• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಸ್‌ಬಿಐ ಲಾಭದಲ್ಲಿ 4 ಪಟ್ಟು ಏರಿಕೆ: ಮಾರ್ಚ್‌ ತ್ರೈಮಾಸಿಕದಲ್ಲಿ 3,581 ಕೋಟಿ ಲಾಭ

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಭರ್ಜರಿ ಲಾಭ ಗಳಿಸಿದೆ. 2019-20ರ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ (ಮಾರ್ಚ್‌ ತ್ರೈಮಾಸಿಕ) ಎಸ್‌ಬಿಐ ನಿವ್ವಳ ಲಾಭದಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿದೆ. ಮಾರ್ಚ್‌ ತ್ರೈಮಾಸಿಕದಲ್ಲಿ 3,580.81 ಕೋಟಿ ರೂಪಾಯಿ ಆದಾಯ ಗಳಿಸಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ 838.40 ಕೋಟಿ ರೂಪಾಯಿ ಆದಾಯ ಗಳಿಸಿತ್ತು.

ಎಸ್‌ಬಿಐ ನಿರೀಕ್ಷೆಗೂ ಮೀರಿ ಲಾಭ ಗಳಿಸಿದೆ. ಮಾರ್ಚ್‌ ತ್ರೈಮಾಸಿಕದಲ್ಲಿ ಸುಮಾರು 2000 ಕೋಟಿ ರೂಪಾಯಿ ಆದಾಯ ಗಳಿಸಬಹುದೆಂದು ವಿಶ್ಲೇಷಕರು ಅಂದಾಜು ಮಾಡಿದ್ದರು. ಆದರೆ ಇದೀಗ ಎಸ್‌ಬಿಐ ನಿರೀಕ್ಷೆಗೂ ಮೀರಿದ ಆದಾಯ ಗಳಿಸಿದೆ.

ಎಸ್‌ಬಿಐ ಗ್ರಾಹಕರಿಗೆ ಸೂಚನೆ: FD ಬಡ್ಡಿದರ ಇಳಿಕೆ

ಮಾರ್ಚ್‌ ತ್ರೈಮಾಸಿಕದಲ್ಲಿ ನಿಷ್ಕ್ರಿಯ ಆಸ್ತಿಗಳ (ಎನ್‌ಪಿಎ) ಪ್ರಮಾಣ 6.15 ಪರ್ಸೆಂಟ್ ಇಳಿದಿದ್ದು. ಡಿಸೆಂಬರ್ ತ್ರೈಮಾಸಿಕದಲ್ಲಿ ಎನ್‌ಪಿಎ ಪ್ರಮಾಣ 6.91 ಪರ್ಸೆಂಟ್‌ರಷ್ಟಿತ್ತು. ಹಿಂದಿನ ವರ್ಷದ ತ್ರೈಮಾಸಿಕದಲ್ಲಿ 7.53 ಪರ್ಸೆಂಟ್‌ರಷ್ಟಿತ್ತು.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕಂಟಿಂಜೆನ್ಸಿ ಮತ್ತು ಪ್ರಾವಿಷನ್ಸ್‌ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆದರೆ, ಡಿಸೆಂಬರ್‌ ತ್ರೈಮಾಸಿಕಕ್ಕೆ ಹೋಲಿಸಿದರೆ, ದುಪ್ಪಟ್ಟಾಗಿದೆ. ಡಿಸೆಂಬರ್‌ ತ್ರೈಮಾಸಿಕದಲ್ಲಿ 7.252 ಕೋಟಿ ರೂಪಾಯಿಯಷ್ಟಿತ್ತು. ಇದು ಮಾರ್ಚ್‌ ತ್ರೈಮಾಸಿಕದಲ್ಲಿ 13,495ಕ್ಕೆ ಏರಿಕೆಯಾಗಿದೆ.

ಮಾರ್ಚ್‌ ತ್ರೈಮಾಸಿಕದಲ್ಲಿ ನಿವ್ವಳ ಬಡ್ಡಿ ಆದಾಯವು 0.81 ಪರ್ಸೆಂಟ್‌ರಷ್ಟು ಇಳಿಕೆಯಾಗಿದೆ. ಕಳೆದ ವರ್ಷ 22.954 ಕೋಟಿ ರೂಪಾಯಿಯಷ್ಟಿದ್ದ ನಿವ್ವಳ ಬಡ್ಡಿ ಆದಾಯವು, ಈ ವರ್ಷ 22,767 ಕೋಟಿ ರುಪಾಯಿಗೆ ಇಳಿಕೆಯಾಗಿದೆ.

English summary
State Bank of India (SBI), the country's largest lender Q4 profit Jumps Rs 3,581 Crore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X