ರಿಲಯನ್ಸ್ ಫ್ಯೂಚರ್ ಡಿವೈಎಸ್ ಲೈಫ್ ಎಫ್1 ಬಿಡುಗಡೆ

Posted By:
Subscribe to Oneindia Kannada

ಮುಂಬೈ, ಅಕ್ಟೋಬರ್ 25: ರಿಲಯನ್ಸ್ ರಿಟೈಲ್ ಲೈಫ್ ಸ್ಮಾರ್ಟ್‍ಫೋನ್+ನ ಒಂದು ವಿಶೇಷ ಆವೃತ್ತಿಯ ಭವಿಷ್ಯ-ಸಿದ್ಧವಾದ ಡಿವೈಸ್, ಲೈಫ್ ಎಫ್1 ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದೆ.

ಎಫ್1 ಅನ್ನು ಭಾರತೀಯ ನಟಿ ಮತ್ತು ಮಾಡೆಲ್ ಜೆನಿಲಿಯಾ ಡಿಸೋಜಾ ಅವರು ಮುಂಬೈನ ಪ್ರಭಾದೇವಿಯಲ್ಲಿನ ರಿಲಯನ್ಸ್ ಡಿಜಿಟಲ್ ಮಳಿಗೆಯಲ್ಲಿ ಅನಾವರಣಗೊಳಿಸಿದರು. [ಕೈಗೆಟಕುವ ಬೆಲೆಯಲ್ಲಿ ರಿಲಯನ್ಸ್ ನಿಂದ 4ಜಿ ಸ್ಮಾರ್ಟ್ ಫೋನ್]

ಎಲ್ಲಾ ಬೆಲೆ ವಿಭಾಗಗಳ ಸ್ಮಾರ್ಟ್‍ಫೋನ್ ಗಳಲ್ಲಿ ವೋಲ್ಟೆಯನ್ನು ಪರಿಚಯಿಸುವುದರಿಂದ, ಸುಧಾರಿತ ವೈಶಿಷ್ಟ್ಯಗಳಾದ ಡ್ಯುಯಲ್ ಕ್ಯಾಮರಾ, ಸ್ಮಾರ್ಟ್ ಸನ್ನೆಗಳು ಮತ್ತು ಧ್ವನಿ ಕಮಾಂಡ್ ನಿಯಂತ್ರಣಗಳನ್ನು ಆಫರ್ ಮಾಡುವ ತನಕ, ಲೈಫ್ ಸ್ಮಾರ್ಟ್ ಫೋನ್ ತಂತ್ರಜ್ಞಾನದಲ್ಲಿನ ಸ್ಥಿತ್ಯಂತರದ ಮುಂಚೂಣಿಯನ್ನು ವಹಿಸಿದೆ. [ಜಿಯೋ ಗ್ರಾಹಕರಿಗೆ ಐಫೋನಿನಲ್ಲಿ ಇಂಟರ್ನೆಟ್ ಉಚಿತ]


ಎಫ್1ನೊಂದಿಗೆ, ಲೈಫ್ ಒಂದು ಭವಿಷ್ಯ ಸಿದ್ಧವಾದ ಡಿವೈಸ್ ಅನ್ನು ವಿನ್ಯಾಸಗೊಳಿಸಿದ್ದು, ಇದು ಸುಧಾರಿತ ನೆಟ್‍ವರ್ಕ್ ಗಳಲ್ಲಿ ಉತ್ಕೃಷ್ಟ ಅನುಭವವನ್ನು ಒದಗಿಸಲಿದೆ.

ಕ್ಯಾರಿಯರ್ ಅಗ್ರಿಗೇಶನ್ (ಸಿಎ)ನ ಬೆಂಬಲದೊಂದಿಗೆ ಸುಸಜ್ಜಿತಗೊಂಡಿರುವ, ಲೈಫ್ ಎಫ್1, ವಿಶ್ವದ ಅತಿದೊಡ್ಡ ಎಲ್ಲಾ-ಐಪಿ ನೆಟ್‍ವರ್ಕ್ ಆಗಿರುವ ಜಿಯೋದ ಸಾಮರ್ಥ್ಯವನ್ನು ಸಂಪೂರ್ಣವಾಗಿ ಹೊಂದಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಸಿಎ ತಂತ್ರಜ್ಞಾನವು ಬಳಕೆದಾರರಿಗೆ ಅತ್ಯಂತ ಸುಧಾರಿತ ದರದ ಡಾಟಾ ವರ್ಗಾವಣೆ ಮತ್ತು ಹೋಲಿಸಲಾಗದ ಬ್ರೌಸಿಂಗ್ ಅನುಭವವನ್ನು ಒದಗಿಸುತ್ತದೆ. ಈ ವೈಶಿಷ್ಟ್ಯವು ಬ್ಯಾಟರಿ ಬಾಳ್ವಿಕೆಯನ್ನು ಹೆಚ್ಚಿಸುತ್ತದೆ.

