India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NACH ನಿಯಮ ಬದಲಾವಣೆ; ಇನ್ನು ವಾರಾಂತ್ಯ, ರಜಾ ದಿನಗಳಲ್ಲೂ ಸಿಗಲಿದೆ ವೇತನ, ಪಿಂಚಣಿ

|
Google Oneindia Kannada News

ನವದೆಹಲಿ, ಜೂನ್ 05: ವೇತನ, ಪಿಂಚಣಿ ದಿನಾಂಕ ವಾರಾಂತ್ಯದಲ್ಲಿದ್ದರೆ ಅಥವಾ ರಜಾ ದಿನವಾದರೆ ಇನ್ನು ಮುಂದೆ ಚಿಂತೆ ಮಾಡಬೇಕಿಲ್ಲ. ತನ್ನ NACH ನಿಯಮದಲ್ಲಿ ಬದಲಾವಣೆ ತಂದಿರುವ ಆರ್‌ಬಿಐ ಇದೀಗ ವಾರಾಂತ್ಯಗಳಲ್ಲಿ ಹಾಗೂ ರಜಾ ದಿನಗಳಲ್ಲಿಯೂ ವೇತನ, ಪಿಂಚಣಿ ಪಡೆಯುವ ಸೌಕರ್ಯವನ್ನು ಕಲ್ಪಿಸಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಶನಿವಾರ ಕ್ರೆಡಿಟ್ ಪಾಲಿಸಿ ರಿವ್ಯೂ ಸಂದರ್ಭ ಈ ಬದಲಾವಣೆಯನ್ನು ಘೋಷಿಸಿದ್ದಾರೆ. ಗ್ರಾಹಕರಿಗೆ ಹೆಚ್ಚಿನ ಸೌಕರ್ಯ ಒದಗಿಸಲು ಹಾಗೂ 24x7 ಆರ್‌ಟಿಜಿಎಸ್ ಲಾಭ ಪಡೆಯಲು ಎನ್‌ಎಸಿಎಚ್ ಸೌಲಭ್ಯವನ್ನು ವಾರದ ಏಳೂ ದಿನಗಳಿಗೆ ಒದಗಿಸುವುದಾಗಿ ತಿಳಿಸಿದ್ದಾರೆ. ಈ ಹೊಸ ಸೌಲಭ್ಯ ಆಗಸ್ಟ್ 1ರಿಂದ ಜಾರಿಗೆ ಬರಲಿದೆ. ಆಗಸ್ಟ್‌ 1ರ ನಂತರ ವೇತನ, ಪಿಂಚಣಿ ವಾರಾಂತ್ಯ, ರಜಾ ದಿನಗಳಲ್ಲಿಯೂ ಬ್ಯಾಂಕ್ ಖಾತೆಗೆ ಬರಲಿದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವ ದಿನಗಳಂದು ಮಾತ್ರ ವೇತನ, ಪಿಂಚಣಿ ಸೇವೆ ನೀಡಲಾಗುತ್ತಿತ್ತು. ಇದೀಗ ವಾರವಿಡೀ ಗ್ರಾಹಕರಿಗೆ ಈ ಸೌಲಭ್ಯ ಸಿಗಲಿದೆ. ಮುಂದೆ ಓದಿ...

2ನೇ ಕೋವಿಡ್ -19 ಮುಂಗಡ ಹಣ ಪಡೆಯಲು ಇಪಿಎಫ್ಒ ಅನುಮತಿ2ನೇ ಕೋವಿಡ್ -19 ಮುಂಗಡ ಹಣ ಪಡೆಯಲು ಇಪಿಎಫ್ಒ ಅನುಮತಿ

