ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ದಿನ 60 ಸಾವಿರ ಕೋಟಿ ಮಾರ್ಕೆಟ್ ಮೌಲ್ಯ ಹೆಚ್ಚಿಸಿಕೊಂಡ ಎಸ್ ಬಿಐ

|
Google Oneindia Kannada News

ಭಾರತದ ಷೇರು ಮಾರುಕಟ್ಟೆಯಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕ್ ಗಳು ಬುಧವಾರ 'ದೀಪಾವಳಿ' ಆಚರಿಸಿದವು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಷೇರುಗಳು ಶೇ 25ಕ್ಕಿಂತ ಹೆಚ್ಚು ಏರಿಕೆ ಕಂಡವು.

ದೇಶದ ಆರ್ಥಿಕತೆ ಬಗ್ಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಭಾಷಣ ಮುಖ್ಯಾಂಶದೇಶದ ಆರ್ಥಿಕತೆ ಬಗ್ಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಭಾಷಣ ಮುಖ್ಯಾಂಶ

ಕೇಂದ್ರ ಹಣಕಾಸು ಸಚಿವಾಲಯವು ಮಂಗಳವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕ್ ಗಳಿಗೆ 2.10 ಲಕ್ಷ ಕೋಟಿ ಬಂಡವಾಳ ಪೂರೈಸುವುದಾಗಿ ಘೋಷಣೆ ಮಾಡಲಾಗಿತ್ತು. ಇದರಿಂದ ಉತ್ತೇಜಿತಗೊಂಡ ಸೆನ್ಸೆಕ್ಸ್ ದಿನದ ಅಂತ್ಯಕ್ಕೆ ನಾನೂರು ಅಂಶಕ್ಕೂ ಹೆಚ್ಚು ಏರಿಕೆ ಕಂಡು, 33 ಸಾವಿರ ಅಂಶಗಳನ್ನು ಮೀರಿ, ಹೊಸ ದಾಖಲೆ ಬರೆಯಿತು.

SBI adds 60 thousand crore market value

ಇನ್ನು ನಿಫ್ಟಿ 87 ಅಂಶಗಳು ಏರಿಕೆ ಕಂಡು, ದಿನಾಂತ್ಯಕ್ಕೆ 10,295.35 ಅಂಶಕ್ಕೆ ಕೊನೆಗೊಂಡಿತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಂಡವಾಳ ಒಂದೇ ದಿನದಲ್ಲಿ 60 ಸಾವಿರ ಕೋಟಿ ರುಪಾಯಿ ಏರಿಕೆ ಕಂಡಿದೆ. ಯಾವ ಸರಕಾರಿ ಸ್ವಾಮ್ಯದ ಬ್ಯಾಂಕ್ ಎಷ್ಟು ಏರಿಕೆ ಕಂಡಿವೆ ಎಂಬುದರ ವಿವರ ಇಂತಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ 27.58

ಪಂಜಾಬ್ ನ್ಯಾಷನಲ್ ಬ್ಯಾಂಕ್ ಶೇ 46.20

ಬ್ಯಾಂಕ್ ಆಫ್ ಬರೋಡಾ ಶೇ 31.47

ಕೆನರಾ ಬ್ಯಾಂಕ್ ಶೇ 38.05

ಬ್ಯಾಂಕ್ ಆಫ್ ಇಂಡಿಯಾ ಶೇ 33.96

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶೇ 14.90

ಐಡಿಬಿಐ ಬ್ಯಾಂಕ್ ಶೇ 20.07

ಇಂಡಿಯನ್ ಬ್ಯಾಂಕ್ ಶೇ 21.48

ಯೂನಿಯನ್ ಬ್ಯಾಂಕ್ ಶೇ 34.07

ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಶೇ 19.82

ಸಿಂಡಿಕೇಟ್ ಬ್ಯಾಂಕ್ ಶೇ 17.37

ವಿಜಯಾ ಬ್ಯಾಂಕ್ ಶೇ 8.55

ಯುಕೋ ಬ್ಯಾಂಕ್ ಶೇ 19.70

ಕಾರ್ಪೋರೇಷನ್ ಬ್ಯಾಂಕ್ ಶೇ 19.92

English summary
The government's Rs 2.11 lakh crore stimulus for PSU (public sector undertaking) bank recapitalisation sent the equity markets zooming on Wednesday with Sensex touching fresh all-time highs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X