ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಸಿತದ ಹಾದಿಯಲ್ಲಿ ಹೂಡಿಕೆದಾರರ ಸಂಪತ್ತು ಕರಗಿಸಿದ ಸೆನ್ಸೆಕ್ಸ್, ನಿಫ್ಟಿ

|
Google Oneindia Kannada News

ಮುಂಬೈ, ಸೆಪ್ಟೆಂಬರ್ 24: ಭಾರತೀಯ ಷೇರು ಮಾರುಕಟ್ಟೆಯ ಇಳಿಕೆ ಹಾದಿ ಮುಂದುವರಿದಿದೆ. ಸೋಮವಾರ ಮಧ್ಯಾಹ್ನ 12.20ರ ಹೊತ್ತಿಗೆ ಸೆನ್ಸೆಕ್ಸ್ 440 ಅಂಶ ಹಾಗೂ ನಿಫ್ಟಿ 153 ಅಂಶ ಕುಸಿತ ಕಂಡಿತ್ತು. ಶುಕ್ರವಾರದಂದು ಸೆನ್ಸೆಕ್ಸ್ ಗರಿಷ್ಠ ಮಟ್ಟದಿಂದ 1100ಕ್ಕೂ ಹೆಚ್ಚು ಅಂಶ ಕುಸಿತ ಕಂಡಿತ್ತು. ಯೆಸ್ ಬ್ಯಾಂಕ್ ಷೇರು ಬೆಲೆಯಲ್ಲಿ ಇಳಿಕೆ ಆಗಿತ್ತು

ಬಜಾಜ್ ಫೈನಾನ್ಸ್, ವೊಡಾಫೋನ್ ಐಡಿಯಾ, ಮಹೀಂದ್ರಾ ಅಂಡ್ ಮಹೀಂದ್ರಾ, ಎಚ್ ಡಿಎಫ್ ಸಿ, ಐಷರ್ ಮೋಟಾರ್ಸ್, ಮಾರುತಿ ಸುಝುಕಿ, ಇಂಡಸ್ ಇಂಡ್ ಬ್ಯಾಂಕ್ ಕಂಪೆನಿಯ ಷೇರುಗಳು ನಿಫ್ಟಿಯಲ್ಲಿ ಶೇಕಡಾ 4ಕ್ಕೂ ಹೆಚ್ಚು ಕುಸಿದಿದ್ದವು. ನಾನ್ ಬ್ಯಾಂಕಿಂಗ್ ಫೈನಾನ್ಷಿಯಲ್ ಕಂಪನಿಗಳಲ್ಲೂ ಹೆಚ್ಚುತ್ತಿರುವ ಸಾಲದ ಸಮಸ್ಯೆಯು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ.

1000ಕ್ಕೂ ಹೆಚ್ಚು ಅಂಶ ಕುಸಿದ ಸೆನ್ಸೆಕ್ಸ್, ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ1000ಕ್ಕೂ ಹೆಚ್ಚು ಅಂಶ ಕುಸಿದ ಸೆನ್ಸೆಕ್ಸ್, ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ

ಶುಕ್ರವಾರದಂದು ಇದರ ಪರಿಣಾಮವಾಗಿಯೇ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಕಂಪನಿಯ ಷೇರು ಬೆಲೆ ಭಾರೀ ಪ್ರಮಾಣದಲ್ಲಿ ಕುಸಿದಿತ್ತು. ಇನ್ನು ಏರುತ್ತಿರುವ ಕಚ್ಚಾ ತೈಲ ಬೆಲೆ, ಅಮೆರಿಕ ಹಾಗೂ ಚೀನಾ ಮಧ್ಯದ ವ್ಯಾಪಾರ ಸಮರ, ವಿದೇಶಿ ಹೂಡಿಕೆದಾರರು ಈ ತಿಂಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹಿಂತೆಗೆದದ್ದು ಸೇರಿದಂತೆ ಇತರ ತಾಂತ್ರಿಕ ಕಾರಣಗಳಿಗಾಗಿ ಷೇರು ಮಾರುಕಟ್ಟೆಯಲ್ಲಿ ಭಾರೀ ಇಳಿಕೆ ಆಗಿದೆ.

Sensex sheds over 400 Points, Nifty Below 11,000

ಮಾರುಕಟ್ಟೆ ತಜ್ಞರ ಅಭಿಪ್ರಾಯದ ಪ್ರಕಾರ ಷೇರು ಪೇಟೆಯಲ್ಲಿ ಡೋಲಾಯಮಾನ ಸ್ಥಿತಿ ಮುಂದುವರಿಯಲಿದೆ.

English summary
The domestic stock markets Sensex and Nifty turn red on Monday. Sensex sheds 400 points and Nifty 150 points at 12 PM. Here are the major reasons for decline.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X