 NACH ನಿಯಮದಲ್ಲಿ ಬದಲಾವಣೆ

NACH ನಿಯಮದಲ್ಲಿ ಬದಲಾವಣೆ

ಭಾರತೀಯ ರಿಸರ್ವ್ ಬ್ಯಾಂಕ್ NACH (National automated clearing House) ನಿಯಮಗಳಲ್ಲಿ ಬದಲಾವಣೆ ತಂದಿದೆ. ಈ ಎನ್‌ಎಸಿಎಚ್ ಹೆಚ್ಚಿನ ಹಣ ಪಾವತಿಗೆ ವೇದಿಕೆಯಾಗಿದ್ದು, ಇದನ್ನು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ನಿರ್ವಹಿಸುತ್ತದೆ. ಹಲವು ರೀತಿಯ ಕ್ರೆಡಿಟ್ ಟ್ರಾನ್ಸ್‌ಫರ್ ಸೇವೆಗಳಾಗಿರುವ ವೇತನ, ಪಿಂಚಣಿ, ಡಿವಿಡೆಂಡ್, ಬಡ್ಡಿ ಸೌಕರ್ಯವನ್ನು ಒದಗಿಸುತ್ತದೆ. ಇದರೊಂದಿಗೆ ವಿದ್ಯುತ್ ಬಿಲ್, ಅಡುಗೆ ಅನಿಲ, ಟೆಲಿಫೋನ್, ನೀರು, ಸಾಲ, ಇಎಂಐ, ಮ್ಯೂಚುಯಲ್ ಫಂಡ್ ಹಾಗೂ ಇನ್ಸುರೆನ್ಸ್‌ ಪಾವತಿ ಸೌಲಭ್ಯವನ್ನೂ ನೀಡುತ್ತದೆ.

 ಇನ್ನು ಮುಂದೆ ಗ್ರಾಹಕರು ಕಾಯಬೇಕಿಲ್ಲ

ಇನ್ನು ಮುಂದೆ ಗ್ರಾಹಕರು ಕಾಯಬೇಕಿಲ್ಲ

ಕೆಲವು ಬಾರಿ ವಾರಾಂತ್ಯಗಳಲ್ಲಿ ಅಥವಾ ರಜಾ ದಿನಗಳಲ್ಲಿ ಗ್ರಾಹಕರು ತಮ್ಮ ವೇತನ ಹಾಗೂ ಪಿಂಚಣಿ ಪಡೆಯಲು ಕಾಯಬೇಕಾಗುತ್ತದೆ. ಆದರೆ ಇದೀಗ ಆ ಕಾಯುವಿಕೆ ಇಲ್ಲವಾಗಿದೆ. ವಾರದ ಎಲ್ಲಾ ದಿನವೂ ಸೌಲಭ್ಯವನ್ನು ಆರ್‌ಬಿಐ ನೀಡುತ್ತಿದೆ. ಆಗಸ್ಟ್‌ ಒಂದರಿಂದ ಈ ಸೌಲಭ್ಯ ಲಭ್ಯವಾಗಲಿದೆ

 ಕೊರೊನಾ ಸಮಯದಲ್ಲಿ ಅನುಕೂಲ

ಕೊರೊನಾ ಸಮಯದಲ್ಲಿ ಅನುಕೂಲ

ಈ ಸೌಲಭ್ಯದ ಕುರಿತು ಆರ್‌ಬಿಐ ಹೇಳಿಕೆ ನೀಡಿದ್ದು, ಎನ್‌ಎಸಿಎಚ್‌ನ ಡಿಬಿಟಿ (Direct benefit transfer) ಡಿಜಿಟಲ್ ಮೋಡ್ ರೂಪದಲ್ಲಿ ಪ್ರಸ್ತುತಗೊಂಡಿದೆ. ಸದ್ಯಕ್ಕೆ ಕೊರೊನಾ ಸಮಯದಲ್ಲಿ ಸರಿಯಾದ ಸಮಯಕ್ಕೆ ಹಾಗೂ ಪಾರದರ್ಶಕವಾಗಿ ಸಬ್ಸಿಡಿ ವರ್ಗಾವಣೆಯಲ್ಲಿ ಇದು ಸಹಾಯ ಮಾಡುತ್ತಿದೆ ಎಂದು ಹೇಳಿಕೆ ನೀಡಿದೆ.

 ಗ್ರಾಹಕರ ಹಿತದೃಷ್ಟಿಯಿಂದ ಬದಲಾವಣೆ

ಗ್ರಾಹಕರ ಹಿತದೃಷ್ಟಿಯಿಂದ ಬದಲಾವಣೆ

ಗ್ರಾಹಕರ ಹಿತದೃಷ್ಟಿಯಿಂದ NACH ನಿಯಮಗಳಲ್ಲಿ ಬದಲಾವಣೆ ತರಲಾಗಿದೆ. ವರ್ಷದ ಎಲ್ಲಾ ದಿನಗಳಲ್ಲಿಯೂ ಆರ್‌ಟಿಜಿಎಸ್‌ ಸೇವೆ ಪಡೆಯಲು ಈ ನಿಯಮ ಬದಲಾವಣೆ ಮಾಡಲಾಗಿದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ಜೊತೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸತತ ಆರನೇ ಬಾರಿಗೆ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ತಿಳಿಸಿದೆ.

English summary
RBI changed its rules and now salary and pension will be credited to bank accounts even on sundays and other holidays from august 1,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X