ಅಕ್ಟೋಬರ್ ತಿಂಗಳಿಂದ 12 ಹೊಸ ಮಾರ್ಗದಲ್ಲಿ ಸ್ಪೈಸ್ ಜೆಟ್ ಹಾರಾಟ
ನವದೆಹಲಿ, ಆಗಸ್ಟ್ 16: ದೆಹಲಿ ಹಾಗೂ ಬೆಂಗಳೂರು ನಡುವೆ ವಿಮಾನಯಾನ ಸೇರಿದಂತೆ 12 ಹೊಸ ವಿಮಾನಯಾನ ಮಾರ್ಗಗಳಲ್ಲಿ ಸ್ಪೈಸ್ ಜೆಟ್ ಹಾರಾಟಕ್ಕೆ ಸಜ್ಜಾಗಿದೆ. ಅಕ್ಟೋಬರ್ ತಿಂಗಳಿನಿಂದ ಹೊಸ ಮಾರ್ಗಗಳಲ್ಲಿ ಸ್ಪೈಸ್ ಜೆಟ್ ವಿಮಾನಗಳು ಹಾರಾಟ ನಡೆಸಲಿವೆ ಎಂದು ಸಂಸ್ಥೆ ಪ್ರಕಟಿಸಿದೆ.
ಶುಕ್ರವಾರದಂದು ದೇಶಿ ವಿಮಾನಯಾನದ 53ನೇ ತಾಣವಾಗಿ ಔರಂಗಾಬಾದ್ ಎಂಟ್ರಿಯಾಗಿದೆ. ಮಿತವ್ಯಯಿ ವಿಮಾನಯಾನ ಸಂಸ್ಥೆ ಇದೇ ಸಂತಸದಲ್ಲಿ 12 ಹೊಸ ಮಾರ್ಗಗಳನ್ನು ಘೋಷಿಸಿದೆ.

ದೆಹಲಿ ಹಾಗೂ ಔರಂಗಾಬಾದ್, ದೆಹಲಿ- ತಿರುವನಂತಪುರಂ, ಕೋಲ್ಕತಾ ಹಾಗೂ ಅಹಮದಾಬಾದ್ ಸೆಕ್ಟರ್ ನಲ್ಲಿ ಹೊಸ ವಿಮಾನಗಳು ಸಂಚರಿಸಲಿವೆ.
ಅಕ್ಟೋಬರ್ ಮೊದಲ ವಾರದಲ್ಲಿ ಹೊಸ ಮಾರ್ಗಗಳು ಸಂಚಾರಕ್ಕೆ ಮುಕ್ತವಾಗಲಿವೆ. ದೆಹಲಿ-ಕೋಲ್ಕತ್ತಾ ನಡುವೆ ಹಾಗೂ ದೆಹಲಿ -ಬೆಂಗಳೂರು ನಡುವಿನ ಹಾಲಿ ಮಾರ್ಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಮಾನಗಳು ಸಂಚರಿಸಲಿವೆ ಎಂದು ಸ್ಪೈಸ್ ಜೆಟ್ ವಿಮಾನ ಸಂಸ್ಥೆ ಹೇಳಿದೆ.(ಪಿಟಿಐ)











Click it and Unblock the Notifications