ಸಾಲಗಾರರಿಗೆ ಗುಡ್ ನ್ಯೂಸ್! ರೆಪೋ ದರ ಬದಲಾವಣೆ ಸಾಧ್ಯತೆ ಕಡಿಮೆ
Recommended Video

ನವದೆಹಲಿ, ಡಿಸೆಂಬರ್ 03: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ)ದ ಡಿಸೆಂಬರ್ ತಿಂಗಳ ಆರ್ಥಿಕ ಪರಾಮರ್ಶೆ ಸಭೆ ಇಂದಿನಿಂದ ಆರಂಭಗೊಂಡಿದೆ. ಡಿಸೆಂಬರ್ 05ರಂದು ಹೊಸ ಮಾರ್ಗದರ್ಶಿ ಸೂತ್ರ, ಬಡ್ಡಿದರ ಬದಲಾವಣೆ, ಆರ್ಥಿಕ ಸೂಚಿಗಳು ತಿಳಿದು ಬರಲಿವೆ.
ಲಭ್ಯ ಮಾಹಿತಿಯಂತೆ ಆರ್.ಬಿಐ. ಬಡ್ಡಿ ದರದಲ್ಲಿ ಯಾವ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಹೀಗಾಗಿ, ಬ್ಯಾಂಕ್ ಗಳಲ್ಲಿ ಪಡೆದಿರುವ ಗೃಹ, ವಾಹನ ಸಾಲದ ಮೇಲಿನ ಬಡ್ಡಿ ದರ ಏರಿಕೆ ಸಂಭವ ಕಡಿಮೆ. ಸಾಲ ಪಡೆದವರು ಆತಂಕವಿಲ್ಲದೆ ಎಂದಿನಂತೆ ಇಎಂಐ ಕಟ್ಟಬಹುದು.
ಈ ಹಿಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜೂನ್ ತಿಂಗಳಿನಿಂದ ಇಲ್ಲಿ ತನಕ ಎರಡು ಬಾರಿ ಸತತಾಗಿ ರೆಪೋ ದರ ಏರಿಕೆ ಮಾಡಿದ್ದ ಕಾರಣ ಕೆಲ ಬ್ಯಾಂಕ್ ಗಳು ಗೃಹ ಮತ್ತು ವಾಹನಗಳ ಬಡ್ಡಿ ದರವನ್ನು ಏರಿಕೆ ಮಾಡಿತ್ತು. ಈ ಬಾರಿಯೂ ರೆಪೋ ದರವನ್ನು ರಿಸರ್ವ್ ಬ್ಯಾಂಕ್ ರೆಪೋ ದರವನ್ನು 25 ಮೂಲಾಂಶ ಏರಿಸಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಬ್ಯಾಂಕ್ ಗಳ ಬಡ್ಡಿ ದರ ಏರಿಕೆಯಾಗುವ ಆತಂಕ ಇತ್ತು.

ಆದರೆ, ಅಕ್ಟೋಬರ್ ತಿಂಗಳಿನಲ್ಲಿ ದೇಶದ ಆರ್ಥಿಕ ಪರಿಸ್ಥಿತಿ, ವಾಣಿಜ್ಯ ವಹಿವಾಟು ಬದಲಾಗಿದೆ. ಡಾಲರ್ ಎದುರು ರುಪಾಯಿ ಮೌಲ್ಯ ಚೇತರಿಕೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕುಸಿದು, ಪೆಟ್ರೋಲ್, ಡೀಸೆಲ್ ದರ ತಗ್ಗಿವೆ. ಸದ್ಯಕ್ಕೆ ರೆಪೋದರ ಶೇ6.50ರಂತೆ ಇದೆ.
ಡಾಲರ್ ಎದುರು ರುಪಾಯಿ 70.03 ನಂತೆ ಇದೆ. ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 60 ಯುಎಸ್ ಡಾಲರ್ ನಂತೆ ಇದೆ. ಆದರೆ, ಜಿಡಿಪಿ ಪ್ರಗತಿ ದರ ಮಾತ್ರ ಶೇ 7.1ಕ್ಕೆ ಕುಸಿದಿದೆ. ಆರ್ಥಿಕ ವರ್ಷ ಕೊನೆಗೊಳ್ಳುವ ಮಾರ್ಚ್ 2019ಕ್ಕೆ ಜಿಡಿಪಿ ಪ್ರಗತಿ ದರ ಅಂದಾಜು 7.4% ಇರುವ ಅಂದಾಜನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಡಿದೆ.












Click it and Unblock the Notifications