ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಸರ್ಕಾರದ 'ರಿಯಲ್ ಎಸ್ಟೇಟ್ ಕಾಯ್ದೆ' ಶೀಘ್ರವೇ ಅನುಷ್ಠಾನ?

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ರಿಯಲ್ ಎಸ್ಟೇಟ್ ಕಾಯ್ದೆ'ಗೆ ಶೀಘ್ರದಲ್ಲೇ ಅಂತಿಮ ಸ್ವರೂಪ. ಆನಂತರ, ಸಂಪುಟ ಸಭೆಯಲ್ಲಿ ಚರ್ಚೆಗೆ. ಕಾಯ್ದೆ ಜಾರಿ ಶೀಘ್ರದಲ್ಲೇ ಎಂದು ತಿಳಿಸಿದ ಮುಖ್ಯಮಂತ್ರಿ ಕಚೇರಿ.

|
Google Oneindia Kannada News

ಬೆಂಗಳೂರು, ಜುಲೈ 1: ದೀರ್ಘಕಾಲದಿಂದಲೂ ಜನ ಸಾಮಾನ್ಯರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ರಿಯಲ್ ಎಸ್ಟೇಟ್ ಕಾಯ್ದೆಯು ಶೀಘ್ರದಲ್ಲೇ ಅನುಷ್ಠಾನಕ್ಕೆ ಬರಲಿದೆ ಎಂದು ಕೆಲ ಮೂಲಗಳು ತಿಳಿಸಿವೆ.

ದೀರ್ಘಕಾಲದಿಂದಲೂ ನೆನೆಗುದಿಗೆ ಬಿದ್ದಿರುವುದರಿಂದ ಪ್ರಭಾವಶಾಲಿಯಾಗಿರುವ ಈ ಕಾಯ್ದೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿರುವ ಬಗ್ಗೆ ಜನ ಸಾಮಾನ್ಯರಲ್ಲಿ ಆತಂಕ ಹುಟ್ಟಿಸಿತ್ತು.

STATE RERA SET TO BE ROLLED OUT SOON

ಈ ಆತಂಕಗಳನ್ನು ದೂರಾಗಿಸಿರುವ ಮುಖ್ಯಮಂತ್ರಿ ಕಚೇರಿ, ಶೀಘ್ರದಲ್ಲೇ ಕಾಯ್ದೆಯನ್ನು ವಿಧಾನಸಭೆಯಲ್ಲಿ ಮಂಡಿಸುವುದಾಗಿ ತಿಳಿಸಿದೆ. ಅಲ್ಲದೆ, ಗ್ರಾಹಕರ ಸುರಕ್ಷೆಯನ್ನು ಗಮನದಲ್ಲಿಟ್ಟುಕೊಂಡೇ ಕಾಯ್ದೆಗೆ ಅಂತಿಮ ರೂಪ ನೀಡಲಾಗುತ್ತಿದೆ ಎಂದು ಹೇಳಿದೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ವಿವರಣೆ ನೀಡಿರುವ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ (1) ಎಲ್.ಕೆ. ಅತೀಖ್, ''ಕಾಯ್ದೆಯ ಬಗ್ಗೆ ಕೆಲವಾರು ಸಂಸ್ಥೆಗಳಿಂದ ಆತಂಕ ವ್ಯಕ್ತವಾಗಿದ್ದರಿಂದ ಕಾಯ್ದೆ ಮಂಡನೆಗೆ ತಡವಾಯಿತು. ಶೀಘ್ರದಲ್ಲೇ ಕಾಯ್ದೆಗೆ ಅಂತಿಮ ಸ್ವರೂಪ ಕೊಟ್ಟು, ಅದನ್ನು ಮುಂದಿನ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು'' ಎಂದಿದ್ದಾರೆ.

English summary
Overcoming the inordinate delay in clearing the Real Estate (Regulation and Development- RERA) Act, the state government is all set to roll out the final bill soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X