ಫೋರ್ಬ್ಸ್ ಸೆಲೆಬ್ರಿಟಿಗಳಾದ ನಮ್ಮ ಸುದೀಪ್-ದರ್ಶನ್

Posted By:
Subscribe to Oneindia Kannada

ಬೆಂಗಳೂರು, ಡಿ.13: ಪ್ರಖ್ಯಾತ ಜಾಗತಿಕ ನಿಯತಕಾಲಿಕೆ ಫೋರ್ಬ್ಸ್'ನ ಟಾಪ್-100 ಭಾರತೀಯ ಶ್ರೀಮಂತರ ಪಟ್ಟಿಯನ್ನು ಪ್ರಕಟಿಸಿದ ಬೆನ್ನಲ್ಲೇ ಭಾರತದ ಟಾಪ್ ಸೆಲೆಬ್ರಿಟಿಗಳ ಪಟ್ಟಿಯನ್ನು ಹೊರ ಹಾಕಿದೆ. ನಿರೀಕ್ಷೆಯಂತೆ ಕಿಂಗ್ ಖಾನ್ ಶಾರುಖ್ ಅವರು ಈ ಬಾರಿ ಕೂಡಾ ಅಗ್ರಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಕನ್ನಡ ನಟರಾದ ಸುದೀಪ್ ಹಾಗೂ ದರ್ಶನ್ ಕೂಡಾ ಸ್ಥಾನ ಪಡೆದು ಹೆಮ್ಮೆ ಮೂಡಿಸಿದ್ದಾರೆ.

ನಟ, ನಟಿ, ನಿರ್ದೇಶಕ, ಕಾಮಿಡಿಯನ್, ಸಾಹಿತಿ, ಗಾಯಕ/ ಸಂಗೀತಗಾರ, ಕ್ರಿಕೆಟರ್ ಹಾಗೂ ಟಿವಿ ಕ್ಷೇತ್ರದ ಜನಪ್ರಿಯ ತಾರೆಯರ ಗಳಿಕೆ, ಜನಪ್ರಿಯತೆ ಆಧಾರದ ಮೇಲೆ ಈ ಪಟ್ಟಿಯನ್ನು ರಚಿಸಲಾಗುತ್ತದೆ. ಕಳೆದ ಬಾರಿ ಅಗ್ರಸ್ಥಾನ ಗಳಿಸಿದ್ದ ಶಾರುಖ್ ಖಾನ್ ಅವರು 2013ರ ಪಟ್ಟಿಯಲ್ಲೂ ಅಗ್ರಸ್ಥಾನ ಗಳಿಸಿದ್ದಾರೆ.

2013 ವರ್ಷದಲ್ಲಿ ಸುದೀಪ್ ಹಾಗೂ ದರ್ಶನ್ ಇಬ್ಬರೂ ಉತ್ತಮ ಚಿತ್ರಗಳನ್ನು ನೀಡಿದ್ದಾರಲ್ಲದೆ, ಜನಪ್ರಿಯತೆಯ ಗ್ರಾಫ್ ಕೂಡಾ ಹೆಚ್ಚಿಸಿಕೊಂಡಿದ್ದಾರೆ. ಸುದೀಪ್ ಅವರು 62ನೇ ಸ್ಥಾನದಲ್ಲಿದ್ದರೆ, ದರ್ಶನ್ ಅವರು 65ನೇ ಸ್ಥಾನದಲ್ಲಿದ್ದಾರೆ.

