ಅಗ್ಗದ ಫ್ರೀಡಂ 251 ಮೊಬೈಲ್ ಬುಕಿಂಗ್ ಮುಕ್ತಾಯ?

Subscribe to Oneindia Kannada

ನವದೆಹಲಿ, ಫೆಬ್ರವರಿ, 20: ನೀವು ಫ್ರೀಡಂ 251 ಮೊಬೈಲ್ ಹರಸಾಹಸ ಮಾಡಿಯದರೂ ಬುಕ್ ಮಾಡಿಕೊಂಡಿದ್ದೀರಾ? ಹಾಗಾದರೆ ಆಯ್ತು.. ಇನ್ನು ಫ್ರೀಡಂ 251 ಬುಕ್ ಮಾಡಲು ಸಾಧ್ಯವಿಲ್ಲ. ವೆಬ್ ತಾಣ ಬುಕಿಂಗ್ ಕ್ಲೋಸ್ ಎಂದು ತಿಳಿಸುತ್ತಿದೆ.

ಮೊದಲು ಬೈ ಆಯ್ಕೆಯನ್ನು ಒತ್ತಿದಾಗ ಸ್ನೇಹಿತರೇ ದಯವಿಟ್ಟು ನಂತರ ಪರೀಕ್ಷಿಸಿ ಎಂಬ ಸಂದೇಶ ಬರುತ್ತಿತ್ತು. ಈಗ ಅಧಿಕೃತವಾಗಿ ಬುಕಿಂಗ್ ಮುಕ್ತಾಯವಾಗಿದೆ ಎಂಬ ಸಂದೇಶ ಬರುತ್ತಿದೆ. [ಫ್ರೀಡಂ 251 : ಸರ್ಕಾರದ ಸಬ್ಸಿಡಿ ಪಡೆದಿಲ್ಲ , ಸಂಸ್ಥೆ ಸ್ಪಷ್ಟನೆ]
ಬುಕಿಂಗ್ ಮುಕ್ತಾಯ ಸಂದೇಶ

mobile

ಈಗಾಗಲೇ ನಿಮಿಷಕ್ಕೆ 6 ಲಕ್ಷ ಮಂದಿ ಈ ವೆಬ್ ಸೈಟ್ ಗೆ ಭೇಟಿ ನೀಡುತ್ತಿರುವ ಕಾರಣ, ಸರ್ವರ್ ಓವರ್ ಲೋಡ್ ಆಗುತ್ತಿದೆ. ಆದ ಕಾರಣ 24 ಗಂಟೆಗಳಲ್ಲಿ ಈ ವೆಬ್ ಸೈಟ್ ಮತ್ತೆ ಕಾರ್ಯ ಪ್ರವೃತ್ತವಾಗಲಿದೆ ಎಂದು ಹೇಳಲಾಗಿದೆ. ಸಂಸ್ಥೆ ಹೇಳಿದಂತೆ ಫೋನ್ ಬುಕಿಂಗ್ ಫೆಬ್ರವರಿ 21 ರಂದು ಮುಕ್ತಾಯವಾಗಲಿದೆ. ನೀವು ಈಗಾಗಲೇ ಬುಕಿಂಗ್ ಮಾಡಿದ್ದರೆ ಜೂನ್ 30, 2016 ರ ವೇಳಗೆ ಮೊಬೈಲ್ ನಿಮ್ಮ ಕೈ ಸೇರಲಿದೆ.[ಮೇಡ್ ಇನ್ ಇಂಡಿಯಾ ಫ್ರೀಡಂ 251ಗೆ ಕಾಪಿರೈಟ್ ಪ್ರಾಬ್ಲಂ!]

ಹಣ ಸಂದಾಯ ಹೇಗೆ?
ಈಗಾಗಲೇ ಬುಕ್ ಮಾಡಿದ ಇಮೇಲ್ ಗೆ ಒಂದು ಸಂದೇಶ ಕಳಿಸಲಿದ್ದು ಅದರ ಮುಖಾಂತರ ಹಣ ಸಂದಾಯ ಮಾಡಬೇಕು ಎಂದು ಕಂಪನಿ ತಿಳಿಸಿದೆ. ಬಹಳಷ್ಟು ಜನ ಬುಕ್ ಮಾಡಿದ್ದರೂ ಸುರಕ್ಷತಾಕ್ರಮದ ಆಧಾರದಲ್ಲಿ ಹಣ ಪಾವತಿ ಮಾಡಬೇಕೋ ಅಥವಾ ಬಿಡಬೇಕೋ ಎಂಬುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The smartphone's website has been plagued with problems since the day of the launch owing to which the excitement around the phone seems to be fizzling out. Despite attempts of book the phone through company's websitehttp://www.freedom251.com/, we were led to the cart page, but the cart page didn't open despite several attempts.
Please Wait while comments are loading...