ಫೇಸ್ಬುಕ್, ವಾಟ್ಸಪ್ ದಾಖಲೆ ಮುರಿದ ರಿಲಯನ್ಸ್ ಜಿಯೋ

Posted By:
Subscribe to Oneindia Kannada

ಮುಂಬೈ, ಅಕ್ಟೋಬರ್ 9 2016: ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿ. (ಜಿಯೋ) ತನ್ನ ಕಾರ್ಯಾಚರಣೆಯ ಮೊದಲ ತಿಂಗಳಲ್ಲಿ (ಸೆಪ್ಟೆಂಬರ್ 2016) 16 ಮಿಲಿಯನ್ ಗೂ ಮಿಕ್ಕಿದ ಚಂದಾದಾರನ್ನು ಹೊಂದುವ ಮೂಲಕ ತಾನು ವಿಶ್ವದಾಖಲೆ ಸೃಷ್ಟಿಸಿರುವುದಾಗಿ ಇಂದು ಘೋಷಿಸಿದೆ. ಜಿಯೋ ಈ ಪ್ರಗತಿಯನ್ನು ವಿಶ್ವದಲ್ಲೇ ಯಾವುದೇ ಟೆಲಿಕಾಂ ಆಪರೇಟರ್ ಅಥವಾ ಫೇಸ್‍ಬುಕ್, ವಾಟ್ಸಪ್ ಮತ್ತು ಸ್ಕೈಪ್ನ್ ನಂಥ ಸ್ಟಾರ್ಟಪ್ ಗಿಂತಲೂ ವೇಗವಾಗಿ ಸಾಧಿಸಿದೆ.

ಮುಖೇಶ್ ಡಿ. ಅಂಬಾನಿ, ಅಧ್ಯಕ್ಷರು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾತನಾಡಿ, 'ಜಿಯೋ ವೆಲ್‍ಕಮ್ ಆಫರ್ ಗೆ ಭಾರತದಾದ್ಯಂತ ವ್ಯಕ್ತವಾಗಿರುವ ಅಭೂತಪೂರ್ವ ಪ್ರತಿಕ್ರಿಯೆಗೆ ನಾವು ಸಂತುಷ್ಟರಾಗಿದ್ದೇವೆ ಹಾಗೂ ಆಭಾರಿಗಳಾಗಿದ್ದೇವೆ.

ಪ್ರತಿಯೊಬ್ಬ ಭಾರತೀಯರನ್ನು ಡಾಟಾದ ಶಕ್ತಿಯೊಂದಿಗೆ ಸಶಕ್ತಗೊಳಿಸಲು ಜಿಯೋ ನಿರ್ಮಿಸಲಾಗಿದೆ. ಇದನ್ನು ಜನರು ಗುರುತಿಸಿರುವುದಕ್ಕೆ ಹಾಗೂ ನಮ್ಮ ಸೇವೆಗಳನ್ನು ಪೂರ್ತಿಯಾಗಿ ಉಪಯೋಗಿಸುತ್ತಿರುವುದಕ್ಕೆ ನಮಗೆ ಖುಷಿಯಾಗುತ್ತಿದೆ. ನಾವು ಗ್ರಾಹಕ-ಗೀಳು ಹೊಂದಿದ್ದೇವೆ ಮತ್ತು ನಮ್ಮ ಗ್ರಾಹಕರ ನಿರೀಕ್ಷೆಯನ್ನು ಮೀರಲು ಪ್ರತಿದಿನವೂ ಬದ್ಧರಾಗಿರುತ್ತೇವೆ'' ಎಂದು ಹೇಳಿದರು.

ಜಿಯೋ ಆಧಾರ್-ಆಧಾರಿತ ಕಾಗದ ರಹಿತ ಜಿಯೋ ಸಿಮ್ ಆಕ್ಟಿವೇಶನ್ ಅನ್ನು 3,100 ನಗರಗಳು ಹಾಗೂ ಪಟ್ಟಣಗಳಾದ್ಯಂತ ಪರಿಚಯಿಸಿದೆ. ಇದರಿಂದಾಗಿ ಗ್ರಾಹಕರು ಕೇವಲ ತಮ್ಮ ಆಧಾರ್ ನಂಬರ್ ನೊಂದಿಗೆ ಸಿಮ್ ಆಕ್ಟಿವೇಶನ್ ಪ್ರಕ್ರಿಯೆಯನ್ನು ನಿಮಿಷಗಳಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಿದೆ.

