್ ಡ್ರಿಂಕ್ಸ್ ನಿಷೇಧಿಸುವಂತೆ ಬೇಡಿಕೆ ಇಡುತ್ತಿದ್ದಾರೆ. ಅವರ ಮಾತಿನಿಂದ ಉತ್ತೇಜಿತರಾಗಿ ಈ ಅಭಿಯಾನ ನಡೆಸಲು ಮುಂದಾಗಿದ್ದೇವೆ ಎಂದಿದ್ದಾರೆ.[ಯಾವುದನ್ನೂ ನಿಷೇಧಿಸಬೇಡಿ, ನಿಯಂತ್ರಿಸಿ : ಕಮಲ್ ಹಾಸನ್]

Tamil Nadu Traders Will Not Sell Coke And Pepsi From March 1

ಮರೀನಾ ಬೀಚ್ ನಲ್ಲಿ ನಡೆದ ಚಳವಳಿ ವೇಳೆ ಹಲವು ಪ್ರತಿಭಟನಾ ನಿರತರು ಪೆಪ್ಸಿ, ಕೋಕ್ ನಿಷೇಧಕ್ಕೆ ಒತ್ತಾಯಿಸಿದ್ದಾರೆ. ಕೊಯಮತ್ತೂರಿನಲ್ಲಿ ಕೂಲ್ ಡ್ರಿಂಕ್ಸ್ ಬಾಟಲಿಗಳನ್ನು ಒಡೆದುಹಾಕಿದ್ದಾರೆ. ಕೆಲವು ಫುಡ್ ಜಾಯಿಂಟ್ ಗಳು ಹಾಗೂ ಹೋಟೆಲ್ ನವರು ತಂಪು ಪಾನೀಯ ಮಾರುವುದಿಲ್ಲ ಎಂದಿದ್ದಾರೆ.

ಒಂದು ವೇಳೆ ಕೋಕ್, ಪೆಪ್ಸಿ ನಿಷೇಧ ಸಾಧ್ಯವಾಗಲಿಲ್ಲ ಅಂದರೆ. ಅವುಗಳು ಆರೋಗ್ಯದ ಮೇಲೆ ಮಾಡುವ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರ ಅವುಗಳ ಮಾರಾಟ ನಿಷೇಧಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Traders in Tamil Nadu have decided that they will not sell soft drinks manufactured by Multinational Companies (MNCs) from 1 March, and promote only Indian brands. The decision comes in the aftermath of the massive Jallikattu protests which recently rocked the state.
Please Wait while comments are loading...