ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರ್ವಕಾಲಿಕ ದಾಖಲೆಯ 35,000 ಗಡಿ ಮುಟ್ಟಿದ ಸೆನ್ಸೆಕ್ಸ್

By Sachhidananda Acharya
|
Google Oneindia Kannada News

ಮುಂಬೈ, ಜನವರಿ 17: ಶೇರು ಪೇಟೆಯಲ್ಲಿ ಇವತ್ತು ಗೂಳಿಯ ಓಟ ಜೋರಾಗಿತ್ತು. ಇದೇ ಮೊದಲ ಬಾರಿಗೆ ಬಿಎಸ್ಇ ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆಯ 35,000 ಅಂಕಗಳನ್ನು ಸಂಪಾದಿಸಿತು. ಮಧ್ಯಾಹ್ನ ನಂತರ ಶೇರು ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದರಿಂದ ಸೆನ್ಸೆಕ್ಸ್ ಸೂಚ್ಯಂಕ ಸಾರ್ವಕಾಲಿಕ ದಾಖಲೆಯ ಮಟ್ಟವನ್ನು ಮುಟ್ಟಿತು.

ಈ ಹಿಂದೆ ಜನವರಿ 15ರಂದು 34,963.69 ಅಂಕಗಳನ್ನು ಮುಟ್ಟಿದ್ದೇ ಸಾರ್ವಕಾಲಿಕ ದಾಖಲೆಯಾಗಿತ್ತು. ಆದರೆ ಇಂದು ಶೇಕಡಾ 0.89 ಏರಿಕೆ ಕಂಡು 35,081.82 ಅಂಕಗಳನ್ನು ಸೆನ್ಸೆಕ್ಸ್ ಸಂಪಾದಿಸಿದೆ. ಡಿಸೆಂಬರ್ 26ರಂದು 34,000 ಮಟ್ಟವನ್ನು ಸೆನ್ಸೆಕ್ಸ್ ಮುಟ್ಟಿತ್ತು. ಅಲ್ಲಿಂದ 35,000 ಮಟ್ಟವನ್ನು ತಲುಪಲು ಸೆನ್ಸೆಕ್ಸ್ 17 ಸೆಷನ್ಸ್ ಗಳನ್ನು ತೆಗೆದುಕೊಂಡಿತು.

ಇಂದು ಐಟಿ, ಪಬ್ಲಿಕ್ ಸೆಕ್ಟರ್ ಯುನಿಟ್, ಕ್ಯಾಪಿಟಲ್ ಗೂಡ್ಸ್ ಮತ್ತು ಆರೋಗ್ಯ ಸೇವೆ ಸೇರಿದಂತೆ ಎಲ್ಲಾ ವಲಯಗಳ ಶೇರುಗಳ ಮೌಲ್ಯ ಶೇಕಡಾ 1.21ರಷ್ಟು ಏರಿಕೆ ಕಂಡವು.

Sensex hits 35,000 for the first time

ಇದೇ ವೇಳೆ ಎನ್ಎಸ್ಇ ನಿಫ್ಟಿ ಕೂಡಾ ಶೇಕಡಾ 0.82 ಅಂದರೆ 88.10 ಅಂಕಗಳ ಏರಿಕೆ ಕಂಡು 10,788.55 ಅಂಕಗಳನ್ನು ತಲುಪಿತು.

ಈ ಏರಿಕೆಯಲ್ಲಿ ಎಸ್ಬಿಐ, ಆಕ್ಸಿಸ್ ಬ್ಯಾಂಕ್, ಇನ್ಫೋಸಿಸ್, ಅದಾನಿ ಪೋರ್ಟ್ಸ್, ಯಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಲ್ ಆ್ಯಂಡ್ ಟಿ, ಟಿಸಿಎಸ್, ಐಟಿಸಿ ಲಿ., ಡಾ ರೆಡ್ಡೀಸ್, ಸನ್ ಫಾರ್ಮಾ, ಬಜಾಜ್ ಆಟೋ, ಪವರ್ ಗ್ರಿಡ್, ಎನ್ಟಿಪಿಸಿ, ಎಚ್.ಡಿ.ಎಫ್.ಸಿ ಲಿ., ಎಂ ಆ್ಯಂಡ್ ಎಂ ಮತ್ತು ಟಾಟಾ ಸ್ಟೀಲ್ ಶೇರುಗಳ ಮೌಲ್ಯ ಶೇಕಡಾ 3.43ರಷ್ಟವರೆಗೆ ಏರಿಕೆ ಕಂಡಿತು.

English summary
The benchmark BSE Sensex hit 35,000 for the first time as IT stocks such as Infosys and private lenders such as ICICI Bank rallied amid broader value buying in the market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X