ಅಡಚಣೆಗಾಗಿ ಕ್ಷಮಿಸಿ ಎಂದ ತಂತ್ರಜ್ಞಾನ ಲೋಕದ ದಿಗ್ಗಜ ಮಾರ್ಕ್
ವಾಷಿಂಗ್ಟನ್, ಅಕ್ಟೋಬರ್ 5: ಜಾಗತಿಕವಾಗಿ ವಾಟ್ಸಾಪ್, ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್ ಸೇವೆಯಲ್ಲಿ ಉಂಟಾದ ವ್ಯತ್ಯಯಕ್ಕೆ ಟೆಕ್ ಲೋಕದ ದಿಗ್ಗಜ, ಸಿಇಒ ಮಾರ್ಕ್ ಜುಗರ್ ಬರ್ಗ್ ಕ್ಷಮೆಯಾಚಿಸಿದ್ದಾರೆ. ಫೇಸ್ ಬುಕ್ ಒಡೆತನದ ಮೂರು ಅಪ್ಲಿಕೇಷನ್ ಗಳು ಸದ್ಯ ಆನ್ ಲೈನ್ ಗೆ ಬಂದಿದ್ದು, ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದಿದ್ದಾರೆ.
ಭಾರತೀಯ ಕಾಲಮಾನದಂತೆ ಅಕ್ಟೋಬರ್ 04ರಂದು ರಾತ್ರಿ 9 ಗಂಟೆಯ ನಂತರ ಈ ಮೂರು ಅಪ್ಲಿಕೇಷನ್ಸ್ ಸ್ಥಗಿತಗೊಂಡಿದ್ದವು. ಆಂಡ್ರಾಯ್ಡ್ , ಐಒಎಸ್ ಹಾಗೂ ವೆಬ್ ಅಪ್ಲಿಕೇಷನ್ಸ್ ಎಲ್ಲೆಡೆ ಸೇವೆ ಬಂದ್ ಆಗಿತ್ತು. ವಾಟ್ಸಾಪ್ ಸಂದೇಶಗಳು ಹೋಗುತ್ತಿರಲಿಲ್ಲ, ಹೊಸ ಸಂದೇಶ ಬರುತ್ತಿರಲಿಲ್ಲ, ಸ್ಟೇಟಸ್ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ, ಇನ್ನೊಂದೆಡೆ ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ನಲ್ಲಿ ಯಾವುದೇ ಫೀಡ್‌ಗಳು ಬರುತ್ತಿರಲಿಲ್ಲ. ಕ್ಯಾಲಿಫೋರ್ನಿಯಾದ ಕಚೇರಿಯಲ್ಲಿರುವ ಮುಖ್ಯ ಸರ್ವರ್ ನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಈ ಭಾರಿ ಅಡಚಣೆ ಉಂಟಾಗಿತ್ತು.
ಇದು ಜಾಗತಿಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಂಡ ಭಾರಿ ಪ್ರಮಾಣ ವ್ಯತ್ಯಯ, ಸುಮಾರು 10.6 ಮಿಲಿಯನ್ ದೋಷ, ದೂರುಗಳ ವರದಿ ಬಂದಿವೆ ಎಂದು ಡೌನ್ ಡೆಟೆಕ್ಟರ್ ಸಂಸ್ಥೆ ವರದಿ ಮಾಡಿದೆ. ಇನ್ನು ಫೇಸ್ ಬುಕ್ ಸಂಸ್ಥೆ ಷೇರುಗಳು ಶೇ 5.5 ರಷ್ಟು ಕುಸಿತ ಕಂಡಿದ್ದವು.

ಯುಎಸ್ ನಲ್ಲಿ 1.7 ಮಿಲಿಯನ್, ಜರ್ಮನಿಯಲ್ಲಿ 1.3 ಮಿಲಿಯನ್ ಹಾಗೂ ನೆದರ್ಲೆಂಡ್ಸ್ ನಲ್ಲಿ 9,15, 000 ಆಪ್ ಸ್ಥಗಿತ ದೂರುಗಳ ವರದಿ ಬಂದಿವೆ.
ವಾಟ್ಸಾಪ್ ಸ್ಥಗಿತಗಳನ್ನು ಪತ್ತೆಹಚ್ಚುವ ಡೌನ್‌ಟೆಕ್ಟರ್‌ನ ವೆಬ್‌ಸೈಟ್‌ನ ಪ್ರಕಾರ, ಶೇಕಡಾ 40 ರಷ್ಟು ಬಳಕೆದಾರರು ಆಪ್ ಡೌನ್‌ಲೋಡ್ ಮಾಡಲು ಸಾಧ್ಯವಾಗಲಿಲ್ಲ, ಶೇ 30 ರಷ್ಟು ಜನರು ಸಂದೇಶಗಳನ್ನು ಕಳುಹಿಸುವಲ್ಲಿ ತೊಂದರೆ ಹೊಂದಿದ್ದಾರೆ ಮತ್ತು 22 ಪ್ರತಿಶತದಷ್ಟು ಜನರು ವೆಬ್ ಆವೃತ್ತಿಯೊಂದಿಗೆ ಸಮಸ್ಯೆಗಳನ್ನು ಹೊಂದಿದ್ದರು ಎಂದು ಹೇಳಿದೆ.