ಭಾರತದ ಗಣ್ಯರ ಮನರಂಜನೆ ಆಧಾರಿತ ಗಳಿಕೆ(ಕೋಟಿಗಳಲ್ಲಿ) ಗಣ್ಯರು ಮುದ್ರಣ, ಟಿವಿ, ಹಾಗೂ ಇಂಟರ್ನೆಟ್(ಸಾಮಾಜಿಕ ಜಾಲ ತಾಣ) ಮಾಧ್ಯಮಗಳಲ್ಲಿ ಎಷ್ಟು ಜನಪ್ರಿಯತೆ ಗಳಿಸಿದ್ದಾರೆ ಲೆಕ್ಕ ಹಾಕಲಾಗುತ್ತದೆ. ಎಕ್ಸೀಡ್ ಎಂಟರ್ ಟೈನ್ಮೆಂಟ್, ಲೆಕ್ಸಿಸ್ ನೆಕ್ಸಿಸ್, ಐಓಎಸ್ ಸ್ಫೋರ್ಟ್ಸ್ ಹಾಗೂ ಎಂಟರ್ ಟೈನ್ಮೆಂಟ್, ಪರ್ಸ್ಪೆಟ್ ಟ್ಯಾಲೆಂಟ್ ಮ್ಯಾನೇಜ್ಮೆಂಟ್, ಗಲಾಟಾ ಮ್ಯಾಗಜೀನ್, TAM-Eikona ಮುಂತಾದ ಸಂಸ್ಥೆಗಳು ನೀಡಿದ ಮಾಹಿತಿ ಆಧಾರಿಸಿ ಫೋರ್ಬ್ಸ್ ಇಂಡಿಯಾ.ಕಾಂ ಈ ಪಟ್ಟಿ ತಯಾರಿಸಿದೆ.

ಇದರ ಜತೆಗೆ ಇಂಡಿಯಾಟೆಲಿವಿಷನ್.ಕಾಂ, ರೇಡಿಯೋಮ್ಯೂಸಿಕ್,ಕಾಂ, ಟೆಲಿಚಕ್ಕರ್.ಕಾಂ, ನೆಲ್ಸನ್ ಬುಕ್ ಸ್ಕ್ಯಾನ್ ಗಳಿಂದ ಕೂಡಾ ಮಾಹಿತಿ ಪಡೆಯಲಾಗಿದೆ. ಎಲ್ಲಾ ಮಾಹಿತಿ ಹಾಗೂ ಪಟ್ಟಿಯನ್ನು Ernst and Young ಸಂಸ್ಥೆ ಪರೀಕ್ಷಿಸಿ ಓಕೆ ಮಾಡಿದ ಮೇಲೆ ಪ್ರಕಟಿಸಲಾಗಿದೆ. ಸುಮಾರು 125 ಮುಖಬೆಲೆಯ ಫೋರ್ಬ್ಸ್ ಇಂಡಿಯಾ ಮ್ಯಾಗಜೀನ್ ಡಿ.13ರಂದು ಪ್ರಕಟಗೊಂಡಿದ್ದು, ಮುಖಪುಟದಲ್ಲಿ ಕ್ರಿಕೆಟರ್ ವಿರಾಟ್ ಕೊಹ್ಲಿ ಮಿಂಚುತ್ತಿದ್ದಾರೆ. 100 ಗಣ್ಯರ ಪಟ್ಟಿಯ ಟಾಪ್ 10 ಸೆಲೆಬ್ರಿಟಿಗಳನ್ನು ನೋಡಿ...

ಕಿಚ್ಚ ಸುದೀಪ್

ಕಿಚ್ಚ ಸುದೀಪ್

ಇಂಜಿನಿಯರಿಂಗ್ ಓದಿರುವ 40 ವರ್ಷ ವಯಸ್ಸಿನ ಕಿಚ್ಚ ಸುದೀಪ್ ಅವರು ಕನ್ನಡ ಚಿತ್ರರಂಗದ ಗಡಿ ದಾಟಿ ದೇಶ ವಿದೇಶಗಳಲ್ಲಿ ತನ್ನ ಪ್ರತಿಭೆ ಮೂಲಕ ಜನಪ್ರಿಯತೆ, ಮೆಚ್ಚುಗೆ ಗಳಿಸಿದ್ದಾರೆ. ಈ ಟಿವಿ ಕನ್ನಡ ವಾಹಿನಿಯ ಬಿಗ್ ಬಾಸ್ ನಿರೂಪಕರಾಗಿ ಮಿಂಚಿದ್ದಾರೆ. ತೆಲುಗು-ತಮಿಳು ಚಿತ್ರರಂಗದಲಿ ವಿಲನ್ ಆಗಿ, ಹಿಂದಿ ಚಿತ್ರರಂಗದಲ್ಲೂ ನಟಿಸಿದ್ದಾರೆ.

