ಕುತೂಹಲ ಕೆರಳಿಸಿದ ಎರಡನೇ ದಿನದ 5ನೇ ಸುತ್ತಿನ 5ಜಿ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ
ನವದೆಹಲಿ, ಜುಲೈ 27: ಭಾರತದಲ್ಲಿ ನಡೆಯುತ್ತಿರುವ 5ಜಿ ಸ್ಪೆಕ್ಟ್ರಮ್ ಸಂಬಂಧಿಸಿದಂತೆ ಹರಾಜಿನ ಮೊದಲ ದಿನದ ಬಿಡ್‌ಗಳು ಎಲ್ಲಾ ನಿರೀಕ್ಷೆಗಳನ್ನು ಮೀರಿದ್ದು, 2015ರ ದಾಖಲೆಗಳನ್ನು ಹಿಂದಿಕ್ಕಿದೆ. ದೇಶದ ಅತಿದೊಡ್ಡ ಸ್ಪೆಕ್ಟ್ರಮ್ ಹರಾಜಿಗೆ ಐದನೇ ಸುತ್ತಿನ ಬಿಡ್ಡಿಂಗ್ ಬುಧವಾರ ನಡೆಯಲಿದೆ.
ಉದ್ಯಮಿ ಮುಖೇಶ್ ಅಂಬಾನಿ, ಸುನಿಲ್ ಭಾರ್ತಿ ಮಿತ್ತಲ್ ಮತ್ತು ಗೌತಮ್ ಅದಾನಿ ನಡೆಸುತ್ತಿರುವ ಸಂಸ್ಥೆಗಳು ಮಂಗಳವಾರ ಪ್ರಾರಂಭದ ದಿನದಂದು ಐದನೇ ತಲೆಮಾರಿನ (5G) ತರಂಗಾಂತರವನ್ನು ಖರೀದಿಸಲು ಸುಮಾರು 1.45 ಲಕ್ಷ ಕೋಟಿ ರೂಪಾಯಿ ಬಿಡ್ ಮಾಡಿದರು.
ಎಲ್ಲಾ ಹರಾಜಿನಲ್ಲಿ ವಿವಿಧ ಕಡಿಮೆ (600 MHz, 700 MHz, 800 MHz, 900 MHz, 1,800 MHz, 2,100 MHz, 2,300 MHz), ಮಧ್ಯಮ (3,300 MHz) ಮತ್ತು ಹೆಚ್ಚಿನ (26 GHz) ಆವರ್ತನದಲ್ಲಿ ಸ್ಪೆಕ್ಟ್ರಮ್‌ಗಾಗಿ ಹರಾಜು ನಡೆಸಲಾಗುತ್ತಿದೆ. ಕನಿಷ್ಠ 4.3 ಲಕ್ಷ ಕೋಟಿ ಮೌಲ್ಯದ ಒಟ್ಟು 72 GHz (gigahertz) ರೇಡಿಯೋವೇವ್‌ಗಳು ಬಿಡ್ಡಿಂಗ್‌ನಲ್ಲಿವೆ. ಬುಧವಾರವೂ ಹರಾಜು ಪ್ರಕ್ರಿಯೆ ಮುಂದುವರಿಯಲಿದ್ದು, ನಾಳೆಗೆ ಈ ಪ್ರಕ್ರಿಯೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.

ಸಕ್ರಿಯವಾಗಿ ಹರಾಜಿನಲ್ಲಿ ಭಾಗವಹಿಸಿದ ಕಂಪನಿಗಳು
ಅಂಬಾನಿಯ ರಿಲಯನ್ಸ್ ಜಿಯೋ, ಮಿತ್ತಲ್‌ನ ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ಅದಾನಿ ಸಮೂಹ ಸಂಸ್ಥೆಯು 5G ಸ್ಪೆಕ್ಟ್ರಮ್‌ನ ಹರಾಜಿನಲ್ಲಿ ಸಕ್ರಿಯವಾಗಿ ಭಾಗವಹಿಸಿದೆ. ಇದು ಅಲ್ಟ್ರಾ-ಹೈ ಸ್ಪೀಡ್ ಆಗಿದ್ದು, 4ಜಿಗೆ ಹೋಲಿಸಿದರೆ ಅದಕ್ಕಿಂತ 10ಪಟ್ಟು ಹೆಚ್ಚು ವೇಗವನ್ನು ಹೊಂದಿರುತ್ತದೆ. ಇದು ಲ್ಯಾಗ್-ಫ್ರೀ ಸಂಪರ್ಕವನ್ನು ನೀಡುತ್ತದೆ. ಇದರಿಂದ ನೈಜ ಸಮಯದಲ್ಲಿ ಡೇಟಾವನ್ನು ಹಂಚಿಕೊಳ್ಳಲು ಶತಕೋಟಿ ಸಂಪರ್ಕಿತ ಸಾಧನಗಳನ್ನು ಸಕ್ರಿಯಗೊಳಿಸಬಹುದು.

