ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್ ರೀಟೇಲ್‌ನಲ್ಲಿ 47,265 ಕೋಟಿ ರೂಪಾಯಿ ಸಂಗ್ರಹ

|
Google Oneindia Kannada News

ಮುಂಬೈ, ನ 20: ಉದ್ಯಮಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ("ರಿಲಯನ್ಸ್ ಇಂಡಸ್ಟ್ರೀಸ್") ಹಾಗೂ ಡಿಜಿಟಲ್ ಸೇವೆಗಳ ವೇದಿಕೆ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ("ಜಿಯೋ ಪ್ಲಾಟ್‌ಫಾರ್ಮ್ಸ್") ಸಂಪೂರ್ಣ ಸಾಲಮುಕ್ತ ಸಂಸ್ಥೆ ಎನಿಸಿಕೊಂಡು ಐದು ತಿಂಗಳುಗಳೇ ಕಳೆದಿವೆ.

ಮಾರ್ಚ್ 31, 2021ರೊಳಗೆ ಈ ಗುರಿ ಮುಟ್ಟಲಾಗುವುದು ಎಂದಿದ್ದ ಮುಖೇಶ್ 2020ರ ಜೂನ್ ತಿಂಗಳಲ್ಲೇ ಈ ಸಾಧನೆ ಮಾಡಿದ್ದಾರೆ. ಜೊತೆಗೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (RRVL)ನಿಂದ ಸಹಭಾಗಿಗಳ ಸೇರ್ಪಡೆ ಹಾಗೂ ಹಣ ಸಂಗ್ರಹವೂ ಮುಕ್ತಾಯವಾಗಿದೆ. ರಿಲಯನ್ಸ್ ರೀಟೇಲ್ ವೆಂಚರ್ಸ್ ಒಟ್ಟಾರೆಯಾಗಿ 69,27,81,234 ಈಕ್ವಿಟಿ ಷೇರುಗಳನ್ನು ವಿತರಿಸಿ, 47,265 ಕೋಟಿ ರೂಪಾಯಿಯನ್ನು ಸಂಗ್ರಹಿಸಿದೆ.

ರಿಲಯನ್ಸ್ ರೀಟೇಲ್ ವೆಂಚರ್ಸ್ ನಲ್ಲಿ ಫುಲ್ಲಿ ಡೈಲ್ಯೂಟೆಡ್ ಆಧಾರದಲ್ಲಿ ಈಕ್ವಿಟಿ ಷೇರುಗಳ ವಿತರಣೆ ಮಾಡಲಾಗಿದ್ದು, ಯಾವ ಕಂಪೆನಿ, ಎಷ್ಟು ಮೊತ್ತ, ಯಾವ ದಿನಾಂಕ ಹಾಗೂ ಆ ಷೇರಿನ ಪ್ರಮಾಣ ಎಷ್ಟು ಎಂಬ ಮಾಹಿತಿ ಮುಂದಿದೆ...

ಇಶಾ ಮುಕೇಶ್ ಅಂಬಾನಿ ಮಾತನಾಡಿ

ಇಶಾ ಮುಕೇಶ್ ಅಂಬಾನಿ ಮಾತನಾಡಿ

ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಿರ್ದೇಶಕಿ ಇಶಾ ಮುಕೇಶ್ ಅಂಬಾನಿ ಮಾತನಾಡಿ, ರಿಲಯನ್ಸ್ ರೀಟೇಲ್ ವೆಂಚರ್ಸ್ ನಲ್ಲಿ ಇಂಥ ಪ್ರಬಲ ಹಾಗೂ ಗೌರವಾನ್ವಿತ ಸಹಭಾಗಿಗಳನ್ನು ಹೊಂದಿರುವುದಕ್ಕೆ ಹೆಮ್ಮೆ ಆಗುತ್ತದೆ. ನಮ್ಮ ಉದ್ಯಮದ ಬಗ್ಗೆ ಹೂಡಿಕೆದಾರರು ಇಂಥ ಅಭೂತಪೂರ್ವ ಆಸಕ್ತಿ ತೋರಿರುವುದು ನಮಗೆ ಸಿಕ್ಕ ಗೌರವ ಎನಿಸುತ್ತದೆ. ಜಾಗತಿಕ ಸಂಪರ್ಕ ಹಾಗೂ ಅವರ ಅನುಭವದ ಅನುಕೂಲ ಪಡೆದು ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ. ಹೊಸ ವಾಣಿಜ್ಯ ವ್ಯವಹಾರಗಳ ಮೇಲೆ ನಮ್ಮ ಗಮನ ಇದ್ದು, ಹತ್ತಾರು ಲಕ್ಷ ವರ್ತಕರು ಹಾಗೂ ಕಿರು, ಸಣ್ಣ ಮತ್ತು ಮಧ್ಯಮ ಸಂಸ್ಥೆಗಳನ್ನು ಬಲಪಡಿಸುವ ಮೂಲಕ ಭಾರತದ ರೀಟೇಲ್ ವಲಯದಲ್ಲಿ ಬದಲಾವಣೆ ತರುವುದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