ಇಷ್ಟೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿರುವ ಲೈಫ್ ಎಫ್1 ಊಹಿಲಸಾಧ್ಯವಾದ 13,399 ರೂ.ಗೆ ಲಭ್ಯ. ಇದನ್ನು ನಂಬಬೇಕಾದರೆ, ನೀವು ಇದರ ಅನುಭವ ಹೊಂದಲೇಬೇಕು.

1900 ಮಳಿಗೆಗಳನ್ನು ಹೊಂದಿರುವ ರಿಲಯನ್ಸ್

1900 ಮಳಿಗೆಗಳನ್ನು ಹೊಂದಿರುವ ರಿಲಯನ್ಸ್

ಭಾರತದಾದ್ಯಂತ 1900 ಮಳಿಗೆಗಳನ್ನು ಹೊಂದಿರುವ ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ರಿಟೈಲರ್, ರಿಲಯನ್ಸ್ ಡಿಜಿಟಲ್ ಈ ಕಾರ್ಯಕ್ರಮವನ್ನು ಆಯೋಜಿಸಿತು. ಲೈಫ್ ಎಫ್1 ಸ್ಮಾರ್ಟ್‍ಫೋನ್+ ನ ಪ್ರದರ್ಶನವು ಹೊಚ್ಚಹೊಸ ಮತ್ತು ಮುಂಚೂಣಿ ಗ್ರಾಹಕ ತಂತ್ರಜ್ಞಾನವನ್ನು ಮೊದಲು ಭಾರತೀಯ ಗ್ರಾಹಕರಿಗೆ ತರುವ ರಿಟೈಲರ್ ದೈತ್ಯನ ಮೂಲ ಮೌಲ್ಯ ಪ್ರತಿಪಾದನೆಗೆ ಹೊಂದಿಕೊಳ್ಳುತ್ತದೆ.

ರಿಲಯನ್ಸ್ ರಿಟೈಲ್ ಲಿಮಿಟೆಡ್ ಬಗ್ಗೆ

ರಿಲಯನ್ಸ್ ರಿಟೈಲ್ ಲಿಮಿಟೆಡ್ ಬಗ್ಗೆ

ರಿಲಯನ್ಸ್ ರಿಟೈಲ್ ಲಿಮಿಟೆಡ್ (ಆರ್‍ಆರ್‍ಎಲ್), ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‍ನ ಅಂಗಸಂಸ್ಥೆಯಾಗಿದ್ದು 2006ರ ನವೆಂಬರ್‍ನಲ್ಲಿ ತನ್ನ ಮೊದಲ ಮಳಿಗೆಯನ್ನು ತೆರೆಯಿತು ಮತ್ತು 2016ರ ಸೆಪ್ಟೆಂಬರ್ 30ರ ವೇಳೆಗೆ 679 ನಗರಗಳಲ್ಲಿ 13 ಮಿಲಿಯನ್ ಚದರ ಅಡಿಗೂ ಹೆಚ್ಚು ವ್ಯಾಪ್ತಿಯ 3,442 ಮಳಿಗೆಗಳಿಗೆ ಬೆಳೆದಿದೆ. ರಿಲಯನ್ಸ್ ರಿಟೈಲ್ ಭಾರತದ ಅತಿದೊಡ್ಡ ರಿಟೈಲರ್ ಆಗಿದ್ದು, ಇದು ವಿವಿಧ ಕೇಂದ್ರೀಕೃತ ಕ್ಷೇತ್ರಗಳಾದ್ಯಂತ ನಾಯಕತ್ವ ಸ್ಥಿತಿಯನ್ನು ಸ್ಥಾಪಿಸಿದೆ.

