Share Market: ₹1 ಲಕ್ಷಕ್ಕೆ ಒಂದು ವರ್ಷದಲ್ಲೇ ₹2.57 ಲಕ್ಷ ಲಾಭ ಕೊಟ್ಟ ಷೇರು
ಸುಜ್ಲಾನ್ ಎನರ್ಜಿ ಷೇರುಗಳು ಕಳೆದ ಒಂದು ವರ್ಷದಲ್ಲಿ ಹೂಡಿಕೆದಾರರಿಗೆ ಭರ್ಜರಿ ಆದಾಯ ತಂದುಕೊಟ್ಟಿವೆ. ಗುರುವಾರ ಸುಜ್ಲಾನ್ ಷೇರು ಬೆಲೆಯಲ್ಲಿ 31 ಪೈಸೆಗಳಷ್ಟು ಕುಸಿತ ಕಂಡರೂ ಕಳೆದ ಐದು ದಿನಗಳಲ್ಲಿ 5.09 ರೂಪಾಯಿ ಏರಿಕೆ ಕಂಡಿದೆ. ಆದರೆ ಕಳೆದ ಒಂದು ವರ್ಷದಲ್ಲಿ ಈ ಷೇರು ಬೆಲೆಗಳು 258 ಪ್ರತಿಶತ ಏರಿಕೆಯಾಗಿದ್ದು, ಭರ್ಜರಿ ಲಾಭ ಮಾಡಿಕೊಟ್ಟಿವೆ.
ಗುರುವಾರ ಸುಜ್ಲಾನ್ ಕಂಪನಿಯ ಒಂದು ಷೇರು ಬೆಲೆ 81.64 ರೂಪಾಯಿಗಳಲ್ಲಿ ವಹಿವಾಟು ಮುಕ್ತಾಯಗೊಳಿಸಿದೆ. 1.11 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಸುಜ್ಲಾನ್ ಕಂಪನಿ, ಹೂಡಿಕೆದಾರ ನೆಚ್ಚಿನ ಷೇರುಗಳಲ್ಲಿ ಒಂದಾಗಿದೆ.

ಸುಜ್ಲಾನ್ ಎನರ್ಜಿ ನವೀಕರಿಸಬಹುದಾದ ಪವರ್ ಸಲ್ಯೂಷನ್ ವಿಭಾಗದಲ್ಲಿ ಕೆಲಸ ಮಾಡುತ್ತದೆ. ಇದು ಗಾಳಿ ಟರ್ಬೈನ್‌ಗಳನ್ನು ಉತ್ಪಾದಿಸುತ್ತದೆ ಮತ್ತು ಸೌರ ವಿಕಿರಣ ಮೌಲ್ಯಮಾಪನ, ಭೂ ಸ್ವಾಧೀನ ಮತ್ತು ಅನುಮೋದನೆಗಳು, ಮೂಲಸೌಕರ್ಯ ಮತ್ತು ವಿದ್ಯುತ್ ಸ್ಥಳಾಂತರಿಸುವಿಕೆ, ಪೂರೈಕೆ ಸರಪಳಿ, ಸ್ಥಾಪನೆ ಮತ್ತು ಆಯೋಗ ಮತ್ತು ಜೀವನ ಚಕ್ರ ಆಸ್ತಿ ನಿರ್ವಹಣೆಯಂತಹ ಸೌರ ಶಕ್ತಿ ವಿಭಾಗದಲ್ಲಿ ಕೆಲಸ ಮಾಡುತ್ತದೆ.
ಎನ್‌ಟಿಪಿಸಿ ಲಿ. ಅಂಗಸಂಸ್ಥೆಯಾದ ಎನ್‌ಟಿಪಿಸಿ ಗ್ರೀನ್ ಎನರ್ಜಿ ಲಿಮಿಟೆಡ್‌ನಿಂದ ಭಾರತದ ಅತಿದೊಡ್ಡ ವಿಂಡ್ ಎನರ್ಜಿ ಆರ್ಡರ್ ಅನ್ನು ಕಂಪನಿ ಪಡೆಯುವಲ್ಲಿ ಯಶಸ್ವಿಯಾದ ಬಳಿಕ, ಮೋರ್ಗಾನ್ ಸ್ಟಾನ್ಲಿ ಈ ಷೇರುಗಳ ರೇಟಿಂಗ್ ಅನ್ನು ಹೆಚ್ಚಿಸಿದ ಬಳಿಕ ಬೆಲೆಯಲ್ಲಿ ಏರಿಕೆಯಾಗುತ್ತಿದೆ.