2013ರ ಸೆಲೆಬ್ರಿಟಿ ಶ್ರೇಯಾಂಕ ಪಟ್ಟಿಯಲ್ಲಿ 62ನೇ ಸ್ಥಾನಗಳಿಸಿದ್ದಾರೆ.
# ಹಣಗಳಿಕೆಯಲ್ಲಿ 52ನೇ ಸ್ಥಾನ (ಒಟ್ಟು ಗಳಿಕೆ 13.5 ಕೋಟಿ ರು)
# ಜನಪ್ರಿಯತೆಯಲ್ಲಿ 61ನೇ ಸ್ಥಾನ

ದರ್ಶನ್ ತೂಗುದೀಪ

ದರ್ಶನ್ ತೂಗುದೀಪ

ಹೈಸ್ಕೂಲ್ ಪಾಸಾಗಿರುವ 36 ವರ್ಷ ವಯಸ್ಸಿನ ದರ್ಶನ್ ತೂಗುದೀಪ ಅವರು 2012ರ ಬ್ಲಾಕ್ ಬ್ಲಾಸ್ಟರ್ ಚಿತ್ರ ಸಂಗೊಳ್ಳಿ ರಾಯಣ್ಣ ನಂತರ ಚಿತ್ರರಂಗದಲ್ಲಿ ಎತ್ತರ ಸ್ಥಾನಕ್ಕೇರಿದರು. ಚಿತ್ರರಂಗದಲ್ಲಿ ಸ್ವಂತ ಶೂಟಿಂಗ್ ಯೂನಿಟ್, ಪ್ರೊಡೆಕ್ಷನ್, ವಿತರಕ ಸಂಸ್ಥೆಯನ್ನು ಹೊಂದಿದ್ದಾರೆ.

2013ರ ಸೆಲೆಬ್ರಿಟಿ ಶ್ರೇಯಾಂಕ ಪಟ್ಟಿಯಲ್ಲಿ 65ನೇ ಸ್ಥಾನಗಳಿಸಿದ್ದಾರೆ.
# ಹಣಗಳಿಕೆಯಲ್ಲಿ 28ನೇ ಸ್ಥಾನ (ಒಟ್ಟು ಗಳಿಕೆ 24 ಕೋಟಿ ರು)
# ಜನಪ್ರಿಯತೆಯಲ್ಲಿ 98ನೇ ಸ್ಥಾನ

ಶಾರುಖ್ ಖಾನ್

ಶಾರುಖ್ ಖಾನ್

48 ವರ್ಷ ವಯಸ್ಸಿನ ಶಾರುಖ್ ಖಾನ್ ಸ್ನಾತಕೋತ್ತರ ಪದವಿಧರನಾಗಿದ್ದು ನಟನೆ ಹಾಗೂ ಜಾಹೀರಾತುಗಳ ಮೂಲಕ ಸಂಭಾವನೆ ಪಡೆಯುತ್ತಿದ್ದಾರೆ. ಜಬ್ ತಕ್ ಹೈ ಜಾನ್ ಹಾಗೂ ಚೆನ್ನೈ ಎಕ್ಸ್ ಪ್ರೆಸ್ ಸೂಪರ್ ಹಿಟ್ ಚಿತ್ರಗಳನ್ನು ಇತ್ತೀಚೆಗೆ ನೀಡಿದ್ದಾರೆ. 2012ರ ಸೆಲೆಬ್ರಿಟಿ ಶ್ರೇಯಾಂಕ ಪಟ್ಟಿಯಲ್ಲೂ ಶಾರುಖ್ ನಂ.1 ಸ್ಥಾನದಲ್ಲಿದ್ದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಶಾರುಖ್ ಗಳಿಕೆ ಶೇ 9 ರಷ್ಟು ಏರಿಕೆಯಾಗಿದೆ. ಆದರೆ, ಜಾಹೀರಾತುಗಳ ಸಂಖ್ಯೆ 23 ರಿಂದ 19ಕ್ಕೆ ಕುಸಿದಿದೆ.

2013ರ ಸೆಲೆಬ್ರಿಟಿ ಶ್ರೇಯಾಂಕ ಪಟ್ಟಿಯಲ್ಲಿ 1ನೇ ಸ್ಥಾನಗಳಿಸಿದ್ದಾರೆ.
# ಹಣಗಳಿಕೆಯಲ್ಲಿ 1ನೇ ಸ್ಥಾನ (ಒಟ್ಟು ಗಳಿಕೆ 220.5 ಕೋಟಿ ರು)
# ಜನಪ್ರಿಯತೆಯಲ್ಲಿ 4ನೇ ಸ್ಥಾನ

