• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೋಗ ನಿರೋಧಕ ಶಕ್ತಿ ವೃದ್ಧಿಸುವ ವಿಟಮಿನ್ ಡಿ ಮೊಟ್ಟೆಗೆ ಬೇಡಿಕೆ ಹೆಚ್ಚಳ

|

ಬೆಂಗಳೂರು, ಜೂನ್ 10: ಭಾರತದ ಅತಿ ದೊಡ್ಡ ಕುಕ್ಕುಟೋದ್ಯಮವಾಗಿರುವ ಸುಗುಣ ಫುಡ್ಸ್ ದೇಶದಲ್ಲಿ ಇದೇ ಮೊದಲ ಬಾರಿಗೆ ವಿಟಮಿನ್ ಡಿ ಯುಕ್ತ ಮೊಟ್ಟೆಗಳ ಉತ್ಪಾದನೆಯಲ್ಲಿ ಹೆಚ್ಚಳ ಮಾಡುತ್ತಿದೆ. ಒಂದು ಮೊಟ್ಟೆ ದಿನದ ವಿಟಮಿನ್ ಡಿ ಯ ಶೇ.82 ರಷ್ಟನ್ನು ನೀಡಲಿದೆ. ಈ ವಿಟಮಿನ್ ಡಿ ಪ್ರಸ್ತುತ ಕೋವಿಡ್-19 ಸಂದರ್ಭದಲ್ಲಿ ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅತ್ಯಂತ ಪ್ರಮುಖವಾಗಿಬೇಕಾಗಿದೆ.

   Sriramulu taking a break at a small shop video goes viral | Oneindia Kannada

   ಕಳೆದ ಮಾರ್ಚ್‍ನಿಂದ ಸುಗುಣ ಫುಡ್ಸ್ ವಿಟಮಿನ್ ಡಿ ಯುಕ್ತ ಮೊಟ್ಟೆಗಳ ಉತ್ಪಾದನೆಯನ್ನು ಹೆಚ್ಚು ಮಾಡುತ್ತಲೇ ಬಂದಿದೆ. ಶಕ್ತಿಯುತವಾದ ಸಂಶೋಧನೆ & ಅಭಿವೃದ್ಧಿ ತಂಡವು ಪೌಷ್ಠಿಕಾಂಶಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ.

   ಕೊರೊನಾಭೀತಿ ಇರುವವರು ಯಾವ ಆಹಾರ ಸೇವಿಸಬೇಕು?

   ಈ ಬಗ್ಗೆ ಮಾತನಾಡಿದ ಸುಗುಣ ಫುಡ್ಸ್ ಪ್ರೈವೇಟ್ ಲಿಮಿಟೆಡ್‍ನ ಕಾರ್ಯಕಾರಿ ನಿರ್ದೇಶಕ ವಿಘ್ನೇಶ್ ಸೌಂದರರಾಜನ್ ಅವರು, "ಕೋವಿಡ್-19 ಸೋಂಕು ಹರಡಲು ಆರಂಭಿಸಿದ ದಿನದಿಂದ ನಮ್ಮ ಕಂಪನಿಯು ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಅತ್ಯುತ್ಕøಷ್ಠ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವ ನಿಟ್ಟಿನಲ್ಲಿ ಮಗ್ನವಾಗಿದೆ. ದೇಹಕ್ಕೆ ಅಗತ್ಯವಾಗಿರುವ ವಿಟಮಿನ್ ಡಿ ಯುಕ್ತ ಮೊಟ್ಟೆಗಳ ಉತ್ಪಾದನೆಯನ್ನು ಹೆಚ್ಚಳ ಮಾಡಲೆಂದು ನಮ್ಮ ಕೆಲವು ಫಾರ್ಮ್‍ಗಳನ್ನು ಸ್ಥಳಾಂತರ ಮಾಡಿದ್ದೇವೆ. ನಮ್ಮದೇ ಆದ ಉತ್ಪಾದನೆಯನ್ನು ಹೆಚ್ಚಳ ಮಾಡಲು ಕ್ರಮ ಕೈಗೊಂಡಿದ್ದೇವೆ. ಅಗತ್ಯವಿರುವ ಜನರಿಗೆ ಈ ಮೊಟ್ಟೆಗಳನ್ನು ತಲುಪಿಸುವ ನಿಟ್ಟಿನಲ್ಲಿ ನಾವು ಸರ್ಕಾರಗಳು ಮತ್ತು ಇತರೆ ಸ್ಥಳೀಯ ಆಡಳಿತಗಳ ಜತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ" ಎಂದು ತಿಳಿಸಿದರು.

   ಸುಗುಣ ತನ್ನ ಸುಗುಣ ಮೌಲ್ಯವರ್ಧಿತ ಮೊಟ್ಟೆಗಳಡಿ ನಾಲ್ಕು ವಿಧದ ಮೌಲ್ಯವರ್ಧಿತ ಮೊಟ್ಟೆಗಳನ್ನು ಜನರಿಗೆ ತಲುಪಿಸುತ್ತಿದೆ. ಈ ನಾಲ್ಕು ವಿಧದ ಮೊಟ್ಟೆಗಳು ಸಮತೋಲಿತ ಆಹಾರ ಪದ್ಧತಿ ಮತ್ತು ಆರೋಗ್ಯಕರವಾದ ಜೀವನಶೈಲಿಗೆ ಸಹಕಾರಿಯಾಗುತ್ತವೆ. ಇದಲ್ಲದೇ, ಎಲ್ಲಾ ವಯೋಮಾನದವರು ಮತ್ತು ಯಾವುದೇ ಆರೋಗ್ಯ ಸ್ಥಿತಿಯಲ್ಲಿರುವವರು ಈ ಮೊಟ್ಟೆಗಳನ್ನು ಸೇವಿಸಬಹುದಾಗಿದೆ. ಆರು ಮೊಟ್ಟೆ ಒಂದು ಪ್ಯಾಕ್‍ಗೆ 69 ರೂಪಾಯಿ ಬೆಲೆ ಇದೆ. ಗ್ರಾಹಕರ ಅಭಿರುಚಿ ಮತ್ತು ಅವರ ಅಗತ್ಯತೆಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದ ನಂತರ 2015 ರಲ್ಲಿ ಈ ವಿಟಮಿನ್ ಡಿ ಮೊಟ್ಟೆಗಳ ಉತ್ಪಾದನೆಯನ್ನು ಆರಂಭಿಸಲಾಗಿತ್ತು. ಸುಗುಣ ಡೈಲಿ ಫ್ರೆಶ್ ಸ್ಟೋರ್ ಗಳು ಮತ್ತು ಪ್ರಮುಖ ಸೂಪರ್ ಮಾರುಕಟ್ಟೆಗಳಲ್ಲಿ ಈ ಮೊಟ್ಟೆಗಳು ಲಭ್ಯವಿವೆ.

   English summary
   India’s largest poultry conglomerate, Suguna Foods announced that it has ramped up the production of Vitamin D enriched eggs, the first of its kind in the country, as part of its relentless commitment to support the public health response and protect their well-being.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X