ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿರುಚಿತ್ರ ನಿರ್ಮಾಣ ಸ್ಪರ್ಧೆ:'ಶಾಟ್ಸ್ ಆನ್ ನಿಕಾನ್’

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 23: ನಿಕಾನ್ ಕಾರ್ಪೊರೇಶನ್‍ನ ಸಮೂಹ ಸಂಸ್ಥೆಯಾಗಿರುವ ನಿಕಾನ್ ಇಂಡಿಯಾ ತನ್ನ ಮೂರನೇ 'ಶಾರ್ಟ್ಸ್ ಆನ್ ನಿಕಾನ್' ಕಿರುಚಿತ್ರ ನಿರ್ಮಾಣ ಸ್ಪರ್ಧೆಯನ್ನು ಘೋಷಿಸಿದೆ.

ಛಾಯಾಚಿತ್ರ ತೆಗೆಯುವ ಹವ್ಯಾಸ ಇರುವ ಪ್ರತಿಭೆಗಳನ್ನು ಗುರುತಿಸಿ ರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಗೌರವ ನೀಡುವ ನಿಟ್ಟಿನಲ್ಲಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದೆ. ಕಳೆದ ಎರಡು ಸ್ಪರ್ಧೆಗಳಲ್ಲಿ ದೇಶಾದ್ಯಂತದಿಂದ 500 ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದು, ಅವರು ತಮ್ಮ ಛಾಯಾಚಿತ್ರ ತೆಗೆಯುವ ಸಾಮರ್ಥ್ಯ ಮತ್ತು ಕೌಶಲ್ಯವನ್ನು ಈ ಸ್ಪರ್ಧೆ ಮೂಲಕ ಅನಾವರಣಗೊಳಿಸಿದ್ದರು.

ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ನಿಕಾನ್ ಡಿ-ಎಸ್‍ಎಲ್‍ಆರ್ ಕ್ಯಾಮರಾದಲ್ಲಿಯೇ ಚಿತ್ರೀಕರಿಸಿರಬೇಕು ಮತ್ತು ಈ ಕಿರುಚಿತ್ರ 10 ನಿಮಿಷಗಳೊಳಗಿರಬೇಕು.

ಈ ಸ್ಪರ್ಧೆಯ ವಿಜೇತರರಿಗೆ ನಿಕಾನ್ ಡಿ7500 ಮತ್ತು ದ್ವಿತೀಯ ಸ್ಥಾನ ಪಡೆಯುವ ಸ್ಪರ್ಧಿಗೆ ನಿಕಾನ್ ಡಿ5600 ಕ್ಯಾಮರಾವನ್ನು ಬಹುಮಾನವಾಗಿ ನೀಡಲಾಗುತ್ತದೆ. 18 ವರ್ಷ ಮೇಲ್ಪಟ್ಟವರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಬಯಸುವವರು 5 ಮಾರ್ಚ್ 2018 ರೊಳಗೆ ಅರ್ಜಿ ಸಲ್ಲಿಸಬೇಕು.

'Shorts on Nikon' season 3 Filmmaking contest

ಈ ಸ್ಪರ್ಧೆ ಬಗ್ಗೆ ಮಾಹಿತಿ ನೀಡಿರುವ ನಿಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಕಾರ್ಪೊರೇಟ್ ಸೇಲ್ಸ್ ಅಂಡ್ ಸ್ಟ್ರಾಟೆಜಿಯ ಹಿರಿಯ ಉಪಾಧ್ಯಕ್ಷರಾದ ಸಜ್ಜನ್ ಕುಮಾರ್ ಅವರು, 'ಇದು ಮೂರನೇ ವರ್ಷದ ಶಾರ್ಟ್ಸ್ ಆನ್ ನಿಕಾನ್' ಸ್ಪರ್ಧೆ ಆಗಿದೆ. ಕಳೆದ ಎರಡು ವರ್ಷ ಈ ಸ್ಪರ್ಧೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಮತ್ತೆ ಸ್ಪರ್ಧೆ ಏರ್ಪಡಿಸುತ್ತಿರುವುದಕ್ಕೆ ಸಂತಸವೆನಿಸುತ್ತಿದೆ.

ನಮ್ಮ ದೇಶದ ಯು ಪ್ರತಿಭಾನ್ವಿತ ಛಾಯಾಚಿತ್ರಕಾರರನ್ನು ಉತ್ತೇಜಿಸುವ ನಮ್ಮ ಬದ್ಧತೆಯನ್ನು ಈ ಸ್ಪರ್ಧೆ ಮೂಲಕ ತೋರಿಸುತ್ತಿದ್ದೇವೆ. ನಿಕಾನ್ ಕ್ಯಾಮರಾದಿಂದ ಚಿತ್ರೀಕರಿಸಿ ಕಿರುಚಿತ್ರ ನಿರ್ಮಾಣ ಮಾಡುವ ಮೂಲಕ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಯುವ ಸುಪ್ತ ಪ್ರತಿಭೆಗಳನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಈ ಮೂಲಕ ಯುವ ಛಾಯಾಗ್ರಾಹಕರಿಗೆ ಉತ್ತೇಜನ ನೀಡಲಾಗುತ್ತದೆ'' ಎಂದು ತಿಳಿಸಿದರು.

ನಿಕಾನ್‍ನ ಅಧಿಕೃತ ವೆಬ್‍ಸೈಟ್‍ನಲ್ಲಿ ಯಾವ ರೀತಿ ಕಿರುಚಿತ್ರ ನಿರ್ಮಾಣ ಮಾಡಬೇಕೆಂಬುದರ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಗುತ್ತದೆ. ಇಲ್ಲಿ ಚಿತ್ರ ನಿರ್ಮಾಣದ ತಾಂತ್ರಿಕತೆಗಳನ್ನು ಅಭ್ಯರ್ಥಿಗಳು ಕಲಿತುಕೊಳ್ಳಬಹುದಾಗಿದೆ. ಇದರಲ್ಲಿ ಈ ಹಿಂದಿನ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದ ಕಿರುಚಿತ್ರಗಳೂ ಇರಲಿವೆ. ಸ್ಪರ್ಧಿಗಳು ತಮ್ಮ ಪ್ರವೇಶ ಪತ್ರಗಳನ್ನು ನಿಕಾನ್ ವೆಬ್ ಸೈಟಿನಲ್ಲಿ ಸಲ್ಲಿಸಬಹುದು.

English summary
Nikon India, subsidiary of Nikon Corporation presents the third season of 'Shorts on Nikon', Nikon’s annual short filmmaking contest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X