ರಿಯಲ್ ಎಸ್ಟೇಟ್ ಹೂಡಿಕೆಗೆ ಬೆಸ್ಟ್ ನಗರಗಳ ಪಟ್ಟಿಯಲ್ಲಿ ಬೆಂಗಳೂರು
ಏಷ್ಯಾ ಪೆಸಿಫಿಕ್ ವಲಯದಲ್ಲಿ ಆಸ್ತಿ ಮೇಲೆ ಹೂಡಿಕೆ ಮಾಡಲು ಪ್ರಶಸ್ತವಾದ ನಗರಗಳ ಪೈಕಿ ಬೆಂಗಳೂರು, ಹೈದರಾಬಾದ್, ಪುಣೆ, ಮುಂಬೈ ಹಾಗೂ ಚೆನ್ನೈ ಮೊದಲ ಹತ್ತರಲ್ಲಿ ಸ್ಥಾನ ಪಡೆದಿವೆ. ಬಹುತೇಕ ಜಾಗತಿಕ ಹೂಡಿಕೆಗಳು ಈ ವರ್ಷ ವಾಣಿಜ್ಯ ಕಚೇರಿ ಆಸ್ತಿಗಳಲ್ಲಿ ಮಾಡಲಾಗಿದೆ.
ಬೆಂಗಳೂರು, ಚೆನ್ನೈ, ದೆಹಲಿ, ಎನ್ ಸಿಆರ್, ಹೈದರಾಬಾದ್, ಮುಂಬೈ ಹಾಗೂ ಪುಣೆ ನಗರಗಳು ಏಷ್ಯಾ ಪೆಸಿಫಿಕ್ ವಲಯದ ಉಳಿದ ನಗರಗಳಿಗಿಂತ ಆರ್ಥಿಕವಾಗಿ ಬಹಳ ಮುಂದಿದೆ ಎಂದು ವರದಿಯೊಂದು ಹೇಳಿದೆ. ಕುಷ್ ಮನ್ ಅಂಡ್ ವೇಕ್ ಫೀಲ್ಡ್ ಎಂಬ ಆಸ್ತಿ ಕನ್ಸಲ್ಟಂಟ್ ನೀಡಿದ ವರದಿಯಲ್ಲಿ ಗೊತ್ತಾಗಿದೆ.

ಏಷ್ಯಾ ಪೆಸಿಫಿಕ್ ವಲಯದಲ್ಲೇ ತುಂಬ ಸುರಕ್ಷಿತ ಎನಿಸುವ ನಗರಗಳಲ್ಲಿ ಹೂಡಿಕೆ ಅವಕಾಶಗಳು ಕಡಿಮೆಯಾಗಿದ್ದು, ಎರಡನೇ ಹಂತದ, ಅಷ್ಟೇನೂ ಪ್ರಮುಖ ಎನಿಸದ ಮಾರುಕಟ್ಟೆಯತ್ತ ಕೂಡ ಬಂಡವಾಳ ಹೂಡಿಕೆದಾರರು ಗಮನ ಹರಿಸಲು ಕಾರಣವಾಗಿದೆ. ಭವಿಷ್ಯದ ಮಾರುಕಟ್ಟೆ ಮತ್ತು ದೀರ್ಘಾವಧಿಯಲ್ಲಿ ಬೆಳವಣಿಗೆಗೆ ಅವಕಾಶ ಇರುವ ಸ್ಥಳಗಳನ್ನು ಗುರುತಿಸಲಾಗಿದೆ.
ಜಾಗತಿಕ ಹೂಡಿಕೆದಾರರು ಭಾರತದ ರಿಯಲ್ ಎಸ್ಟೇಟ್ ವಲಯದಲ್ಲಿ ಬಂಡವಾಳ ಹೂಡಿ ಅದರ ಲಾಭ ಪಡೆಯಲು ಉತ್ಸುಕರಾಗಿದ್ದಾರೆ. ಆರ್ಥಿಕವಾಗಿ ಸದೃಢವಾಗುತ್ತಿರುವ ಭಾರತದ ಜಿಡಿಪಿ ಸಹ ಬಲಗೊಳ್ಳುವುದರ ಜತೆಗೆ ವ್ಯಾಪಾರ ಸ್ನೇಹಿ ವಾತಾವರಣ ಹಾಗೂ ಹೂಡಿಕೆದಾರ ಸ್ನೇಹಿ ನೀತಿಗಳನ್ನು ಅನುಸರಿಸುವ ಮೂಲಕ ಗಮನ ಸೆಳೆಯುತ್ತಿದೆ ಎಂದು ಕುಷನ್ ಅಂಡ್ ವೇಕ್ ಫೀಲ್ಡ್ ನ ಹಿರಿಯ ನಿರ್ದೇಶಕ ಸಿದ್ಧಾರ್ಥ್ ಗೋಯಲ್ ಹೇಳಿದ್ದಾರೆ.












Click it and Unblock the Notifications