ಎಫ್1 ಉನ್ನತ ಸಂವಹನ ಸೇವೆ- ವಿಕಸಿತ ಸಂದೇಶ ಸೇವೆ

ಎಫ್1 ಉನ್ನತ ಸಂವಹನ ಸೇವೆ- ವಿಕಸಿತ ಸಂದೇಶ ಸೇವೆ

ಎಫ್1 ಉನ್ನತ ಸಂವಹನ ಸೇವೆ- ವಿಕಸಿತ ಸಂದೇಶ ಸೇವೆಗಳು ಮತ್ತು ಉತ್ಕೃಷ್ಟ ಕರೆ ವೈಶಿಷ್ಟ್ಯದೊಂದಿಗೆ ಸುಸಜ್ಜಿತವಾಗಿದೆ. ವಿಕಸಿತ ಸಂದೇಶ ವೈಶಿಷ್ಟ್ಯವು ಎಲ್‍ಟಿಇ ನೆಟ್ ವರ್ಕ್ ನಲ್ಲಿ ಪ್ರಸ್ತುತವಿರುವ ಎಸ್‍ಎಂಎಸ್ ವೈಶಿಷ್ಟ್ಯದ ಒಂದು ವರ್ಧನೆಯಾಗಿದ್ದು, ಇದು ಗುಂಪು ಚಾಟ್, ಫೈಲ್ ಮತ್ತು ಲೊಕೇಶನ್ ಹಂಚಿಕೊಳ್ಳುವಿಕೆಗೆ ಅವಕಾಶ ನೀಡುತ್ತದೆ, ಜತೆಗೆ ಹಳೆಯ ಸಿಮ್ ಆಧಾರಿತ ಸಂದೇಶ ರವಾನೆಯೂ ಇರಲಿದೆ. ಉತ್ಕೃಷ್ಟ ಕರೆಯು ಬಳಕೆದಾರರಿಗೆ ಲೊಕೇಶನ್, ಚಿತ್ರ, ತುರ್ತು ಮತ್ತು ಕಸ್ಟಮೈಝ್ ಸಂದೇಶವನ್ನು ಸೇರ್ಪಡೆಗೊಳಿಸುವ ಮೂಲಕ ಕರೆಯ ಸಂದರ್ಭವನ್ನು ವ್ಯವಸ್ಥೆಗೊಳಿಸುವ ಅವಕಾಶವನ್ನು ನೀಡುತ್ತದೆ.

 ಲೈಫ್ ಎಫ್ 1 ಸ್ಮಾರ್ಟ್‍ಫೋನ್+ ವಿಶೇಷಗಳು

ಲೈಫ್ ಎಫ್ 1 ಸ್ಮಾರ್ಟ್‍ಫೋನ್+ ವಿಶೇಷಗಳು

* 16 ಎಂಪಿ ಹಿಂಭಾಗದ ಕ್ಯಾಮರಾ ಹೊಂದಿರುವ ಲೈಫ್ ಎಫ್1 ಮಂದ ಬೆಳಕಿನ ಛಾಯಾಗ್ರಹಣಕ್ಕೂ ಅನುಕೂಲ
* 3 ಜಿಬಿ RAM ಹಾಗೂ ಉತ್ಕೃಷ್ಟ ಸ್ನಾಪ್ ಡ್ರಾಗನ್ ಪ್ರೊಸೆಸರ್ ಮತ್ತು ದಿನಪೂರ್ತಿ ಬ್ಯಾಕಪ್ ಗಾಗಿ ಶಕ್ತಿಶಾಲಿ ಬ್ಯಾಟರಿ
* 5.5 ಇಂಚ್ ಪೂರ್ಣ ಎಚ್ಡಿ ಐಪಿಎಸ್ ಡಿಸ್ ಪ್ಲೇ, ಬಿಲ್ಟ್ ಇನ್ ವೀಡಿಯೋ ಪ್ಲೇಯರ್
* ಸೈಲೆಂಟ್ ಮೋಡ್‍ನಲ್ಲಿದ್ದಾಗಲೂ ಒಂದು ಸ್ಮಾರ್ಟ್ ರಿಂಗರ್
* ಲೈಫ್ ಎಫ್1 ಸ್ಮಾರ್ಟ್‍ಫೋನ್+ ಭವಿಷ್ಯ ಸಿದ್ಧವಾದ ಜಿಯೋ ನೆಟ್‍ವರ್ಕ್ ನ ಸಂಪೂರ್ಣ ಅನುಕೂಲ ಪಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Reliance Retail today launched LYF F1, a Special Edition future-ready device from LYF Smartphone+. Special Edition device features cutting-edge technology that works best with Jio – the world’s largest all-4G network
Please Wait while comments are loading...