80,000 ಕೋಟಿ ಅಂದಾಜಿಗಿಂತಲೂ ಹೆಚ್ಚಳ
5ಜಿ ಸ್ಪೆಕ್ಟ್ರಮ್ ಹರಾಜಿನಲ್ಲಿ ಮೊದಲ ದಿನ ಕಂಡುಬಂದ ಬೇಡಿಕೆಯು ಸರ್ಕಾರದ ಆಂತರಿಕ ಅಂದಾಜಿನ 80,000 ಕೋಟಿಗಿಂತ ಶೇ.80ರಷ್ಟು ಹೆಚ್ಚಳವಾಗಿದೆ. ಈ ಪ್ರತಿಕ್ರಿಯೆ "ನಮ್ಮ ನಿರೀಕ್ಷೆಗಳನ್ನು ಮೀರಿದೆ" ಎಂಬುದನ್ನು ಸಚಿವರೇ ಒಪ್ಪಿಕೊಂಡಿದ್ದಾರೆ. ಪ್ರಸ್ತುತ ಭಾಗವಹಿಸುವಿಕೆಯ ಮಟ್ಟವನ್ನು ಅನುಸರಿಸಿದರೆ, ಹರಾಜುಗಳು ಬಜೆಟ್ ನಿಬಂಧನೆಗಳನ್ನು ಮೀರಿಸುತ್ತದೆ ಎಂದು ಅವರು ಹೇಳಿದ್ದಾರೆ.

2015ರ ಎಲ್ಲಾ ದಾಖಲೆಗಳೂ ಉಡೀಸ್
5ಜಿ ಸ್ಪೆಕ್ಟ್ರಮ್ ಹರಾಜಿನ ಮೊದಲ ದಿನದ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಪ್ರತಿಕ್ರಿಯೆ ನೀಡಿದ್ದಾರೆ. ಮೊದಲ ದಿನದ ಪ್ರತಿಕ್ರಿಯೆ ಎಲ್ಲಾ ನಿರೀಕ್ಷೆಗಳನ್ನು ಮೀರಿದ್ದು, ಈ ಹಿಂದೆ ಹರಾಜಿನಿಂದ 1.09 ಲಕ್ಷ ಕೋಟಿ ಆದಾಯ ಸಂಗ್ರಹವಾದ 2015ರ ದಾಖಲೆಗಳನ್ನು ಮೀರಿಸುತ್ತದೆ. 2016 ಮತ್ತು 2021ರ ಹರಾಜಿನಲ್ಲಿ ಯಾವುದೇ ಟೇಕರ್‌ಗಳನ್ನು ನೋಡದ 700 MHz ಬ್ಯಾಂಡ್ ಕೂಡ ಈ ಬಾರಿ ಬಿಡ್‌ಗಳನ್ನು ಸ್ವೀಕರಿಸಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

5ಜಿ ಹರಾಜು ಗೆಲ್ಲುವುದಕ್ಕೆ ಉದ್ಯಮಿಗಳ ಪೈಪೋಟಿ
ನವದೆಹಲಿಯಲ್ಲಿ ನಡೆಯುತ್ತಿರುವ 5ಜಿ ಹರಾಜು ಪ್ರಕ್ರಿಯೆಯಲ್ಲಿ 1.1 ಟ್ರಿಲಿಯನ್ (14 ಶತಕೋಟಿ ಡಾಲರ್) ಮೂಲಕ ಹಕ್ಕು ಪಡೆದುಕೊಳ್ಳಲು ಮುಖೇಶ್ ಅಂಬಾನಿಯ ರಿಲಾಯನ್ಸ್ ಸಂಸ್ಥೆ ಕಚ್ಚೆಕಟ್ಟಿಕೊಂಡು ನಿಂತಿದೆ. ಜುಲೈ 18ರಂದು ಟೆಲಿಕಾಂ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಅದಕ್ಕಾಗಿಯೇ ರಿಲಯನ್ಸ್ ಜಿಯೋ 14,000 ಕೋಟಿ ರೂಪಾಯಿಗಳ ಇಎಮ್‌ಡಿಯನ್ನು ಸಲ್ಲಿಸಿದೆ. ಆದರೆ ಅಂಬಾನಿ ಜೊತೆಗೆ ಪೈಪೋಟಿಗೆ ಇಳಿದಿರುವ ಅದಾನಿ ಸಂಸ್ಥೆಯು 100 ಕೋಟಿ ರೂಪಾಯಿಗಳಷ್ಟು ಇಎಮ್‌ಡಿಯನ್ನು ಸಲ್ಲಿಸಿದೆ.
ಆನ್‌ಲೈನ್‌ನಲ್ಲಿ ಪ್ರಾರಂಭವಾಗಿರುವ 5G ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆಯಲ್ಲಿ ರಿಲಾಯನ್ಸ್ ಜಿಯೋ, ಅದಾನಿ ಗ್ರೂಪ್, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು ಪ್ರಮುಖ ಬಿಡ್ ದಾರರಾಗಿ ಭಾಗವಹಿಸಿವೆ. ಆದರೆ ಈ ನಾಲ್ಕು ಕಂಪನಿಗಳ ಪೈಕಿ ಅಂಬಾನಿಯ ರಿಲಾಯನ್ಸ್ ಕಂಪನಿಯು ಅತಿಹೆಚ್ಚು ಇಎಮ್‌ಡಿಯನ್ನು ಸಲ್ಲಿಸಿರುವುದು ಗೊತ್ತಾಗಿದೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications