Get Updates
Get notified of breaking news, exclusive insights, and must-see stories!

ಗ್ರಾಹಕರಿಗೆ ದೀಪಾವಳಿ ಕೊಡುಗೆ: ಎಸ್ಬಿಐ ವಿವಿಧ ಸಾಲಗಳ ಬಡ್ಡಿ ದರ ಇಳಿಕೆ

ನವದೆಹಲಿ, ಸೆ. 23: ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್.ಬಿ.ಐ) ತನ್ನ ಗ್ರಾಹಕರಿಗೆ ದೀಪಾವಳಿ ಹಬ್ಬಕ್ಕೂ ಮುನ್ನ ಉಡುಗೊರೆಯನ್ನು ನೀಡಿ ಸೋಮವಾರದಂದು ಪ್ರಕಟಿಸಿದೆ. ಎಂಎಸ್ಎಂಇ, ಗೃಹ ಮತ್ತು ರಿಟೇಲ್ ಸಾಲ ಸೇರಿದಂತೆ ಎಲ್ಲ ಫ್ಲೋಟಿಂಗ್ ರೇಟ್ ಸಾಲಗಳ ರೆಪೋ ದರವನ್ನು ಬಾಹ್ಯ ಮಾನದಂಡವಾಗಿಸಲು ನಿರ್ಧರಿಸಿದೆ. ಅಕ್ಟೋಬರ್ 1 ರಿಂದ ಹೊಸ ದರ ಜಾರಿಗೆ ಬರಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ರೆಪೋ ದರದ ಆಧಾರದಲ್ಲಿ ಗೃಹ ಸಾಲ ನೀಡಲು ಆರಂಭಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ.

ಜುಲೈ ತಿಂಗಳಿನಲ್ಲಿ ರಿಸರ್ವ್ ಬ್ಯಾಂಕ್ ರೆಪೋ ದರ ಆಧಾರದ ಮೇಲೆ ಸಾಲದ ಬಡ್ಡಿ ದರ(ಫ್ಲೋಟಿಂಗ್ ರೇಟ್ ಗೃಹ ಸಾಲ) ನಿರ್ಧರಿಸುವ ತೀರ್ಮಾನ ಕೈಗೊಂಡ ಮೊದಲ ಬ್ಯಾಂಕ್ ಎಸ್ ಬಿಐ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೆಪ್ಟೆಂಬರ್ ನಾಲ್ಕರಂದು ಈ ಬಗ್ಗೆ ಸೂಚನೆ ನೀಡಿತ್ತು. ಇದರ ಜೊತೆಗೆ ಸಣ್ಣ, ಅತಿ ಸಣ್ಣ ಮಧ್ಯಮ ಉದ್ದಿಮೆ(ಎಂಎಸ್ಎಂಇ), ಗೃಹ ಮತ್ತು ರಿಟೇಲ್ ಸಾಲ ಸೇರಿದಂತೆ ಎಲ್ಲ ಫ್ಲೋಟಿಂಗ್ ರೇಟ್ ಸಾಲಗಳ ರೆಪೋ ದರವನ್ನು ಬಾಹ್ಯ ಮಾನದಂಡವಾಗಿಸಲು ಸೂಚಿಸಿತ್ತು. ಇದರಂತೆ ಎಸ್ಬಿಐ ಹೊಸ ಮಾನದಂಡ ಅನುಸರಿಸಲಿದ್ದು, ಅಕ್ಟೋಬರ್ ರಿಂದ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ. ಎಷ್ಟು ಪ್ರಮಾಣದಲ್ಲಿ ಇಳಿಕೆಯಾಗಬಹುದು, ಇಎಂಐ ಎಷ್ಟು ತಗ್ಗಬಹುದು ಎಂಬುದು ಇನ್ನು ತಿಳಿಯಬೇಕಿದೆ.

ಕಳೆದ ತಿಂಗಳು ಆರ್ ಬಿಐ ರೆಪೋ ದರವನ್ನು 35 ಮೂಲಾಂಶ ತಗ್ಗಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಒಟ್ಟಾರೆ, ಈ ವರ್ಷದಲ್ಲಿ 110 bps ಕಡಿತಗೊಂಡಿದ್ದು, ಬ್ಯಾಂಕ್ ಗಳು ನೀಡುವ ಗೃಹ, ವಾಹನ ಸಾಲದ ಮೇಲಿನ ಬಡ್ಡಿದರ, ಇಎಂಐ ದರ ತಗ್ಗಿಸುವ ನಿರೀಕ್ಷೆಯಿದೆ.

SBI adopts repo rate as external benchmark for home loans, effective October 1

ಎಷ್ಟು ಪ್ರಮಾಣದಲ್ಲಿ ಇಳಿಕೆ?: ರೆಪೋ ದರ ಎಂದರೆ ಆರ್ ಬಿಐನಿಂದ ಬ್ಯಾಂಕುಗಳ ಹಣ ಪಡೆಯುವ ದರವಾಗಿದೆ. ಆರ್ ಬಿಐನ ರೆಪೋ ದರ 5.4% ನಷ್ಟಿದೆ. ಇದಕ್ಕೆ ಅನುಗುಣವಾಗಿ ಎಸ್ಬಿಐನ repo rate lending rate (RLLR) 225 ಮೂಲಾಂಶಕ್ಕೆ ನಿಗದಿಪಡಿಸಲಾಗಿದೆ. ಆರ್ ಬಿಐ ತನ್ನ ರೆಪೋದರ ಬದಲಾಯಿಸುತ್ತಿದ್ದಂತೆ ಎಸ್ಬಿಐನ RLLRಕೂಡಾ ಬದಲಾಗುತ್ತದೆ. ಇದರ ಪರಿಣಾಮ ಗೃಹ ಸಾಲ ದರದ ಮೇಲೆ ಬೀಳುತ್ತದೆ.

ಸೆ.1ರ ಎಣಿಕೆಯಂತೆ ಎಸ್ಬಿಐನ RLLR 7.65% ಕುಸಿಯಲಿದೆ (5.4% or 540 bps + 225 bps). 8.05% ಬಡ್ಡಿದರದಂತೆ ಗೃಹ ಸಾಲ ನೀಡುತ್ತಿದ್ದನ್ನು ಇಲ್ಲಿ ಸ್ಮರಿಸಬಹುದು. 75 ಲಕ್ಷ ರು ಗಿಂತ ಅಧಿಕ ಮೊತ್ತದ ಸಾಲ ಪಡೆದುಕೊಂಡರೆ RLLR + 95 bps/110 bps ನಂತೆ ಲೆಕ್ಕಾಚಾರ ಹಾಕಲಾಗುತ್ತದೆ. ಉದಾಹರಣೆಗೆ 75 ಲಕ್ಷ ರು ತನಕದ ಸಾಲಕ್ಕೆ 7.65% ಬಡ್ಡಿದರದಂತೆ 10 ವರ್ಷದ ಅವಧಿಗೆ 89,615 ಇಎಂಐ ತಗುಲಲಿದೆ. ಗ್ರಾಹಕರ ಕ್ರೆಡಿಟ್ ಸ್ಕೋರ್ ಕೂಡಾ ಇಲ್ಲಿ ಲೆಕ್ಕಾಚಾರಕ್ಕೆ ಬರಲಿದೆ. ಅಕ್ಟೋಬರ್ 01ರಿಂದ ಈ ಲೆಕ್ಕಾಚಾರ ಬದಲಾಗಲಿದ್ದು, ಇಎಂಐ ತಗ್ಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+