2023-24 ರ ಅವಧಿಯಲ್ಲಿ ಕಂಪನಿಯು ನಿಧಿಯನ್ನು ಸಂಗ್ರಹಿಸಿ ಸುಮಾರು ರೂ 1,500 ಕೋಟಿ ಸಾಲವನ್ನು ತೀರಿಸಿದ ಬಳಿಕ ಷೇರುಗಳು ಹೂಡಿಕೆದಾರರನ್ನು ಆಕರ್ಷಿಸಿದೆ, ದಶಕದಲ್ಲಿ ಮೊದಲ ಬಾರಿಗೆ ನಿವ್ವಳ ಮೌಲ್ಯವನ್ನು ಧನಾತ್ಮಕವಾಗಿ ಮಾಡಿದೆ. ಬ್ಲ್ಯಾಕ್‌ರಾಕ್‌ನಂತಹ ಪ್ರಮುಖ ಹೂಡಿಕೆದಾರರು ಕಂಪನಿಯ ಷೇರುಗಳನ್ನು ಕೊಂಡಿದ್ದಾರೆ. ಐಸಿಐಸಿಐ ಸೆಕ್ಯುರಿಟೀಸ್ ಕೂಡ ಸುಜ್ಲಾನ್ ಎನರ್ಜಿ ಷೇರಿನ ಬೆಲೆಯ ಗುರಿಯನ್ನು 70 ರೂಪಾಯಿಗಳಿಂದ 80 ರೂಪಾಯಿಗೆ ಏರಿಕೆ ಮಾಡಿತ್ತು.
ಕಳೆದ ಒಂದು ವರ್ಷದಲ್ಲಿ ಪ್ರತಿ ಷೇರಿನ ಬೆಲೆ 255 ಪ್ರತಿಶತದಷ್ಟು ಏರಿಕೆಯಾಗಿದೆ, ಇದು ಹೂಡಿಕೆದಾರರ ಬಂಡವಾಳವನ್ನು ಮೂರು ಪಟ್ಟು ಜಾಸ್ತಿ ಮಾಡಿದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ಸುಜ್ಲಾನ್ ಷೇರುಗಳ ಮೇಲೆ 2023ರ ಸೆಪ್ಟೆಂಬರ್ 13ರಂದು 22,150 ರೂಪಾಯಿ ಹೂಡಿಕೆ ಮಾಡಿದ್ದರೆ ಇಂದು ಅದರ ಮೌಲ್ಯ 81,640 ರೂಪಾಯಿ ಆಗಿರುತ್ತಿತ್ತು. 1 ಲಕ್ಷ ರೂಪಾಯಿ ಏನಾದರೂ ಹೂಡಿಕೆ ಮಾಡಿದ್ದರೆ ಇಂದು ಒಟ್ಟು ಮೌಲ್ಯ 3,57,991 ರೂಪೂಯಿ ಆಗಿರುತ್ತಿತ್ತು.
Disclaimer: ಒನ್‌ಇಂಡಿಯಾ ಷೇರು ಮಾರುಕಟ್ಟೆ ಸುದ್ದಿಗಳನ್ನು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ನೀಡುತ್ತದೆ. ಇದನ್ನು ಹೂಡಿಕೆ ಸಲಹೆ ಎಂದು ಪರಿಗಣಿಸಬಾರದು. ಯಾವುದೇ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ತಜ್ಞ ಹಣಕಾಸು ಸಲಹೆಗಾರರ ಜತೆ ಚರ್ಚಿಸುವಂತೆ ಮನವಿ ಮಾಡಲಾಗಿದೆ.












Click it and Unblock the Notifications