ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ದೇಶಪೂರ್ವಕ ಸುಸ್ತಿದಾರ ಮಲ್ಯಗೆ ಎಸ್ಬಿಐ ಸಾಲದಿಂದ ಮುಕ್ತಿ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಬ್ಯಾಂಕ್ ಗಳಿಂದ 9 ಸಾವಿರ ಕೋಟಿ ಸಾಲ ಮಾಡಿ ಇಂಗ್ಲೆಂಡ್ ಗೆ ತೆರಳಿರುವ ಉದ್ದೇಶಪೂರ್ವಕ ಸುಸ್ತಿದಾರ, ಘೋಷಿತ ಅಪರಾಧಿ ವಿಜಯ್ ಮಲ್ಯ ಅವರಿಗೆ ಸಕತ್ ಸುದ್ದಿ ಸಿಕ್ಕಿದೆ.

By Mahesh
|
Google Oneindia Kannada News

ಮುಂಬೈ, ನವೆಂಬರ್ 16: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಬ್ಯಾಂಕ್ ಗಳಿಂದ 9 ಸಾವಿರ ಕೋಟಿ ಸಾಲ ಮಾಡಿ ಇಂಗ್ಲೆಂಡ್ ಗೆ ತೆರಳಿರುವ ಉದ್ದೇಶಪೂರ್ವಕ ಸುಸ್ತಿದಾರ, ಘೋಷಿತ ಅಪರಾಧಿ ವಿಜಯ್ ಮಲ್ಯ ಅವರಿಗೆ ಸಕತ್ ಸುದ್ದಿ ಸಿಕ್ಕಿದೆ. ವಿಜಯ್ ಮಲ್ಯ ಸೇರಿದಂತೆ ತನ್ನ 63ಕ್ಕೂ ಉದ್ದೇಶಪೂರ್ವಕ ಸುಸ್ತಿದಾರರ ಸಾಲವನ್ನು ಎಸ್ ಬಿಐ ಮನ್ನಾ ಮಾಡಿದೆ.

ವಿಜಯ್ ಮಲ್ಯ ಅವರ ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆ ಸರಿ ಸುಮಾರು 1,201 ಕೋಟಿ ರು ಬಾಕಿ ಉಳಿಸಿಕೊಂಡಿತ್ತು. ಎಸ್ಬಿಐ ಈಗ non performing assets ಸಾಲದ ಬಗ್ಗೆ ಮೌಲ್ಯರಹಿತ ಎಂದು ತೆಗೆದುಹಾಕುವ ಪ್ರಕ್ರಿಯೆಯಲ್ಲಿ ತೊಡಗಿದ್ದು, ಈ ಪೈಕಿ 63 ಉದ್ದೇಶಪೂರ್ವಕ ಸುಸ್ತಿದಾರರಿಗೆ ಪೂರ್ಣ ಪ್ರಮಾಣದ ಸಾಲಮನ್ನಾ ಹಾಗೂ 31 ಖಾತೆಗಳಿಗೆ ಪಾರ್ಶ್ವ ಉಪಯೋಗ ಸಿಕ್ಕಿದೆ ಎಂದು ಡಿಎನ್ ಎ ಪತ್ರಿಕೆಗೆ ಸಿಕ್ಕಿರುವ ದಾಖಲೆಗಳು ಹೇಳಿದೆ. [ಸಾಲ ಮಾಡಿ ತುಪ್ಪ ತಿಂದವ್ರು ಮಲ್ಯ ಒಬ್ರೇ ಅಲ್ಲ ಸ್ವಾಮೀ!]

SBI writes off Rs 7,016 crore loans owed by wilful defaulters Vijay Mallya

Advance Under Collection Account (AUCA) ಅಡಿಯಲ್ಲಿ ಬ್ಯಾಂಕ್ ಖಾತೆಗೆ 7,016 ಕೋಟಿ ರು ಸೇರಿಸಿ ಬ್ಯಾಲೆನ್ಸ್ ಶೀಟ್ ಸಮ ಮಾಡಲಾಗಿದೆ. ಮಲ್ಯ ಅವರ 1,201 ಕೋಟಿ ರು ಅಲ್ಲದೆ ಕೆಎಸ್ ಆಯಿಲ್(596 ಕೋಟಿ ರು), ಸೂರ್ಯ ಫಾರ್ಮಾಸ್ಯೂಟಿಕಲ್ಸ್ (526 ಕೋಟಿ ರು), GET ಪವರ್ (400 ಕೋಟಿ ರು) ಹಾಗೂ ಸಾಯಿ ಇನ್ಫೋ ಸಿಸ್ಟಮ್ (376 ಕೋಟಿ ರು)

ದಾಖಲೆಗಳ ಪ್ರಕಾರ ಕಿಂಗ್ ಫಿಷರ್ ಏರ್ ಲೈನ್ಸ್ 17 ಬ್ಯಾಂಕ್ ಗಳಿಂದ 6,963 ಕೋಟಿ ರು ಸಾಲ ಬಾಕಿ ಉಳಿಸಿಕೊಂಡಿದೆ. ಸಾಕಷ್ಟು ಸಾಲ ಮಾಡಿ ಇಂಗ್ಲೆಂಡ್ ಗೆ ತೆರಳಿರುವ ವಿಜಯ್‌ ಮಲ್ಯ ಬೇಕಂತಲೇ ಎಲ್ಲಾ ಆಸ್ತಿಯ ವಿವರ ಬಹಿರಂಗ ಮಾಡಿಲ್ಲ ಎಂದು ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟ ಸೋಮವಾರ ಸುಪ್ರೀಂ ಕೋರ್ಟ್‌ಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
SBI writes off Rs 7,016 crore loans owed by wilful defaulters, including Vijay Mallya’s defunct airlines
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X