ಜೂನ ತಿಂಗಳಲ್ಲೇ ಸಾಲಮುಕ್ತರಾದ ಮುಖೇಶ್

ಜೂನ ತಿಂಗಳಲ್ಲೇ ಸಾಲಮುಕ್ತರಾದ ಮುಖೇಶ್

ಏಪ್ರಿಲ್ 22, 2020ರಿಂದ ಇಲ್ಲಿಯವರೆಗಿನ ಅವಧಿಯಲ್ಲಿ ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಾದಲ, ಎಡಿಐಎ, ಟಿಪಿಜಿ, ಎಲ್ ಕ್ಯಾಟರ್‌ಟನ್ ಹಾಗೂ ಪಿಐಎಫ್ ಸೇರಿದಂತೆ ಮುಂಚೂಣಿ ಜಾಗತಿಕ ಹೂಡಿಕೆದಾರರಿಂದ ಜಿಯೋ ಪ್ಲಾಟ್‌ಫಾರ್ಮ್ಸ್ ₹115,693.95 ರೂ.ಗಳ ಹೂಡಿಕೆ ಪಡೆದುಕೊಂಡಂತಾಗಿದೆ. ಇದಲ್ಲದೆ RIL ಹಕ್ಕುಗಳ ಷೇರು ನೀಡಿಕೆ ಮೂಲಕ ₹ 53,124.20 ಕೋಟಿ ರು ಗಳಿಸಿದೆ.ಜೊತೆಗೆ ಬ್ರಿಟಿಷ್ ಪೆಟ್ರೋಲಿಯಂ ರೀಟೇಲ್ ಜೊತೆಗಿನ ಸಹಭಾಗಿತ್ವದಲ್ಲಿ 1.75 ಲಕ್ಷ ಕೋಟಿ ಹೂಡಿಕೆ ಕಂಡಿದ್ದಾರೆ.

ಡಿಜಿಟಲ್ ಇಂಡಿಯಾವನ್ನು ಸಾಧ್ಯವಾಗಿಸಿದ ಜಿಯೋ

ಡಿಜಿಟಲ್ ಇಂಡಿಯಾವನ್ನು ಸಾಧ್ಯವಾಗಿಸಿದ ಜಿಯೋ

ಬ್ರಾಡ್‌ಬ್ಯಾಂಡ್ ಸಂಪರ್ಕ, ಸ್ಮಾರ್ಟ್ ಸಾಧನಗಳು, ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್, ಬಿಗ್ ಡೇಟಾ ಅನಲಿಟಿಕ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಇಂಟರ್‌ನೆಟ್ ಆಫ್ ಥಿಂಗ್ಸ್, ಆಗ್ಮೆಂಟೆಡ್ ಮತ್ತು ಮಿಕ್ಸೆಡ್ ರಿಯಾಲಿಟಿ ಹಾಗೂ ಬ್ಲಾಕ್‌ಚೈನ್‌ನಂತಹ ಮುಂಚೂಣಿ ತಂತ್ರಜ್ಞಾನಗಳಿಂದ ಚಾಲಿತವಾಗಿರುವ ತನ್ನ ಡಿಜಿಟಲ್ ಇಕೋಸಿಸ್ಟಂನಾದ್ಯಂತ ಜಿಯೋ ಪ್ಲಾಟ್‌ಫಾರ್ಮ್ಸ್ ಗಮನಾರ್ಹ ಹೂಡಿಕೆಗಳನ್ನು ಮಾಡಿದೆ. ಒಳಗೊಳ್ಳುವ ಬೆಳವಣಿಗೆಯ ಫಲಗಳನ್ನು ಎಲ್ಲರೂ ಆನಂದಿಸುವಂತೆ ಮಾಡಲು, ಸಣ್ಣ ವರ್ತಕರು, ಅತಿಸಣ್ಣ ಉದ್ಯಮಗಳು ಹಾಗೂ ರೈತರೂ ಸೇರಿದಂತೆ ಭಾರತದಾದ್ಯಂತ 1.3 ಶತಕೋಟಿ ಜನರು ಹಾಗೂ ಉದ್ಯಮಗಳಿಗೆ ಡಿಜಿಟಲ್ ಇಂಡಿಯಾವನ್ನು ಸಾಧ್ಯವಾಗಿಸುವುದು ಜಿಯೋದ ದೂರದೃಷ್ಟಿಯಾಗಿದೆ.

ಎರಡನೇ ತ್ರೈಮಾಸಿಕದಲ್ಲಿ ರಿಲಯನ್ಸ್

ಎರಡನೇ ತ್ರೈಮಾಸಿಕದಲ್ಲಿ ರಿಲಯನ್ಸ್

ಸೆಪ್ಟೆಂಬರ್ 30, 2020ಕ್ಕೆ ಅಂತ್ಯವಾದ ಆರ್ಥಿಕ ವರ್ಷ 2020-21ರ ಎರಡನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ಗೆ 10,602 ರೂ. ನಿವ್ವಳ ಲಾಭವಾಗಿದ್ದು, ಕಳೆದ ತ್ರೈಮಾಸಿಕದ ಹೋಲಿಕೆಯಲ್ಲಿ (ಎಕ್ಸೆಪ್ಷನಲ್ ಐಟಮ್‌ಗೆ ಮೊದಲು) ಇದು ಶೇ. 28ರಷ್ಟು ಏರಿಕೆ ಕಂಡಿದೆ. ಆದರೆ ವರ್ಷದಿಂದ ವರ್ಷಕ್ಕೆ ಹೋಲಿಕೆಯಲ್ಲಿ ನಿವ್ವಳ ಲಾಭ ಶೇ 15ರಷ್ಟು ಕುಸಿತವಾಗಿದೆ. ಕಳೆದ ವರ್ಷ 11,352 ಕೋಟಿ ರು ಗಳಿಕೆಯಾಗಿತ್ತು. ಈ ಅವಧಿಯಲ್ಲಿ ಸಂಸ್ಥೆಯ ಒಟ್ಟು ಆದಾಯ 128,385 ಕೋಟಿ ರೂ.ಗಳಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 165,228 ಕೋಟಿ ರು ಆದಾಯ ಬಂದಿತ್ತು. ಬಡ್ಡಿ, ತೆರಿಗೆ, ಡಿಪ್ರಿಸಿಯೇಶನ್ ಹಾಗೂ ಅಮಾರ್ಟೈಸೇಶನ್‌ಗಳ ಮೊದಲಿನ ಆದಾಯವು (EBITDA) ಈ ತ್ರೈಮಾಸಿಕದಲ್ಲಿ 23,299 ಕೋಟಿ ರೂ.ಗಳಷ್ಟಿದೆ.

Recommended Video

ICC World Test Championship : ದಿಢೀರ್ ಎರಡನೇ ಸ್ಥಾನಕ್ಕೆ ಕುಸಿದ ಭಾರತ ತಂಡ !! | Oneindia Kannada
ಯಾವ ಕಂಪೆನಿ, ಎಷ್ಟು ಮೊತ್ತ, ಯಾವ ದಿನಾಂಕ

ಯಾವ ಕಂಪೆನಿ, ಎಷ್ಟು ಮೊತ್ತ, ಯಾವ ದಿನಾಂಕ

ರಿಲಯನ್ಸ್ ರೀಟೇಲ್ ವೆಂಚರ್ಸ್ ನಲ್ಲಿ ಫುಲ್ಲಿ ಡೈಲ್ಯೂಟೆಡ್ ಆಧಾರದಲ್ಲಿ ಈಕ್ವಿಟಿ ಷೇರುಗಳ ವಿತರಣೆ ಮಾಡಲಾಗಿದ್ದು, ಯಾವ ಕಂಪೆನಿ, ಎಷ್ಟು ಮೊತ್ತ, ಯಾವ ದಿನಾಂಕ ಹಾಗೂ ಆ ಷೇರಿನ ಪ್ರಮಾಣ ಎಷ್ಟು

ಕ್ರಮ ಸಂಖ್ಯೆ ಹೂಡಿಕೆದಾರರು ಹೂಡಿಕೆ ದಿನಾಂಕ ಹೂಡಿಕೆ ಮೊತ್ತ(₹ಕೋಟಿಗಳಲ್ಲಿ) ಷೇರಿನ ಪಾಲು (ಪೂರ್ತಿ ಡೈಲ್ಯೂಟೆಡ್ ಆಧಾರದಲ್ಲಿ)
01 ಸಿಲ್ವರ್ ಲೇಕ್ ಪಾರ್ಟನರ್ಸ್ 25-Sep-20 7,500.00 1.60%
02 ಸಿಲ್ವರ್ ಲೇಕ್ ಪಾರ್ಟನರ್ಸ್ ಸಹ ಹೂಡಿಕೆದಾರರು 9-Oct-20 1,875.00 0.40%
03 ಕೆಕೆಆರ್ 14-Oct-20 5,550.00 1.19%
04 ಮುಬದಾಲ 15-Oct-20 6,247.50 1.33%
05 ಎಡಿಐಎ 15-Oct-20 5,512.50 1.18%
06 ಜಿಐಸಿ 16-Oct-20 5,512.50 1.18%
07 ಟಿಪಿಜಿ 19-Oct-20 1,837.50 0.39%
08 ಜನರಲ್ ಅಟ್ಲಾಂಟಿಕ್ 21-Oct-20 3,675.00 0.78%
09 ಪಿಐಎಫ್ 9-Nov-20 9,555.00 2.04%
ಒಟ್ಟು 47,265.00 10.09%

English summary
Reliance Retail ventures Limited completes fund raise of ₹ 47,265 Crore for 10.09% stake in the company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X