ಎಂಎಸ್ ಧೋನಿ

ಎಂಎಸ್ ಧೋನಿ

2013ರ ಸೆಲೆಬ್ರಿಟಿ ಶ್ರೇಯಾಂಕ ಪಟ್ಟಿಯಲ್ಲಿ 2ನೇ ಸ್ಥಾನಗಳಿಸಿದ್ದಾರೆ.
# ಹಣಗಳಿಕೆಯಲ್ಲಿ 3ನೇ ಸ್ಥಾನ (ಒಟ್ಟು ಗಳಿಕೆ 155.32 ಕೋಟಿ ರು)
# ಜನಪ್ರಿಯತೆಯಲ್ಲಿ 2ನೇ ಸ್ಥಾನ

2012ರಲ್ಲಿ 3ನೇ ಸ್ಥಾನದಲ್ಲಿದ್ದ 32 ವರ್ಷದ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರಿಗೆ ಪಂದ್ಯದ ಸಂಭಾವನೆ, ಐಪಿಎಲ್ ಡೀಲ್, ಜಾಹೀರಾತಿನಿಂದ ದುಡ್ಡು ಸಿಗುತ್ತದೆ. ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲದಿದ್ದರೂ ಇರಡು ಹೆಚ್ಚು ಆಡ್ ಸೇರಿಸಿಕೊಂಡು 23 ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಧೋನಿ ಅವರ ಬೈಕ್ ರೇಸಿಂಗ್ ಕೂಡಾ ಸದ್ದು ಮಾಡುತ್ತಿದೆ. ದೇಶದೆಲ್ಲೆಡೆ ಜಿಮ್ ಕೇಂದ್ರ ತೆರೆದಿದ್ದಾರೆ.

ಸಲ್ಮಾನ್ ಖಾನ್

ಸಲ್ಮಾನ್ ಖಾನ್

2013ರ ಸೆಲೆಬ್ರಿಟಿ ಶ್ರೇಯಾಂಕ ಪಟ್ಟಿಯಲ್ಲಿ 3ನೇ ಸ್ಥಾನಗಳಿಸಿದ್ದಾರೆ.
# ಹಣಗಳಿಕೆಯಲ್ಲಿ 2ನೇ ಸ್ಥಾನ (ಒಟ್ಟು ಗಳಿಕೆ 157.5 ಕೋಟಿ ರು)
# ಜನಪ್ರಿಯತೆಯಲ್ಲಿ 3ನೇ ಸ್ಥಾನ

48 ವರ್ಷ ವಯಸ್ಸಿನ ಸಲ್ಮಾನ್ ಖಾನ್ ಕಳೆದ ಬಾರಿ 2ನೇ ಸ್ಥಾನದಲ್ಲಿದ್ದವರು ಈ ಬಾರಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಕಳೆದ ಬಾರಿ ಜನಪ್ರಿಯತೆಯಲ್ಲಿ ನಂ.1 ಸ್ಥಾನ ಪಡೆದಿದ್ದರು ಆದರೆ, ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆ ಇವರ ಕೈ ಹಿಡಿದಿದೆ. being human ಸಂಸ್ಥೆ ಹೆಸರಿನಲ್ಲಿ ನಡೆಸುವ ದಾನ ಧರ್ಮ ಕಾರ್ಯ ಕೂಡಾ ಇಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ.

