ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ ಬಿಐ ಉನ್ನತಿ ಕ್ರೆಡಿಟ್ ಕಾರ್ಡ್ ನ ಇನ್ನಷ್ಟು ಮಾಹಿತಿ

|
Google Oneindia Kannada News

ಮುಂಬೈ, ಮಾರ್ಚ್ 31: ನಗದುರಹಿತ ವಹಿವಾಟು ಹೆಚ್ಚು ಮಾಡಲು ಪ್ರೋತ್ಸಾಹಿಸುವ ಕಾರಣಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಉನ್ನತಿ ಎಂಬ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್ ಪರಿಚಯಿಸಿದೆ. ಗ್ರಾಹಕರ ಖಾತೆಯಲ್ಲಿ ಕನಿಷ್ಠ 25 ಸಾವಿರ ಹೊಂದಿದ್ದರೆ ಅವರಿಗೆ ಈ ಕಾರ್ಡ್ ನೀಡಲಾಗುವುದು ಎಂದು ಬ್ಯಾಂಕ್ ನ ಮುಖ್ಯಾಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಕೆವೈಸಿ (ನೋ ಯುವರ್ ಕಸ್ಟಮರ್) ಸರಿಯಾಗಿದ್ದು, ಅರ್ಜಿ ತುಂಬಿದರೆ ಸಾಕು. ಅಂದ ಹಾಗೆ ಈ ಕಾರ್ಡ್ ಗೆ ಮೊದಲ ನಾಲ್ಕು ವರ್ಷ ಯಾವುದೇ ಶುಲ್ಕ ಇರುವುದಿಲ್ಲ. ಇದರಿಂದ ಕ್ರೆಡಿಟ್ ಕಾರ್ಡ್ ವಲಯದಲ್ಲೇ ಕ್ರಾಂತಿಕಾರಿ ಬದಲಾವಣೆಯಾಗಲಿದೆ ಎಂಬ ನಿರೀಕ್ಷೆಯಿದೆ. ಕ್ರೆಡಿಟ್ ಕಾರ್ಡ್ ಪಡೆಯುವ ಪ್ರಕ್ರಿಯೆಯನ್ನೇ ಸರಳ ಮಾಡುತ್ತೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.[ಎಸ್ ಬಿಐನಿಂದ ಉಚಿತವಾಗಿ 'ಉನ್ನತಿ' ಕ್ರೆಡಿಟ್ ಕಾರ್ಡ್]

ಮೊದಲ ಒಂದು ವರ್ಷ ಗ್ರಾಹಕರ ಖಾತೆಯಲ್ಲಿರುವ ಹಣದ ಆಧಾರದಲ್ಲಿ ಕ್ರೆಡಿಟ್ ಸೌಲಭ್ಯ ದೊರೆಯುತ್ತದೆ. ಆ ನಂತರ ಹಿಂದಿನ ಸಾಲ ಮರುಪಾವತಿಯನ್ನು ಗಮನಿಸಿ, ಆ ನಂತರ ಠೇವಣಿಯನ್ನು ಗಣನೆಗೆ ತೆಗೆದುಕೊಳ್ಳದೆ ಕ್ರೆಡಿಟ್ ಕಾರ್ಡ್ ಸೌಲಭ್ಯ ನೀಡಲಾಗುತ್ತದೆ.

ಏನಿದು ಎಸ್ ಬಿಐ ಉನ್ನತಿ ಕಾರ್ಡ್

ಏನಿದು ಎಸ್ ಬಿಐ ಉನ್ನತಿ ಕಾರ್ಡ್

ಎಸ್ ಬಿಐ ಗ್ರಾಹಕರು ಯಾರ ಖಾತೆಯಲ್ಲಿ ಕನಿಷ್ಠ 25 ಸಾವಿರ ಇರುತ್ತದೋ ಅಂಥವರಿಗೆ ಉನ್ನತಿ ಕ್ರೆಡಿಟ್ ಕಾರ್ಡ್ ನೀಡಲಾಗುತ್ತದೆ. ಮೊದಲ ನಾಲ್ಕು ವರ್ಷ ವಾರ್ಷಿಕ ಶುಲ್ಕ 499 ರುಪಾಯಿ ಪಾವತಿಸುವುದರಿಂದ ವಿನಾಯಿತಿ ಇರುತ್ತದೆ.

ರಿವಾರ್ಡ್ಸ್ ಪಾಯಿಂಟ್

ರಿವಾರ್ಡ್ಸ್ ಪಾಯಿಂಟ್

ಪ್ರತಿ ನೂರು ರುಪಾಯಿ ಖರ್ಚು ಮಾಡಿದರೆ ಒಂದು ಪಾಯಿಂಟ್ ಸಿಗುತ್ತದೆ. ನಗದು ಮುಂಗಡ, ಬಾಕಿ ವರ್ಗಾವಣೆ, ಪೆಟ್ರೋಲ್-ಡೀಸೆಲ್ ಗೆ ಪಾವತಿಸುವುದು ರಿವಾರ್ಡ್ಸ್ ಪಾಯಿಂಟ್ ಗೆ ಬರುವುದಿಲ್ಲ.

ಎಲ್ಲೆಲ್ಲಿ ಬಳಸಬಹುದು?

ಎಲ್ಲೆಲ್ಲಿ ಬಳಸಬಹುದು?

ಭಾರತದಲ್ಲಿರುವ 3.25 ಲಕ್ಷ ಮಳಿಗೆಗಳೂ ಸೇರಿ ಜಗತ್ತಿನಾದ್ಯಂತ ಇರುವ 2.40 ಕೋಟಿ ಮಳಿಗೆಗಳಲ್ಲಿ ಬಳಸಬಹುದು. ಎಲ್ಲೆಲ್ಲಿ ವೀಸಾ ಅಥವಾ ಮಾಸ್ಟರ್ ಕಾರ್ಡ್ ಸ್ವೀಕರಿಸುತ್ತಾರೋ ಅಲ್ಲೆಲ್ಲ ಈ ಕಾರ್ಡ್ ಬಳಸುತ್ತಾರೆ.

ಇತರೆ ಉಪಯೋಗಗಳೇನು?

ಇತರೆ ಉಪಯೋಗಗಳೇನು?

ಬಿಲ್ ಪಾವತಿ, ಇಎಂಐ ಮೇಲಿನ ಬಾಕಿ ವರ್ಗಾವಣೆ ಸೇರಿದಂತೆ ಇತರ ಅನುಕೂಲಗಳು ಸಹ ಇವೆ.

English summary
Aiming to bring more users in the digital fold, the State Bank of India has launched 'Unnati' (credit) card for its customers holding an account with a minimum balance of Rs. 25,000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X