Jio Welcome Offer’ enrols 16 Million customers in 26 days

ಈ ಪ್ರಕ್ರಿಯೆಯನ್ನು ದೇಶಾದ್ಯಂತ ವಿಸ್ತರಿಸಲಾಗುತ್ತದೆ ಮತ್ತು ಮುಂದಿನ ಕೆಲ ವಾರಗಳಲ್ಲಿ ಸಂತೃಪ್ತ ಆನ್-ಬೋರ್ಡಿಂಗ್ ಅನುಭವಕ್ಕಾಗಿ ಸಂಪೂರ್ಣ ಸ್ಥಿರತೆಯನ್ನು ಒದಗಿಸಲಾಗುತ್ತದೆ.

ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಬಗ್ಗೆ: ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ('ಜಿಯೋ'), ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ('ಆರ್‍ಐಎಲ್'), ಅಂಗಸಂಸ್ಥೆಯಾಗಿದ್ದು, ಇದು ಹೊಚ್ಚಹೊಸ 4ಜಿ ಎಲ್ಟಿಇ ತಂತ್ರಜ್ಞಾನದೊಂದಿಗೆ ವಿಶ್ವದರ್ಜೆಯ ಎಲ್ಲಾ-ಐಪಿ ಡಾಟಾ ಬಲಿಷ್ಠ ಭವಿಷ್ಯ ಪುರಾವೆ ನೆಟ್‍ವರ್ಕ್ ಅನ್ನು ನಿರ್ಮಿಸಿದೆ.

ಇದು ಗ್ರೌಂಡ್‍ಅಪ್ ನಿಂದ ಮೊಬೈಲ್ ವೀಡಿಯೋ ನೆಟ್‍ವರ್ಕ್ ಆಗಿ ಹುಟ್ಟಿಕೊಂಡ ಮತ್ತು ವಾಯ್ಸ್ ಓವರ್ ಎಲ್‍ಟಿಇ ತಂತ್ರಜ್ಞಾನವನ್ನು ಬೆಂಬಲಿಸುವ ಏಕೈಕ ನೆಟ್‍ವರ್ಕ್ ಆಗಿದೆ.

ತಂತ್ರಜ್ಞಾನಗಳು 5ಜಿ, 6ಜಿ ಮತ್ತು ಅದರಿಂದಾಚೆಗೆ ಮುಂದುವರಿದಂತೆ, ಇದು ಭವಿಷ್ಯ ಸಿದ್ಧವಾಗಿದೆ ಮತ್ತು ಸುಲಭವಾಗಿ ಹೆಚ್ಚು ಡಾಟಾ ಬೆಂಬಲಕ್ಕಾಗಿ ಅಪ್ಗ್ರೇಡ್ ಗೊಳಿಸಬಹುದು.

ಜಿಯೋ ಭಾರತೀಯ ಡಿಜಿಟಲ್ ಸೇವಾ ಕ್ಷೇತ್ರದಲ್ಲಿ ರೂಪಾಂತರದ ಬದಲಾವಣೆಗಳನ್ನು ತರಲಿದ್ದು, 1.2 ಬಿಲಿಯನ್ ಭಾರತೀಯರಿಗೆ ಡಿಜಿಟಲ್ ಇಂಡಿಯಾವನ್ನು ಸಾಧ್ಯವಾಗಿಸುವ ಮತ್ತು ಡಿಜಿಟಲ್ ಆರ್ಥಿಕತೆಯಲ್ಲಿ ಜಾಗತಿಕ ನಾಯಕತ್ವಕ್ಕೆ ಭಾರತವನ್ನು ತಿರುಗಿಸುವ ಗುರಿ ಹೊಂದಿದೆ. ಇದು ನೆಟ್‍ವರ್ಕ್, ಡಿವೈಸ್ ಗಳು, ಅಪ್ಲಿಕೇಶನ್ ಗಳು ಮತ್ತು ವಿಷಯಗಳು, ಸೇವಾ ಅನುಭವ ಮತ್ತು ಜಿಯೋ ಡಿಜಿಟಲ್ ಲೈಫ್‍ನಲ್ಲಿ ಬದುಕಲು ಪ್ರತಿಯೊಬ್ಬರ ಕೈಗೆಟಕುವ ಟ್ಯಾರಿಫ್ ಗಳನ್ನು ಒಳಗೊಂಡ ಒಂದು ವ್ಯವಸ್ಥೆಯನ್ನು ಸೃಷ್ಟಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
'Reliance Jio Infocomm Ltd. (Jio) announced today that it has created a world record by crossing 16 Million subscribers in its first month of operations (September, 2016). Jio has achieved this growth faster than any other telecom operator or start up in the world including the likes of Facebook, WhatsApp and Skype.
Please Wait while comments are loading...