ಆಗಸ್ಟ್ 15, 1947 ರಂದು ಡಾಲರ್ ಎದುರು ರೂಪಾಯಿ ಮೌಲ್ಯ ಎಷ್ಟು?
ನವದೆಹಲಿ, ಆಗಸ್ಟ್ 14: ಪ್ರತಿ ವರ್ಷ ಆಗಸ್ಟ್ 15ರಂದು ದೇಶಾದ್ಯಂತ ಬಹಳ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಭಾರತವು ಈ ಬಾರಿ ತನ್ನ 74 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಿದೆ.
ಕೊರೊನಾ ಸಾಂಕ್ರಾಮಿಕದ ನಡುವೆ ಇಡೀ ದೇಶವೇ ಭಾರತದ ಅತ್ಯಂತ ವಿಶೇಷ ದಿನವನ್ನು ಆಚರಿಸಲು ಸಜ್ಜಾಗಿದೆ. ಆದಾಗ್ಯೂ, 1947 ರಲ್ಲಿ ಸ್ವಾತಂತ್ರ್ಯ ಬಂದ ನಂತರ, ಭಾರತವು ಎರಡು ಪ್ರಮುಖ ಆರ್ಥಿಕ ಬಿಕ್ಕಟ್ಟುಗಳನ್ನು ಮತ್ತು ರೂಪಾಯಿ ಮೌಲ್ಯದ ಎರಡು ಅಪಮೌಲ್ಯೀಕರಣಗಳನ್ನು 1966 ಮತ್ತು 1991 ರಲ್ಲಿ ಎದುರಿಸಿದೆ.
ಇದರ ನಡುವೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಸ್ವಾತಂತ್ರ್ಯ ನಂತರದ ವರ್ಷಗಳಲ್ಲಿ ಎಷ್ಟಿತು ಎಂದು ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿ ಮೂಡಬಹುದು.

ವರದಿಗಳ ಪ್ರಕಾರ, ಸೆಪ್ಟೆಂಬರ್ 1949 ರಲ್ಲಿ ವಿನಿಮಯ ದರವನ್ನು ಪೌಂಡ್ ಸ್ಟರ್ಲಿಂಗ್ಗೆ ರೂ. 13.33 ಅಥವಾ ರೂ. 4.75 ಡಾಲರ್ ಆಗಿದೆ. ಇದು ಜೂನ್ 1966 ರವರೆಗೆ ಬದಲಾಗದೆ ಉಳಿಯಿತು. ರೂಪಾಯಿ ಮೌಲ್ಯವನ್ನು ಶೇ. 36.5ರಷ್ಟು ಅಪಮೌಲ್ಯಗೊಳಿಸಿದಾಗ ಪೌಂಡ್ಗೆ 21 ರೂಪಾಯಿ ಅಥವಾ 1 ಡಾಲರ್ಗೆ 7.10 ರೂಪಾಯಿಯಷ್ಟಿದೆ.
1947 ರಿಂದ 2020ರವರೆಗೆ ಡಾಲರ್ ಎದುರು ರೂಪಾಯಿ ವಿನಿಮಯ ದರ
| ವರ್ಷ | ವಿನಿಮಯ ದರ (INR per USD) |
| 1947 | 3.30 |
| 1949 | 4.76 |
| 1966 | 7.50 |
| 1975 | 8.39 |
| 1980 | 7.86 |
| 1985 | 12.38 |
| 1990 | 17.01 |
| 1995 | 32.42 |
| 2000 | 43.50 |
| 2005(Jan) | 43.47 |
| 2006(Jan) | 45.19 |
| 2007(Jan) | 39.42 |
| 2008(Oct) | 48.88 |
| 2009(Oct) | 46.37 |
| 2010(Jan) | 46.21 |
| 2011(Nov) | 55.39 |
| 2012(June) | 57.15 |
| 2013(May) | 54.73 |
| 2014(May) | 59.44 |
| 2014(Sep) | 60.95 |
| 2015(Apr) | 62.30 |
| 2015(May) | 64.22 |
| 2015(Sep) | 65.87 |
| 2015(Nov) | 66.79 |
| 2016(20Jan) | 68.01 |
| 2016(25Jan) | 67.63 |
| 2016(Feb) | 68.82 |
| 2016(Apr) | 66.56 |
| 2016(Nov) | 67.63 |
| 2017(Mar) | 65.04 |
| 2017(Apr) | 64.27 |
| 2017(May) | 64.05 |
| 2017(Aug) | 64.13 |
| 2017(Oct) | 64.94 |
| 2018(May) | 64.80 |
| 2018(Oct) | 74.00 |
| 2019(Oct) | 70.85 |
| 2020(Jan) | 70.96 |
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications