ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯ್ ಮಲ್ಯ ವಿರುದ್ಧ ಅರೆಸ್ಟ್ ವಾರೆಂಟ್ ಗೆ ಕೋರಿಕೆ

By Mahesh
|
Google Oneindia Kannada News

ಬೆಂಗಳೂರು, ಮಾ. 03: ಮೈತುಂಬಾ ಸಾಲ ಇದ್ದರೂ ಕೈತುಂಬಾ ದುಡ್ಡು ಬಾಚಿಕೊಂಡು ಲಂಡನ್ ಗೆ ಹೋಗಿ ಸೆಟ್ಲ್ ಆಗುತ್ತೀನಿ ಎನ್ನುತ್ತಿರುವ ಉದ್ಯಮಿ ವಿಜಯ್ ಮಲ್ಯ ವಿರುದ್ಧ ಎಸ್ ಬಿಐ ನೇತೃತ್ವದ ಸಾಲ ವಸೂಲಾತಿ ಪ್ರಾಧಿಕಾರ (ಡಿಆರ್ ಟಿ) ತಿರುಗಿ ಬಿದ್ದಿದೆ.

ಲಂಡನ್ ಗೆ ತೆರಳಲು ಮುಂದಾಗಿರುವ ಮಲ್ಯ ಅವರ ಪಾಸ್ ಪೋರ್ಟ್ ವಶ ಪಡಿಸಿಕೊಳ್ಳುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೋರಿದೆ. ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್ಎಲ್) ನ ಚೇರ್ಮನ್ ಹುದ್ದೆಗೆ ರಾಜೀನಾಮೆ ನೀಡಿ 75 ಮಿಲಿಯನ್ ಡಾಲರ್ ಪಡೆದುಕೊಂಡಿರುವ ಮಲ್ಯ ಅವರು ಎಸ್ ಬಿಐ ಸೇರಿದಂತೆ 17ಕ್ಕೂ ಹೆಚ್ಚು ಬ್ಯಾಂಕುಗಳಿಂದ 'ಉದ್ದೇಶಪೂರ್ವ ಸುಸ್ತಿದಾರ' ಎಂದು ಕರೆಸಿಕೊಂಡಿದ್ದಾರೆ.[ಮಲ್ಯರಿಗೆ ಸ್ಕಾಚ್ ವ್ಹಿಸ್ಕಿ ಗಿಫ್ಟ್ ಆಗಿ ಕೊಟ್ಬಿಡಿ!]

SBI seeks Vijay Mallya’s arrest, seizure of passport

ಕಿಂಗ್ ಫಿಷರ್ ಏರ್ ಲೈನ್ಸ್ ವಿಮಾನಯಾನಕ್ಕಾಗಿ 17ಕ್ಕೂ ಹೆಚ್ಚು ಬ್ಯಾಂಕ್ ಗಳಿಂದ ಮಲ್ಯ ಅವರು ಸುಮಾರು 7,800 ಕೋಟಿ ರು ಸಾಲ ಪಡೆದುಕೊಂಡಿದ್ದಾರೆ.['ಅರುವತ್ತಕ್ಕೆ ಅರಳು ಮರಳು, ಅಡ್ವಾಣಿಯಂತಾದ ಮಲ್ಯ!']

ಪಾಸ್ ಪೋರ್ಟ್ ವಶಪಡಿಸಿಕೊಳ್ಳಿ: ಪಾಸ್ ಪೋರ್ಟ್ ಕಾಯ್ದೆ 1967ರ ಸೆಕ್ಷನ್ 10 (3) ಇ ಅನ್ವಯ ಪ್ರಯಾಣಿಕರೊಬ್ಬರ ಮೇಲೆ ಕ್ರಿಮಿನಲ್ ಮೊಕದ್ದಮೆ ನಡೆಯುತ್ತಿದ್ದು, ಅವರ ವಿರುದ್ಧ ಅರೆಸ್ಟ್ ವಾರೆಂಟ್ ಗಾಗಿ ಅರ್ಜಿ ಸಲ್ಲಿಕೆಯಾಗಿದ್ದರೆ, ಅವರ ಪಾಸ್ ಪೋರ್ಟ್ ಹಾಗೂ ಪ್ರಯಾಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಏರ್ ಪೋರ್ಟ್ ನ ಅಧಿಕಾರಿಗಳು ವಶಪಡಿಸಿಕೊಳ್ಳಬಹುದು.[ಯುಎಸ್‌ಎಲ್‌ಗೆ ಬೈ ಹೇಳಿ ಇಂಗ್ಲೆಂಡ್ ವಿಮಾನ ಏರಿದ ಮಲ್ಯ]

ಹೀಗಾಗಿ, ಮಲ್ಯ ಅವರ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿ, ಪಾಸ್ ಪೋರ್ಟ್ ವಶ ಪಡಿಸಿಕೊಳ್ಳುವಂತೆ ಬೆಂಗಳೂರು ಸಾಲ ವಸೂಲಾತಿ ಪ್ರಾಧಿಕಾರ(ಡಿಆರ್ ಟಿ) ಗೆ ಎಸ್ ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಫೆಡರಲ್ ಬ್ಯಾಂಕ್ ಲಿಮಿಟೆಡ್, ಯುಕೋ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ ಮನವಿ ಸಲ್ಲಿಸಿದೆ.

English summary
State Bank of India (SBI) has moved the Bangalore debt recovery tribunal (DRT), seeking an arrest warrant against Vijay Mallya, a week after United Spirits Ltd (USL) said he had resigned as its chairman in return for a $75 million payout. Vijay Mallya and Kingfisher Airlines owed Rs.7,800 crore to a consortium of 17 lenders led by SBI, which had exposure of over Rs.1,600 crore to the airline.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X