ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ 300 ಡಾಲರ್‌ಗೆ ಏರಬಹುದು ಎಂದು ಎಚ್ಚರಿಸಿದ ರಷ್ಯಾ
ಮಾಸ್ಕೋ, ಮಾರ್ಚ್ 9: ರಷ್ಯಾದ ಕಚ್ಚಾ ತೈಲ ಆಮದಿಗೆ ಬೇರೆ ದೇಶಗಳು ನಿಷೇಧ ಹೇರಿದರೆ 1 ಬ್ಯಾರೆಲ್ ತೈಲದ ಬೆಲೆ 300 ಡಾಲರ್‌ಗೆ(ಅಂದಾಜು 23 ಸಾವಿರ ರೂ.) ಏರಿಕೆಯಾಗಬಹುದು ಎಂದು ರಷ್ಯಾ ವಿಶ್ವದ ದೇಶಗಳಿಗೆ ಎಚ್ಚರಿಕೆ ನೀಡಿದೆ.
ಪಾಶ್ಚಿಮಾತ್ಯ ದೇಶಗಳಿಂದ ರಷ್ಯಾದ ಪೆಟ್ರೋಲಿಯಂ ಉತ್ಪನ್ನಗಳ ಆಮದುಗಳ ಮೇಲಿನ ನಿರ್ಬಂಧವು ಜಾಗತಿಕ ಆರ್ಥಿಕತೆಗೆ ಕೆಟ್ಟ ಪರಿಣಾಮಗಳನ್ನು ಉಂಟುಮಾಡುತ್ತದೆ. ಇದರಿಂದ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‍ಗೆ 300 ಯುಎಸ್ ಡಾಲರ್‌ಗೆ ಏರಬಹುದು ಎಂದು ರಷ್ಯಾದ ಉಪ ಪ್ರಧಾನಿ ಅಲೆಕ್ಸಾಂಡರ್ ನೊವಾಕ್ ಎಚ್ಚರಿಕೆ ನೀಡಿದ್ದಾರೆ.
Recommended Video

ರಷ್ಯಾದ ಕಚ್ಚಾ ತೈಲ ಆಮದಿಗೆ ಅಮೆರಿಕ ಮತ್ತು ಬ್ರಿಟನ್ ನಿರ್ಬಂಧ ಹೇರಿದ ಹಿನ್ನೆಲೆ ಕೋಪಗೊಂಡಿರುವ ರಷ್ಯಾ, ಈ ನಿರ್ಧಾರ ವಿಶ್ವ ಮಾರುಕಟ್ಟೆಗೆ ದುರಂತ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ತಿಳಿಸಿದೆ.

ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಬ್ಯಾರೆಲ್‍ಗೆ 130 ಡಾಲರ್(ಅಂದಾಜು 10 ಸಾವಿರ ರೂ.) ದಾಟಿದೆ. ಒಂದು ವೇಳೆ ರಷ್ಯಾ ಕಚ್ಚಾ ತೈಲದ ಮೇಲೆ ನಿಷೇಧ ಹೇರಿದರೆ ಕಚ್ಚಾ ತೈಲದ ಬೆಲೆ ಊಹೆಗೂ ಮೀರಿ ಏರಿಕೆಯಾಗುತ್ತದೆ ಎಂದು ವಿಶ್ವದ ದೇಶಗಳಿಗೆ ಖಡಕ್ ಎಚ್ಚರಿಕೆಯನ್ನು ರಷ್ಯಾ ನೀಡಿದೆ.
ಯುರೋಪಿಯನ್ ಮಾರುಕಟ್ಟೆಯಲ್ಲಿ ರಷ್ಯಾದ ತೈಲದ ಪ್ರಮಾಣವನ್ನು ತ್ವರಿತವಾಗಿ ಬದಲಾಯಿಸುವುದು ಅಸಾಧ್ಯ. ಇದು ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಯುರೋಪಿಯನ್ ಒಕ್ಕೂಟಕ್ಕೆ ಹೆಚ್ಚು ದುಬಾರಿಯಾಗುತ್ತದೆ ಎಂದು ರಷ್ಯಾದ ಉಪ ಪ್ರಧಾನಿ ಅಲೆಕ್ಸಾಂಡರ್ ನೊವಾಕ್ ತಿಳಿಸಿದ್ದಾರೆ.
ರಷ್ಯಾದಿಂದ ಕಚ್ಚಾ ತೈಲ ಆಮದು ನಿರ್ಬಂಧಿಸಿದ ಬ್ರಿಟನ್, ಅಮೆರಿಕ
ಉಕ್ರೇನ್ ದೇಶದ ಮೇಲೆ ರಷ್ಯಾ ಸಾರಿರುವ ಯುದ್ಧವನ್ನು ಖಂಡಿಸಿ ರಷ್ಯಾದ ಅನಿಲ, ಕಚ್ಚಾ ತೈಲ ಸೇರಿ ಎಲ್ಲಾ ಬಗೆಯ ಆಮದುಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ.
ಈ ಬೆನ್ನಲ್ಲೇ ರಷ್ಯಾದಿಂದ ತೈಲೋತ್ಪನ್ನ ಆಮದು ಮಾಡಿಕೊಳ್ಳುವುದನ್ನು ಬ್ರಿಟನ್ ಕೂಡಾ ಸಂಪೂರ್ಣವಾಗಿ ನಿರ್ಬಂಧಿಸಿದೆ. ಹಂತ ಹಂತವಾಗಿ ಆಮದು ನಿರ್ಬಂಧ ಜಾರಿಯಾಗಲಿದ್ದು, 2022ರ ಅಂತ್ಯದ ವೇಳೆಗೆ ಈ ನಿರ್ಬಂಧ ಆದೇಶ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲಿದೆ.
ಉಕ್ರೇನ್ ಮೇಲೆ ದಾಳಿ ಮಾಡಿದ ರಷ್ಯಾದ ಕ್ರಮ ಖಂಡಿಸಿ ಈ ಮೊದಲು ಅಮೆರಿಕ ರಷ್ಯಾದ ತೈಲೋತ್ಪನ್ನಗಳನ್ನು ನಿರ್ಬಂಧಿಸಿತ್ತು. ಇದೀಗ ಬ್ರಿಟನ್ ಸಹ ಇದೇ ಹಾದಿ ಹಿಡಿದಿದೆ. ಬ್ರಿಟನ್ನಲ್ಲಿ ಬಳಕೆಯಾಗುವ ಪೆಟ್ರೋಲಿಯಂ ಉತ್ಪನ್ನಗಳ ಪೈಕಿ ಶೇ.8ರಷ್ಟು ಬೇಡಿಕೆಯನ್ನು ರಷ್ಯಾದಿಂದ ಆಮದಾಗುವ ಪೆಟ್ರೋಲಿಯಂ ಉತ್ಪನ್ನಗಳು ಪೂರೈಸುತ್ತಿವೆ.
ಭಾರತದಲ್ಲಿ ಶೀಘ್ರ ಇಂಧನ ದರ ಏರಿಕೆ; ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದೇನು?
ಇಂಧನ ದರ ಏರಿಕೆ ಬಗ್ಗೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದೇನು?
ರಷ್ಯಾ-ಉಕ್ರೇನ್ ನಡುವಿನ ಯುದ್ಧದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಗಣನೀಯವಾದ ಹೆಚ್ಚಳವಾಗಿದ್ದು, ಇದರ ಬಿಸಿಯು ಭಾರತದಲ್ಲಿ ಪೆಟ್ರೋಲ್-ಡೀಸೆಲ್ ದರಗಳ ಮೇಲೆಯೂ ಬೀರಲಿದೆ. ಈಗಾಗಲೇ ಊಹೆ ಮಾಡಿರುವಂತೆ ಭಾರತದಲ್ಲಿ ಇಂಧನಗಳ ಬೆಲೆಯು ಶೀಘ್ರದಲ್ಲೇ ಏರಲಿದೆ ಎಂದು ಅಂದಾಜಿಸಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಮಂಗಳವಾರ ಮಾತನಾಡಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, "ಜಾಗತಿಕ ಬೆಲೆಗಳ ಆಧಾರದ ಮೇಲೆ ಇಂಧನ ಬೆಲೆಗಳು ಅವಲಂಬಿತವಾಗಿರುತ್ತವೆ. ಸದ್ಯ ಪ್ರಪಂಚದ ಒಂದು ದೇಶದಲ್ಲಿ ಯುದ್ಧದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಅಂಶವನ್ನು ತೈಲ ಕಂಪನಿಗಳು ಬಳಸಿಕೊಳ್ಳುವುದು ಸಾಮಾನ್ಯ. ನಮ್ಮ ಜನರ ಹಿತಾಸಕ್ತಿಯನ್ನು ಆಧರಿಸಿ ತೈಲ ಬೆಲೆಗಳನ್ನು ನಿರ್ಧರಿಸಲಾಗುವುದು," ಎಂದು ಹೇಳಿದರು.












Click it and Unblock the Notifications