ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ವಾರಕ್ಕೆ ಶೇ 26ರಷ್ಟು ಕುಸಿದ ಪಿಎನ್ ಬಿ ಷೇರು ಬೆಲೆ, ಮುಂದೇನು?

|
Google Oneindia Kannada News

ಬೆಂಗಳೂರು, ಫೆಬ್ರವರಿ 19 : ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಷೇರುಗಳು ಸೋಮವಾರ ವಾರ್ಷಿಕ ಕನಿಷ್ಠ ಮಟ್ಟವನ್ನು ಮುಟ್ಟಿ, ಅಲ್ಪ ಪ್ರಮಾಣದ ಚೇತರಿಕೆ ಕಂಡಿದೆ. ಆದರೆ ಈ ಹಂತದಲ್ಲಿ ಷೇರು ಖರೀದಿಗೆ ಮುಂದಾಗಬಹುದಾ ಎಂಬ ಪ್ರಶ್ನೆಗೆ ಷೇರುಪೇಟೆ ತಜ್ಞರು ಹಾಗೂ ಅಂಕಣಕಾರರಾದ ಕೆ.ಜಿ.ಕೃಪಾಲ್ ಅವರು ಒನ್ಇಂಡಿಯಾ ಕನ್ನಡಕ್ಕೆ ಉತ್ತರ ನೀಡಿದ್ದಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ದೇಶದಲ್ಲೇ ಎರಡನೇ ದೊಡ್ಡ ಬ್ಯಾಂಕ್ ಎಂಬ ಕೀರ್ತಿ ಹೊಂದಿದೆ. ಸದ್ಯಕ್ಕೆ ಬ್ಯಾಂಕ್ ನ ವಿಚಾರವಾಗಿ ಕೇಳಿಬಂದಿರುವ ಹಗರಣದ ಆಳ ಎಲ್ಲಿವರೆಗೆ ತಲುಪಲಿದೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಆದ್ದರಿಂದ ಏಕಾಏಕಿ ಹೆಚ್ಚಿನ ಪ್ರಮಾಣದ ಷೇರು ಖರೀದಿಗೆ ಮುಂದಾಗುವುದು ಸರಿಯಲ್ಲ.

ಬ್ಯಾಂಕಿಂಗ್ ವಿಜಿಲೆನ್ಸ್ ಗಾಗಿ ಪ್ರಶಸ್ತಿ ಪಡೆದಿದ್ದ ಪಿಎನ್‌ಬಿಗೆ 11,400 ಕೋಟಿ ಪಂಗನಾಮ!ಬ್ಯಾಂಕಿಂಗ್ ವಿಜಿಲೆನ್ಸ್ ಗಾಗಿ ಪ್ರಶಸ್ತಿ ಪಡೆದಿದ್ದ ಪಿಎನ್‌ಬಿಗೆ 11,400 ಕೋಟಿ ಪಂಗನಾಮ!

ಇನ್ನು ಈ ಬಗ್ಗೆ ಕೇಂದ್ರ ಸರಕಾರದಿಂದ ಅಧಿಕೃತವಾದ ಯಾವುದೇ ಹೇಳಿಕೆ ಬಂದಿಲ್ಲ. ಅದನ್ನು ಕಾದು ನೋಡಬೇಕು. ಪಂಜಾಬ್ ನ್ಯಾಷನಲ್ ಬ್ಯಾಂಕ್ ಸರಕಾರಿ ಸ್ವಾಮ್ಯದ್ದು ಆದ್ದರಿಂದ ಗ್ರಾಹಕರು ತಮ್ಮ ಹಣದ ಬಗ್ಗೆ ಭಯ ಪಡುವ ಅಗತ್ಯ ಇಲ್ಲ. ಇನ್ನು ಷೇರು ಖರೀದಿ ಮಾಡಬೇಕು ಅಂದುಕೊಂಡವರು ಅಲ್ಪ ಪ್ರಮಾಣದಿಂದ ಅಂದರೆ ಕಡಿಮೆ ಸಂಖ್ಯೆಯಲ್ಲಿ ಖರೀದಿಸಬಹುದು. ಆದರೆ ಬಹಳ ಎಚ್ಚರಿಕೆಯಿಂದ ಇರಬೇಕು ಎನ್ನುತ್ತಾರೆ ಕೃಪಾಲ್.

ಹತ್ತು ವರ್ಷಗಳ ಹಿಂದಕ್ಕೆ ಆ ಬ್ಯಾಂಕ್ ನ ಆರ್ಥಿಕ ಸ್ಥಿತಿ

ಹತ್ತು ವರ್ಷಗಳ ಹಿಂದಕ್ಕೆ ಆ ಬ್ಯಾಂಕ್ ನ ಆರ್ಥಿಕ ಸ್ಥಿತಿ

11,300 ಕೋಟಿ ರುಪಾಯಿ ವಂಚನೆ ಆಗಿರುವುದು ಹೌದಾದರೆ, ಈ ಮೊತ್ತದ ಲಾಭ ಮಾಡಲು ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಹತ್ತು ವರ್ಷಕ್ಕೂ ಹೆಚ್ಚು ಸಮಯ ಬೇಕಾಗುತ್ತದೆ. ಅಲ್ಲಿಗೆ ಪಿಎನ್ ಬಿಯ ಇಂದಿನ ಸ್ಥಿತಿಯನ್ನು ಅಂದಾಜು ಮಾಡಬಹುದು. ಹತ್ತು ವರ್ಷಗಳ ಹಿಂದಕ್ಕೆ ಆ ಬ್ಯಾಂಕ್ ನ ಆರ್ಥಿಕ ಸ್ಥಿತಿ ತಳ್ಳಿದಂತಾಗುತ್ತದೆ.

ಆಡಿಟ್ ನಲ್ಲೂ ಬೆಳಕಿಗೆ ಬರಲಿಲ್ಲ ಹೇಗೆ?

ಆಡಿಟ್ ನಲ್ಲೂ ಬೆಳಕಿಗೆ ಬರಲಿಲ್ಲ ಹೇಗೆ?

ಈ ಇಡೀ ಪ್ರಕರಣದಲ್ಲಿ ಅನುಮಾನ ಬರುವಂಥ ವಿಚಾರ ಏನೆಂದರೆ, ಯಾವುದೇ ಬ್ಯಾಂಕ್ ನಲ್ಲಿ ಆಂತರಿಕ ಲೆಕ್ಕ ಪರಿಶೋಧನೆ, ಸ್ಟ್ಯಾಟುಟರಿ ಆಡಿಟ್ ಹಾಗೂ ರಿಸರ್ವ್ ಬ್ಯಾಂಕ್ ನಿಂದ ಕೂಡ ಲೆಕ್ಕ ಪರಿಶೋಧನೆ ಆಗುತ್ತದೆ. ಇಷ್ಟೆಲ್ಲ ಆದ ನಂತರವೂ ಇಷ್ಟು ದೊಡ್ಡ ಮಟ್ಟದ ವಂಚನೆಯೂ ಬೆಳಕಿಗೆ ಬಂದಿಲ್ಲ ಅಂದರೆ ಅಚ್ಚರಿ ಆಗುತ್ತದೆ ಎನ್ನುತ್ತಾರೆ ಆಡಿಟರ್ ಮಧುಸೂದನ್.

ವಾರ್ಷಿಕ ಕನಿಷ್ಠ ಮಟ್ಟ ತಲುಪಿದ ಷೇರುಗಳು

ವಾರ್ಷಿಕ ಕನಿಷ್ಠ ಮಟ್ಟ ತಲುಪಿದ ಷೇರುಗಳು

ಕಳೆದ ಒಂದು ವಾರದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಷೇರುಗಳು ಫೆಬ್ರವರಿ 12ನೇ ತಾರೀಕಿನ ಕೊನೆಗೆ ರು.161.65ಕ್ಕೆ ಕೊನೆಯಾಗಿತ್ತು. ಬ್ಯಾಂಕ್ ನ ಹಗರಣ ಬಯಲಾದ ನಂತರ, ವಾರದ ಮೇಲೆ ಅಂದರೆ ಫೆಬ್ರವರಿ 19ರ ದಿನದ ಕೊನೆಗೆ ರು. 115.20 ತಲುಪಿದೆ. ಅದೇ ದಿನ ವಾರ್ಷಿಕ ಕನಿಷ್ಠ ಮಟ್ಟವಾದ ರು. 113.60ಕ್ಕೆ ತಲುಪಿತ್ತು. ಆ ನಂತರ ಅಲ್ಪ ಚೇತರಿಕೆ ಕಂಡಿತು.

ಕುಸಿತ ಕಂಡ ಬ್ಯಾಂಕಿಂಗ್ ಷೇರುಗಳು

ಕುಸಿತ ಕಂಡ ಬ್ಯಾಂಕಿಂಗ್ ಷೇರುಗಳು

ಈಗಿನ ಪರಿಸ್ಥಿತಿಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಜತೆಗೆ ಇನ್ನಿತರ ಸರಕಾರಿ ಸ್ವಾಮ್ಯದ ಬ್ಯಾಂಕ್ ಗಳಲ್ಲೂ ಇದೇ ಮಾದರಿಯ ವಂಚನೆ ನಡೆದಿರಬಹುದು ಎಂಬ ಅನುಮಾನದ ಕಾರಣಕ್ಕೆ ಬೇರೆ ಸರಕಾರಿ ಸ್ವಾಮ್ಯದ ಬ್ಯಾಂಕ್ ನ ಷೇರುಗಳಲ್ಲೂ ಇಳಿಕೆಯಾಗಿದೆ. ಒಟ್ಟಾರೆ ಬ್ಯಾಂಕಿಂಗ್ ವಲಯಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿ, ಬ್ಯಾಂಕ್ ಗಳ ಷೇರುಗಳು ಬಿದ್ದಿವೆ. ಸೆನ್ಸೆಕ್ಸ್ - ನಿಫ್ಟಿ ಕೂಡ ಕುಸಿತ ಕಂಡಿವೆ.

English summary
Punjab National Bank shares touched 52 week low on Monday, February 19th. After a small recovery, market closing time PNB share price 115.20. Here is the analysis of PNB shares situation by stock market specialist and columnist K.G.Krupal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X