Silver Price Today: ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ ದಾಖಲೆ ಮಟ್ಟದಲ್ಲಿ ಏರಿಕೆ!
Silver Price On December 18: ಆಭರಣಗಳ ಬೆಲೆ ದುಬಾರಿಯಾದರೂ ಸಹ ಜನರು ಕಷ್ಟ ಕಾಲಕ್ಕೆ ಬರುತ್ತವೆ ಎನ್ನುವ ಕಾರಣಕ್ಕೆ ಕೊಂಡುಕೊಳ್ಳುತ್ತಲೇ ಇದ್ದಾರೆ. ಇನ್ನೂ ಇದೀಗ ಬೆಳ್ಳಿ ದರ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಹಾಗಾದ್ರೆ, ಇಂದು (ಡಿಸೆಂಬರ್ 18) ಕರ್ನಾಟಕದ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿ ಅಂಶಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಇದೀಗ ಬಂಗಾರದಂತೆ ಬೆಳ್ಳಿಗೂ ಸಹ ಬೇಡಿಕೆ ಹೆಚ್ಚಾಗಿಬಿಟ್ಟಿದೆ. ದಿನದಿಂದ ದಿನಕ್ಕೆ ಗಗನಕ್ಕೇರುತ್ತಲಿದೆ ದರ. ಅಷ್ಟರ ಮಟ್ಟಿಗೆ ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಇಲ್ಲಿ ನಾವು ಗಮನಿಸಬಹುದು. ಮೊದಲೆಲ್ಲಾ ಬರೀ ಹೆಣ್ಣು ಮಕ್ಕಳು ಹಾಗೂ ದೇವರಿಗೆಂದು ಒಡವೆಗಳನ್ನು ಮಾಡಿಸುತ್ತಿದ್ದರು. ಆದರೆ, ಇದೀಗ ಗಂಡುಮಕ್ಕಳು ಸಹ ಹೆಚ್ಚಾಗಿ ಬೆಳ್ಳಿಯತ್ತ ಮುಖ ಮಾಡುತ್ತಿದ್ದಾರೆ. ಹಾಗಾದ್ರೆ, ಇಂದಿನ ಮಾರುಕಟ್ಟೆಯಲ್ಲಿ ಈ ಆಭರಣದ ದರ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಚಿನ್ನಕ್ಕೆ ಇದ್ದ ಮಾನ್ಯತೆಯಂತೆ ಬೆಳ್ಳಿಗೂ ಒಳ್ಳೇ ಮೌಲ್ಯ ಇದೆ. ಅಷ್ಟರ ಮಟ್ಟಿಗೆ ಬೆಳ್ಳಿ ಕೊಂಡುಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ. ಈಗಿನ ಮಾರುಕಟ್ಟೆಯಲ್ಲಿ ಅಥವಾ ಅಂಗಡಿಗಳಲ್ಲಿ ಬೆಳ್ಳಿಯ ವಿವಿಧ ಡಿಸೈನ್ ಆಭರಣಗಳು ಲಭ್ಯವಿದ್ದು, ಬಂಗಾರಕ್ಕೆ ಸಡ್ಡು ಹೊಡೆಯುವಂತಿವೆ. ಆದ್ದರಿಂದ ಇವುಗಳ ಖರೀದಿಗೆ ಜನರು ನಾ ಮುಂದು ತಾ ಮುಂದು ಅಂತಾ ಮುಗಿಬೀಳುತ್ತಿದ್ದಾರೆ.
ಗುರುವಾರ (ಡಿಸೆಂಬರ್ 18) ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿ ದರ 2,11,000 ಆಗಿದೆ. ಬೆಂಗಳೂರು ನಗರದಲ್ಲಿ ಇಂದು ಪ್ರತಿ 10 ಗ್ರಾಂ, 100 ಗ್ರಾಂ, 1,000 ಗ್ರಂ (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ 2,110 ರೂಪಾಯಿ, 21,100 ರೂಪಾಯಿ ಹಾಗೂ 2,11,000 ರೂಪಾಯಿಗೆ ಆಗಿದೆ. ನಿನ್ನೆ ಕೆಜಿಗೆ 2,08,000 ರೂಪಾಯಿ ಇದ್ದು, ಇದಕ್ಕೆ ಹೋಲಿಕೆ ಮಾಡಿದರೆ ಇಂದು 3,000 ರೂಪಾಯಿ ಏರಿಕೆಯಾಗಿದೆ. ಹೀಗೆ ಏರಿಕೆಯಾದರೆ, ಸಾವಿರ ಲೆಕ್ಕದಲ್ಲಿ ಆಗುತ್ತದೆ. ಆದರೆ, ಇಳಿಕೆಯಾದ್ರೆ 100ರ ಆಸುಪಾಸಿನಲ್ಲಿ ಆಗುತ್ತಿದೆ.
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 2,11,000 ರೂಪಾಯಿ (3,000 ರೂಪಾಯಿ ಏರಿಕೆ)
* ಚೆನ್ನೈ - 2,24,000 ರೂಪಾಯಿ (2,000 ರೂಪಾಯಿ ಏರಿಕೆ)
* ಮುಂಬೈ - 2,11,000 ರೂಪಾಯಿ (3,000 ರೂಪಾಯಿ ಏರಿಕೆ)
* ಕೋಲ್ಕತ್ತಾ - 2,11,000 ರೂಪಾಯಿ (3,000 ರೂಪಾಯಿ ಏರಿಕೆ)
* ನವದೆಹಲಿ - 2,11,000 ರೂಪಾಯಿ (3,000 ರೂಪಾಯಿ ಏರಿಕೆ)
* ಹೈದರಾಬಾದ್ - 2,24,000 ರೂಪಾಯಿ (3,000 ರೂಪಾಯಿ ಏರಿಕೆ)
ಮುಂದಿನ ದಿನಗಳಲ್ಲಿ ದರ ಇಳಿಕೆ ಆಗಲೂಬಹುದು ಅಥವಾ ಏರಿಕೆಯೂ ಆಗಬಹುದು. ಏರಿಳಿತ ಆದರೂ ಸಹ ಕೊಂಡುಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ. ಬದಲಾಗಿ ಹೆಚ್ಚಾಗುತ್ತಲಿದೆ.












Click it and Unblock the Notifications