Repo Rate Hike : ಶೇಕಡಾ 6.25 ಕ್ಕೆ ರೆಪೋ ದರ ಹೆಚ್ಚಿಸಿದ ಆರ್‌ಬಿಐ

ನವದೆಹಲಿ, ಡಿ.07 : ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಪ್ರಮುಖ ರೆಪೋ ದರವನ್ನು 35 ಬೇಸಿಸ್ ಪಾಯಿಂಟ್‌ಗಳಿಂದ ಶೇಕಡಾ 6.25 ಕ್ಕೆ ಹೆಚ್ಚಿಸಿದೆ. ಹಣದುಬ್ಬರ ನಿಧಾನಗತಿಯನ್ನು ಉಲ್ಲೇಖಿಸಿ, ಹಣದುಬ್ಬರವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಈ ದರ ಹೆಚ್ಚಳವನ್ನು ಘೋಷಿಸಲಾಗಿದೆ.

ಆರ್‌ಬಿಐ ಈ ಹಿಂದೆಯೂ ನಾಲ್ಕು ಬಾರಿ ಆರ್‌ಬಿಐ ದಿಡೀರ್ ಆಗಿ ರೆಪೋ ದರ ಏರಿಕೆ ಮಾಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರ ನೇತೃತ್ವದಲ್ಲಿ ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ನಿರ್ಧಾರವನ್ನು ಪ್ರಕಟಿಸಿದೆ.

ಕೋವಿಡ್ ಪ್ರೇರಿತ ಲಾಕ್‌ಡೌನ್‌ನ ಪರಿಣಾಮವನ್ನು ತಗ್ಗಿಸುವ ಗುರಿಯಿಂದ ಆರ್‌ಬಿಐ ಮಾರ್ಚ್, 2020 ರಲ್ಲಿ ರೆಪೊ ದರವನ್ನು ಕಡಿತಗೊಳಿಸಿತ್ತು. ಮೇ 4, 2022 ರಂದು ರೆಪೋ ದರ ಹೆಚ್ಚಿಸುವ ಮೊದಲು ಸುಮಾರು ಎರಡು ವರ್ಷಗಳ ಕಾಲ ಆರ್‌ಬಿಐ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಮೇ ತಿಂಗಳಿನಲ್ಲಿ 40 ಮೂಲಾಂಕ ಆರ್‌ಬಿಐ ರೆಪೋ ದರವನ್ನು ಹೆಚ್ಚಿಸಿತ್ತು.

RBI raises repo rate, a key lending rate, by 35 basis points to 6.25 percent

ಆ ಬಳಿಕ ಆರ್‌ಬಿಐ ಜೂನ್‌ ತಿಂಗಳಿನಲ್ಲಿ ಮತ್ತೆ ರೆಪೋ ದರ ಹೆಚ್ಚಳ ಮಾಡಿತ್ತು. ಜೂನ್‌ನಲ್ಲಿ ರೆಪೋ ದರವನ್ನು ಆರ್‌ಬಿಐ 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡಾ 4.90ಕ್ಕೆ ತಲುಪಿತ್ತು. ಆಗಸ್ಟ್‌ನಲ್ಲಿ ಮತ್ತೆ 50 ಮೂಲಾಂಕ ಏರಿಕೆ ಮಾಡಲಾಗಿತ್ತು. ಆ ಬಳಿಕ ಸೆಪ್ಟೆಂಬರ್‌ನಲ್ಲಿ ರೆಪೋ ದರವನ್ನು 50 ಮೂಲಾಂಕ ಹೆಚ್ಚಳ ಮಾಡಲಾಗಿದೆ.

ಸ್ಥಾಯಿ ಠೇವಣಿ ಸೌಲಭ್ಯ ದರ ಮತ್ತು ಮಾರ್ಜಿನಲ್ ಸ್ಟ್ಯಾಂಡಿಂಗ್ ಸೌಲಭ್ಯ ದರವನ್ನು ಸಹ ಕ್ರಮವಾಗಿ 6.00% ಮತ್ತು 6.50% ಗೆ ಹೆಚ್ಚಿಸಲಾಗಿದೆ. ಆರ್‌ಬಿಐ ಆರ್ಥಿಕ ವರ್ಷ 23ಕ್ಕೆ ಅನ್ವಯವಾಗಿ ಗ್ರಾಹಕ ಬೆಲೆ ಸೂಚ್ಯಂಕ (CPI) ಹಣದುಬ್ಬರ ಮುನ್ಸೂಚನೆಯನ್ನು 6.7% ನಲ್ಲಿ ಕಾಯ್ದುಕೊಂಡಿದೆ. ನೈಜ ಆರ್ಥಿಕ ವರ್ಷ 23ರ ಜಿಡಿಪಿ ಮುನ್ಸೂಚನೆಯು 7% ರಿಂದ 6.8% ಕ್ಕೆ ಕಡಿಮೆಯಾಗಿದೆ.

"ಉಕ್ರೇನ್ ಯುದ್ಧವು ವಿಶ್ವ ಆರ್ಥಿಕ ದೃಷ್ಟಿಕೋನವನ್ನು ಮೂಲಭೂತವಾಗಿ ಬದಲಾಯಿಸಿದೆ. ಉದಯೋನ್ಮುಖ ದೇಶಗಳ ಮೇಲೆ ಇದು ಹೆಚ್ಚು ಪರಿಣಾಮ ಬೀರಿದೆ" ಎಂದು ಆರ್‌ಬಿಐ ಮುಖ್ಯಸ್ಥರು ಹೇಳಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+