ಬಡ್ಡಿ ಮನ್ನಾ ಆದರೆ ಬ್ಯಾಂಕುಗಳಿಗೆ 2 ಲಕ್ಷ ಕೋಟಿ ರುಪಾಯಿ ನಷ್ಟ: ಆರ್‌ಬಿಐ
ಬ್ಯಾಂಕಿಂಗ್ ಕ್ಷೇತ್ರದ ಆರ್ಥಿಕ ಸ್ಥಿರತೆಯ ಮೇಲೆ ಪರಿಣಾಮ ಬೀರುವ ಕಾರಣ, ನಿಷೇಧದ ಅವಧಿಗೆ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಆರ್‌ಬಿಐ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಕೊರೊನಾವೈರಸ್ ಲಾಕ್‌ಡೌನ್ ಸಂದರ್ಭದಲ್ಲಿ ಆರ್‌ಬಿಐ ಬ್ಯಾಂಕುಗಳ ಎಲ್ಲಾ ರೀತಿಯ ಸಾಲಗಳ ಮೇಲಿನ ಇಎಂಐ ಮುಂದೂಡಿಕೆ ಮಾಡಿವೆ, ಆದರೆ ಬಡ್ಡಿ ಮನ್ನಾ ಮಾಡಿಲ್ಲ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿದೆ. ಈ ಕುರಿತು ದೇಶದ ಆರ್‌ಬಿಐ, ಸರ್ವೋಚ್ಚ ನ್ಯಾಯಾಲಯಕ್ಕೆ ಮಹತ್ವದ ಪ್ರಮಾಣಪತ್ರ ಸಲ್ಲಿಸಿದೆ.
ಕೋವಿಡ್ ಕಾರಣ ಸಾಲದ ಕಂತು ಪಾವತಿ ಮುಂದೂಡಲು ಅದು ಬ್ಯಾಂಕ್‌ಗಳ ಗ್ರಾಹಕರಿಗೆ ಅವಕಾಶ ನೀಡಿತ್ತು.ಆದರೆ ಈ ವೇಳೆಯ ಬಡ್ಡಿ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಅದು ತಿಳಿಸಿದೆ.ಒಂದು ವೇಳೆ ಹಾಗೆ ಮಾಡಿದರೆ, ಬ್ಯಾಂಕ್‌ಗಳ ಆರ್ಥಿಕ ಪರಿಸ್ಥಿತಿ ತುಂಬಾ ಕೆಳ ಮಟ್ಟಕ್ಕೆ ಇಳಿಯಲಿದೆ . ಅವುಗಳು ಒಟ್ಟಾರೆ 2.01 ಲಕ್ಷ ಕೋಟಿ ರುಪಾಯಿ ಅಥವಾ 1% ಭಾರತದ ಜಿಡಿಪಿಯಷ್ಟು ಕಳೆದುಕೊಳ್ಳಲಿವೆ ಎಂದು ತಿಳಿಸಿದೆ.

ಹೀಗಾಗಿ ತಾನು ಬಡ್ಡಿ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಆರ್‌ಬಿಐ ತನ್ನ ಪ್ರಮಾಣ ಪತ್ರದಲ್ಲಿ ಬುಧವಾರ ತಿಳಿಸಿದೆ. ಅಷ್ಟಲ್ಲದೆ ತಾನು ಕೇವಲ ಕಂತು ಪಾವತಿಯನ್ನು ಮುಂದೂಡಲು ಅವಕಾಶ ನೀಡಿದ್ದೇವೆ, ಸಾಲಮನ್ನಾ ಅಲ್ಲ ಎಂದು ಸ್ಪಷ್ಟಪಡಿಸಿದೆ.












Click it and Unblock the Notifications