ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

|
Google Oneindia Kannada News

ಮುಂಬೈ, ಆಗಸ್ಟ್ 14: ಭಾರತದ ರೂಪಾಯಿ ಮೌಲ್ಯವು ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡಿದ್ದು, ದೇಶದ ಆರ್ಥಿಕ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಭೀತಿ ಎದುರಾಗಿದೆ.

72ನೇ ಸ್ವಾತಂತ್ರ್ಯ ದಿನಾಚರಣೆ 2018

ಡಾಲರ್‌ಗೆ ರೂಪಾಯಿ ಮೌಲ್ಯ 69.93 ರೂ. ಆಗಿದ್ದು, ಇದು ದೇಶದ ಇತಿಹಾಸದಲ್ಲಿಯೇ ಅತಿ ಕನಿಷ್ಠ ಮಟ್ಟದ್ದಾಗಿದೆ.

ಕಳೆದ 4 ಆರ್ಥಿಕ ವರ್ಷದಲ್ಲಿ ಭಾರತದ ಸರಾಸರಿ ತಲಾದಾಯ 79,982ಕಳೆದ 4 ಆರ್ಥಿಕ ವರ್ಷದಲ್ಲಿ ಭಾರತದ ಸರಾಸರಿ ತಲಾದಾಯ 79,982

ಟರ್ಕಿ ದೇಶದ ಕರೆನ್ಸಿ ಲಿರಾದಲ್ಲಿ ಉಂಟಾಗಿರುವ ಕುಸಿತವು ಡಾಲರ್ ಎದುರು ಭಾರತದ ರೂಪಾಯಿ ಸಾರ್ವಕಾಲಿಕ ಕುಸಿತ ಕಾಣಲು ಕಾರಣವಾಗಿದೆ.

rupee hits lifetime low against dollar, as turkey lira turmoil

ಈ ಹಿಂದೆ ರೂಪಾಯಿ ಮೌಲ್ಯವು 69.20ಕ್ಕೆ ಕುಸಿದಿತ್ತು. ಡಾಲರ್ ಎದುರು ರೂಪಾಯಿ ಮೌಲ್ಯವು ಸೋಮವಾರ 1.08 ರೂ.ನಷ್ಟು ಕುಸಿದಿದೆ. ಪರಿಸ್ಥಿತಿ ಇದೇ ರೀತಿ ಬಿಕ್ಕಟ್ಟಿನಲ್ಲಿ ಮುಂದುವರಿಯುವ ಸಾಧ್ಯತೆ ಇರುವುದರಿಂದ ಅದನ್ನು ಎದುರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯಪ್ರವೇಶ ಮಾಡಿ ಆರ್ಥಿಕ ನೀತಿಗಳಲ್ಲಿ ಬದಲಾವಣೆಗಳನ್ನು ಮಾಡುವ ನಿರೀಕ್ಷೆಯಿದೆ.

ಅಮೆರಿಕವು ತನ್ನ ಡಾಲರ್ ಮೌಲ್ಯ ವೃದ್ಧಿಗೆ ಮುಂದಾಗಿದೆ. ಅಮೆರಿಕದ ಜತೆ ಟರ್ಕಿಯ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿದ್ದು, ಟರ್ಕಿ ತನ್ನ ಆರ್ಥಿಕತೆಯ ಮೇಲೆ ಕೆಲವು ನಿಯಂತ್ರಣ ಕ್ರಮಗಳನ್ನು ಹೇರಿದೆ. ಅಲ್ಲದೆ. ಅಮೆರಿಕವು ಟರ್ಕಿ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರಿದ್ದು, ಅದರ ಕರೆನ್ಸಿ ಮೌಲ್ಯ ಕುಸಿಯಲು ಕಾರಣವಾಗಿದೆ.

4 ವರ್ಷದಲ್ಲಿ 2ನೇ ಸಲ ಬಡ್ಡಿ ದರ ಏರಿಸಿದ ಆರ್ ಬಿಐ, ಕಾರಣ ಏನು?4 ವರ್ಷದಲ್ಲಿ 2ನೇ ಸಲ ಬಡ್ಡಿ ದರ ಏರಿಸಿದ ಆರ್ ಬಿಐ, ಕಾರಣ ಏನು?

ಲಿರಾ ಡಾಲರ್ ಎದುರು ಸೋಮವಾರ ಶೇ 12ರಷ್ಟು ಕುಸಿದಿದೆ. ಕಳೆದ 12 ತಿಂಗಳಿನಲ್ಲಿ ಶೇ 50ರಷ್ಟು ಇಳಿಕೆಯಾಗಿದೆ. 1 ಲಿರಾದ ಮೌಲ್ಯ 10 ರೂಪಾಯಿಗೆ ಸಮ.

ರೂಪಾಯಿ ಮೌಲ್ಯ ಕುಸಿತದಿಂದ ಷೇರು ಪೇಟೆ ಸೂಚ್ಯಂಕ 37 ಸಾವಿರದಿಂದ 280 ಅಂಶದಷ್ಟು ಕುಸಿತ ಕಂಡಿತ್ತು. ನಿಫ್ಟಿ ಕೂಡ 50 ಅಂಶ ಇಳಿಕೆಯಾಗಿತ್ತು.

ಒಂದು ವೇಳೆ ರೂಪಾಯಿ ಮೌಲ್ಯವು 71ನ್ನು ದಾಟಿದರೆ ನಾಲ್ಕರಿಂದ ಆರು ತಿಂಗಳಲ್ಲಿ ಡಾಲರ್ ಎದುರು ಅದರ ಮೌಲ್ಯ 80ಕ್ಕೆ ತಲುಪುವ ಅಪಾಯವಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

English summary
Indian Rupee slumped to a record low on Monday against dollar, as Turkey's financial market turmoil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X