ಲೊನಾವಾಲದ ಆಂಬಿ ವ್ಯಾಲಿ ಟೌನ್ ಶಿಪ್ ಕಳೆದುಕೊಂಡ ಸಹಾರಾ

Posted By:
Subscribe to Oneindia Kannada

ನವದೆಹಲಿ, ಫೆಬ್ರವರಿ 06: ಸಹಾರಾ ಸಂಸ್ತೆಗೆ ಸೇರಿರುವ ಲೊನಾವಾಲದ ಆಂಬಿ ವ್ಯಾಲಿ ಟೌನ್ ಶಿಪ್ ವಶಪಡಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಸೋಮವಾರ ಆದೇಶಿಸಿದೆ. ಈ ಟೌನ್ ಶಿಪ್ ಸದ್ಯಕ್ಕೆ 39,000 ಕೋಟಿ ರು ಮೌಲ್ಯ ಹೊಂದಿದೆ.

ಸೆಬಿಗೆ ನೀಡಬೇಕಿರುವ 24,000 ಕೋಟಿ ರು ಮೊತ್ತದಲ್ಲಿ ಈಗಾಗಲೆ 11,000 ಕೋಟಿ ರು ಮೊತ್ತವನ್ನು ಹೂಡಿಕೆದಾರರಿಗೆ ನೀಡಲಾಗಿದೆ. ಬಾಕಿ ಮೊತ್ತ ಪಾವತಿಗೆ ಕಾಲಾವಕಾಶ ಬೇಕಿದೆ ಎಂದು ಸಂಸ್ಥೆ ಪರ ವಕೀಲ ಕಪಿಲ್ ಸಿಬಾಲ್ ವಾದಿಸಿದರು.[24 ಸಾವಿರ ಕೋಟಿ ತಾನೇ ಕೊಡೋಣ ಬಿಡಿ: ಸಹಾರಾ]

SC orders attaching of Sahara's Amby Valley project

ಆದರೆ, 2019ರ ತನಕ ಕಾಲಾವಕಾಶ ನೀಡಲು ಒಪ್ಪದ ಕೋರ್ಟ್, ಸಹಾರ ಟೌನ್ ಶಿಪ್ ನ ಇತರೆ ಆಸ್ತಿ ವಿವರವನ್ನು ನೀಡುವಂತೆ ಸೂಚಿಸಿ, ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿತು.

ಸಹಾರಾ ಗೋಲ್ ಮಾಲ್ : ಸೆಬಿಯ ಕಾನೂನುಗಳನ್ನು ಉಲ್ಲಂಘಿಸಿ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿದ್ದಕ್ಕಾಗಿ ಸಹರಾ ಸಮೂಹದ ಈ ಎರಡು ಕಂಪೆನಿಗಳು ತಮ್ಮ ಹೂಡಿಕೆದಾರರಿಗೆ 24 ಸಾವಿರ ಕೋಟಿ ರೂ.ಗಳನ್ನು ಶೇ.15ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ಮರುಪಾವತಿಸಬೇಕಾಗಿದೆ.

2008 ಮತ್ತು 2011ರ ನಡುವೆ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗದಿರುವ ತನ್ನ ಎರಡು ಕಂಪನಿಗಳ ಮೂಲಕ ರೂ. 24,029 ಕೋಟಿ ನಿಯಮ ಉಲ್ಲಂಘಿಸಿ ಸಂಗ್ರಹಿಸಿದ ಆರೋಪ ಹೊತ್ತಿದೆ. ಕಳೆದ 33 ವರ್ಷಗಳಲ್ಲಿ ಒಂದೇ ಒಂದು ಬೇನಾಮಿ ಖಾತೆ, ಹಣಕಾಸು ಅವ್ಯವಹಾರ ಕಾಣದೆ 12 ಕೋಟಿಗೂ ಅಧಿಕ ಹೂಡಿಕೆದಾರರನ್ನು ಸೃಷ್ಟಿಸಿದ ಸಹಾರಾ ಸಂಸ್ಥೆ ಈಗ ಹೂಡಿಕೆದಾರರಿಗೆ ಹಣ ವಾಪಸ್ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Supreme Court on Monday ordered attaching Sahara's luxurious Aamby Valley township at Lonavala near Pune. The Supreme Court while ordering the attachment of the Rs 39,000 crore township also order
Please Wait while comments are loading...