ನಮ್ಮ ಅಪ್ಲಿಕೇಷನ್‌ಗಳನ್ನು ತೆರೆಯಲು ಹಲವು ಮಂದಿ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನುವುದು ತಿಳಿದಿದೆ. ನಾವು ಸಹಜ ಸ್ಥಿತಿಗೆ ಮರಳಿಸುವ ಪ್ರಯತ್ನದಲ್ಲಿದ್ದೇವೆ. ಈ ಅನನುಕೂಲತೆಗಾಗಿ ವಿಷಾದಿಸುತ್ತೇವೆ, ಕ್ಷಮೆ ಯಾಚಿಸುತ್ತೇವೆ ಎಂದು ಮಾರ್ಕ್ ಹೇಳಿದ್ದಾರೆ.
ಅಡಚಣೆಗಾಗಿ ಕ್ಷಮಿಸಿ, ನಮ್ಮ ಸೇವೆ ಮೇಲೆ ನೀವು ಎಷ್ಟು ಅವಲಂಬಿತರಾಗಿದ್ದೀರಿ ಎಂಬುದು ಗೊತ್ತಿದೆ, ನಿಮ್ಮ ನಂಬಿಕೆ ಉಳಿಸಿಕೊಂಡು, ನಿಮಗೆ ಸುರಕ್ಷಿತ ಸೇವೆಯನ್ನು ಒದಗಿಸುವುದನ್ನು ಮುಂದುವರೆಸುತ್ತೇವೆ ಎಂದು ಮಾರ್ಕ್ ಹೇಳಿದ್ದಾರೆ.
To the huge community of people and businesses around the world who depend on us: we're sorry. We’ve been working hard to restore access to our apps and services and are happy to report they are coming back online now. Thank you for bearing with us.
— Facebook (@Facebook) October 4, 2021
ಬಳಕೆದಾರರು ಅಪ್ಲಿಕೇಷನ್ ಬಳಕೆಯಲ್ಲಿ ಎದುರಿಸುತ್ತಿರುವ ತೊಂದರೆಯ ಕುರಿತು ಸಾಮಾಜಿಕ ಮಾಧ್ಯಮ ಟ್ವಿಟ್ಟರ್‌ನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹೀಗಾಗಿ ಫೇಸ್‌ಬುಕ್ ಹಾಗೂ ವಾಟ್ಸಾಪ್ ಎರಡೂ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿವೆ. ಇದಲ್ಲದೆ, ಟೆಲಿಗ್ರಾಂ ಬಳಕೆ ಜಾರಿಯಲಿದ್ದರಿಂದ ಅನೇಕ ದೇಶಗಳಲ್ಲಿ ಚಾಟ್ ಮಾಡಲು ಬದಲಿ ವ್ಯವಸ್ಥೆ ಮಾಡಿಕೊಂಡಿದ್ದು ಕಂಡು ಬಂದಿದೆ.
ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಂ 2021ರ ಮಾರ್ಚ್ 19 ರಂದು ಸಂದೇಶ ರವಾನೆ ಮತ್ತು ಫೋಟೋ ಹಂಚಿಕೆ ಅಪ್ಲಿಕೇಷನ್‌ಗಳು ಭಾರತ ಮತ್ತು ವಿಶ್ವದ ಇತರ ಭಾಗಗಳಲ್ಲಿ ಸಾಮೂಹಿಕ ಸ್ಥಗಿತಗೊಂಡಿದ್ದವು.
ಡಿಎನ್ಎಸ್ ವ್ಯತ್ಯಯ ಸಾಮಾನ್ಯವಾಗಿ ಘಟಿಸುತ್ತಲೇ ಇರುತ್ತದೆ ಮತ್ತು ಸಂಬಂಧಪಟ್ಟ ಸೈಟ್ ಡೌನ್ ಆಗುತ್ತದೆ. ಎಲ್ಲಾ ರೀತಿಯ ಅನಿಯಂತ್ರಿತ ತಾಂತ್ರಿಕ ಕಾರಣಗಳಿಗಾಗಿ ಅವು ಸಂಭವಿಸಬಹುದು, ಅವು ಸಾಮಾನ್ಯವಾಗಿ ಸಂರಚನಾ ಸಮಸ್ಯೆಗಳಿಗೆ ಸಂಬಂಧಿಸಿವೆ ಮತ್ತು ಪರಿಹರಿಸಲು ತುಲನಾತ್ಮಕವಾಗಿ ನೇರವಾಗಿರಬಹುದು. ಆದರೆ, ಫೇಸ್ ಬುಕ್ ಸಂದರ್ಭದಲ್ಲಿ, ಹೆಚ್ಚು ಗಂಭೀರವಾದದ್ದು ನಡೆದಿದೆ ಫೇಸ್ಬುಕ್ ಸ್ಥಗಿತವು ಡಿಎನ್ಎಸ್ ನಿಂದ ಉಂಟಾದಂತೆ ತೋರುತ್ತದೆ; ಆದಾಗ್ಯೂ ಇದು ಸಮಸ್ಯೆಯ ಒಂದು ಲಕ್ಷಣವಾಗಿದೆ "ಎಂದು ಸೈಬರ್‌ಥ್ರೀಟ್ ಗುಪ್ತಚರ ಕಂಪನಿ ಬ್ಯಾಡ್ ಪ್ಯಾಕೆಟ್‌ಗಳ ಮುಖ್ಯ ಸಂಶೋಧನಾ ಅಧಿಕಾರಿ ಟ್ರಾಯ್ ಮುರ್ಶ್ ಹೇಳಿದ್ದಾರೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications