ಬಾಕಿ ಇದ್ದರೂ ಮಲ್ಯಗೆ ಹೆಚ್ಚಿನ ಸಾಲ ಸಿಕ್ಕಿದ್ದು ಹೇಗೆ?

Subscribe to Oneindia Kannada

ನವದೆಹಲಿ, ಆಗಸ್ಟ್, 29: ಸಾಕಷ್ಟು ಸಾಲ ಮಾಡಿ ಇಂಗ್ಲೆಂಡ್ ಗೆ ತೆರಳಿರುವ ವಿಜಯ್‌ ಮಲ್ಯ ಬೇಕಂತಲೇ ಎಲ್ಲಾ ಆಸ್ತಿಯ ವಿವರ ಬಹಿರಂಗ ಮಾಡಿಲ್ಲ ಎಂದು ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟ ಸೋಮವಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ.

ಇದರೊಂದಿಗೆ ಸುಪ್ರೀಂ ಕೋರ್ಟ್ ವಿಜಯ್ ಮಲ್ಯ ಅವರಿಗೆ ಎರಡನೇ ಸಾರಿಯೂ ಸಾಲ ನೀಡಿದ ಅಧಿಕಾರಿಗಳ ವಿಚಾರಣೆಗೂ ಮುಂದಾಗಿದೆ.[ಸಾಲ ಮಾಡಿ ತುಪ್ಪ ತಿಂದವ್ರು ಮಲ್ಯ ಒಬ್ರೇ ಅಲ್ಲ ಸ್ವಾಮೀ!]

ಸೋಮವಾರ ಸುಪ್ರೀಂ ಕೋರ್ಟ್ ಎದುರು ಹಾಜರಾದ ಅಟಾರ್ನಿ ಜನರಲ್ ಮುಖುಲ್ ರೋಹಟಗಿ, ಮಲ್ಯ ಫೆಬ್ರುವರಿಯಲ್ಲಿ ಬ್ರಿಟಿಷ್‌ ಸಂಸ್ಥೆಯಿಂದ ಪಡೆದಿದ್ದ 4 ಕೋಟಿ ಸೇರಿದಂತೆ ತಮ್ಮ ಸಂಪೂರ್ಣ ಆಸ್ತಿ ವಿವರವನ್ನು ಬಹಿರಂಗಪಡಿಸಿಲ್ಲ ಎಂದು ಹೇಳಿದರು. ಕುರಿಯನ್ ಜೋಸೆಫ್‌ ಮತ್ತು ಆರ್‌.ಎಫ್‌.ನಾರಿಮನ್ ಅವರನ್ನೊಳಗೊಂಡ ಪೀಠದ ವಾದ ಮಂಡನೆ ಮಾಡಲಾಯಿತು.[ಟಿಪ್ಪು ಖಡ್ಗ ತಂದ ಮಲ್ಯರ ಗತಕಾಲದ ವೈಭವ ಹೇಗಿತ್ತು?]

ನ್ಯಾಯಾಂಗ ನಿಂದನೆ ಪ್ರಕರಣ

ನ್ಯಾಯಾಂಗ ನಿಂದನೆ ಪ್ರಕರಣ

ಭಾರತ ಮತ್ತು ವಿದೇಶಗಳಲ್ಲಿ ಇರುವ ಆಸ್ತಿ ವಿವರವನ್ನು ಮಲ್ಯ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಆದರೂ ಅವರು ಆಸ್ತಿ ವಿವರವನ್ನು ಸಂಪೂರ್ಣವಾಗಿ ನೀಡಿಲ್ಲ. ಹೀಗಾಗಿ, ಅವರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲಾಗುವುದು ಎಂದು ಎಸ್ ಬಿಐ ಒಕ್ಕೂಟ ಹೇಳಿದೆ.

ಎರಡನೇ ಸಾರಿ ಸಾಲ ನೀಡಿದ್ದು ಯಾಕೆ?

ಎರಡನೇ ಸಾರಿ ಸಾಲ ನೀಡಿದ್ದು ಯಾಕೆ?

ಇನ್ನೊಂದೆಡೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ ಎಫ್ ಐ ಒ( ಗಂಭೀರ ವಂಚನೆ ಪ್ರಕರಣಗಳ ತನಿಖಾ ದಳ), ಹಿಂದಿನ ಸಾಲ ಬಾಕಿ ಇದ್ದರೂ ಮಲ್ಯಗೆ ಎರಡನೇ ಸಾರಿ ಸಾಲ ನೀಡಿದ್ದು ಹೇಗೆ ಎಂಬುದನ್ನು ತನಿಖೆ ಮಾಡಲು ಆರಂಭಿಸಿದ್ದು ಸಾಲ ನೀಡಿದ ಬ್ಯಾಂಕ್ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಿದೆ.

ಸಾಲ ಏರಿಕೆ

ಸಾಲ ಏರಿಕೆ

ಉದ್ಯಮಿ ವಿಜಯ್ ಮಲ್ಯಾ ಹಳೆಯ ಸಾಲವನ್ನೇ ತೀರಿಸಿರಲಿಲ್ಲ. ಇದು ಗೊತ್ತಿದ್ದು ಸಾರ್ವಜನಿಕ ಬ್ಯಾಂಕ್ ಗಳ 14 ಅಧಿಕಾರಿಳು ಮಲ್ಯ ಒಡೆತನದ ಕಿಂಗ್ ಫಿಷರ್ ಸಂಸ್ಥೆಗೆ ಹೆಚ್ಚುವರಿ ಸಾಲ ನೀಡಿದ್ದರು.

ಕಿಕ್ ಬ್ಯಾಕ್ ವಾಸನೆ

ಕಿಕ್ ಬ್ಯಾಕ್ ವಾಸನೆ

ಮಲ್ಯಗ ಸಾಲ ಮಂಜೂರು ಮಾಡಿದ ಅಧಿಕಾರಿಗಳು ಕಿಕ್ ಬ್ಯಾಕ್ ಪಡೆದುಕೊಂಡ ಸಂಶಯ ಇದ್ದು ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಉತ್ತರವಿಲ್ಲದ ಪ್ರಶ್ನೆಗಳು

ಉತ್ತರವಿಲ್ಲದ ಪ್ರಶ್ನೆಗಳು

ಕಿಂಗ್ ಫಿಷರ್ ಸಂಸ್ಥೆ ಸಲ್ಲಿಸಿದ್ದ ದಾಖಲೆಗಳನ್ನು ಸಂಪೂರ್ಣ ಪರಿಶೀಲಿಸುವ ಮುನ್ನವೇ ಸಾಲ ನೀಡಿದ್ದು ಏಕೆ? ಯಾವುದೇ ಷರತ್ತುಗಳಿಲ್ಲದೆ ಬ್ಯಾಂಕ್ ಅಧಿಕಾರಿಗಳು ಹೆಚ್ಚುವರಿ ಸಾಲ ನೀಡಲು ಕಾರಣವೇನು?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Widening its probe into the financial irregularities at erstwhile Kingfisher Airlines, SFIO has started examining former chiefs of various banks, including public sector lenders, for having extended fresh loans allegedly without full due-diligence amid ballooning losses at the Vijay Mallya-owned carrier.
Please Wait while comments are loading...