ಸಚಿನ್ ತೆಂಡೂಲ್ಕರ್ ಸ್ಥಾನ #4

ಸಚಿನ್ ತೆಂಡೂಲ್ಕರ್ ಸ್ಥಾನ #4

# ಹಣಗಳಿಕೆಯಲ್ಲಿ 6ನೇ ಸ್ಥಾನ (ಒಟ್ಟು ಗಳಿಕೆ 94.32 ಕೋಟಿ ರು)
# ಜನಪ್ರಿಯತೆಯಲ್ಲಿ 1ನೇ ಸ್ಥಾನ
ಕಳೆದ ವರ್ಷ 6ನೇ ಸ್ಥಾನದಲ್ಲಿದ್ದರು.

ಅಮಿತಾಬ್ ಬಚ್ಚನ್ #5

ಅಮಿತಾಬ್ ಬಚ್ಚನ್ #5

# ಒಟ್ಟು ಗಳಿಕೆ 147.5 ಕೋಟಿ ರು
# ಹಣಗಳಿಕೆಯಲ್ಲಿ 4ನೇ ಸ್ಥಾನ
# ಜನಪ್ರಿಯತೆಯಲ್ಲಿ 5ನೇ ಸ್ಥಾನ
# 2012ರಲ್ಲಿ ಗಣ್ಯರ ಪಟ್ಟಿಯಲ್ಲಿ 5ನೇ ಸ್ಥಾನ

ಅಕ್ಷಯ್ ಕುಮಾರ್ #6

ಅಕ್ಷಯ್ ಕುಮಾರ್ #6

# ಒಟ್ಟು ಗಳಿಕೆ 118.13 ಕೋಟಿ ರು
# ಹಣಗಳಿಕೆಯಲ್ಲಿ 5ನೇ ಸ್ಥಾನ
# ಜನಪ್ರಿಯತೆಯಲ್ಲಿ 12ನೇ ಸ್ಥಾನ
# 2012ರಲ್ಲಿ ಗಣ್ಯರ ಪಟ್ಟಿಯಲ್ಲಿ 4ನೇ ಸ್ಥಾನ

ವಿರಾಟ್ ಕೊಹ್ಲಿ #7

ವಿರಾಟ್ ಕೊಹ್ಲಿ #7

# ಒಟ್ಟು ಗಳಿಕೆ 57.31 ಕೋಟಿ ರು
# ಹಣಗಳಿಕೆಯಲ್ಲಿ 12ನೇ ಸ್ಥಾನ
# ಜನಪ್ರಿಯತೆಯಲ್ಲಿ 6ನೇ ಸ್ಥಾನ
# 2012ರಲ್ಲಿ ಗಣ್ಯರ ಪಟ್ಟಿಯಲ್ಲಿ 9ನೇ ಸ್ಥಾನ

ರಣಬೀರ್ ಕಪೂರ್ #8

ರಣಬೀರ್ ಕಪೂರ್ #8

# ಒಟ್ಟು ಗಳಿಕೆ 68.58 ಕೋಟಿ ರು
# ಹಣಗಳಿಕೆಯಲ್ಲಿ 7ನೇ ಸ್ಥಾನ
# ಜನಪ್ರಿಯತೆಯಲ್ಲಿ 13ನೇ ಸ್ಥಾನ
# 2012ರಲ್ಲಿ ಗಣ್ಯರ ಪಟ್ಟಿಯಲ್ಲಿ 11ನೇ ಸ್ಥಾನ

ಕತ್ರೀನಾ ಕೈಫ್ #9

ಕತ್ರೀನಾ ಕೈಫ್ #9

# ಒಟ್ಟು ಗಳಿಕೆ 63.75 ಕೋಟಿ ರು
# ಹಣಗಳಿಕೆಯಲ್ಲಿ 8ನೇ ಸ್ಥಾನ
# ಜನಪ್ರಿಯತೆಯಲ್ಲಿ 16ನೇ ಸ್ಥಾನ
# 2012ರಲ್ಲಿ ಗಣ್ಯರ ಪಟ್ಟಿಯಲ್ಲಿ 10ನೇ ಸ್ಥಾನ

ಹೃತಿಕ್ ರೋಷನ್ #10

ಹೃತಿಕ್ ರೋಷನ್ #10

# ಒಟ್ಟು ಗಳಿಕೆ 62.5 ಕೋಟಿ ರು
# ಹಣಗಳಿಕೆಯಲ್ಲಿ 9ನೇ ಸ್ಥಾನ
# ಜನಪ್ರಿಯತೆಯಲ್ಲಿ 21ನೇ ಸ್ಥಾನ
# 2012ರಲ್ಲಿ ಗಣ್ಯರ ಪಟ್ಟಿಯಲ್ಲಿ 16ನೇ ಸ್ಥಾನ
ಸಮಗ್ರ ವಿವರಕ್ಕಾಗಿ ಫೋರ್ಬ್ ಇಂಡಿಯಾ.ಕಾಂ ವೆಬ್ ತಾಣಕ್ಕೆ ಭೇಟಿಕೊಡಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Shah Rukh Khan Tops Forbes India Celebrity 100 List Second Time In A Row. There is a good news for Sudeep and Darshan's fans. Popular duo of Kannada cinema become the first Kannada actors to be listed in the top 100 Celebrities list of India.
Please Wait while comments are loading...